AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ನ್ಯಾಯಮಂಡಳಿಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಸುಪ್ರೀಂ ಮೆಟ್ಟಿಲೇರಲು ಗೂಗಲ್ ಚಿಂತನೆ

ಗೂಗಲ್ ಸ್ಪರ್ಧಾ ವಿರೋಧಿ ನೀತಿ ಅನುಸರಿಸಿದೆ ಎಂದು ಸಿಸಿಐ ಕಳೆದ ಅಕ್ಟೋಬರ್ ತಿಂಗಳಲ್ಲಿ 1,337 ಕೋಟಿ ರೂ ದಂಡ ವಿಧಿಸಿತ್ತು. ಈ ತೀರ್ಪಿಗೆ ತಡೆ ಕೊಡಲು ಎನ್ಸಿಎಲ್ಎಟಿ ನ್ಯಾಯಮಂಡಳಿ ನಿರಾಕರಿಸಿತ್ತು. ಇದೀಗ ಗೂಗಲ್ ನ್ಯಾಯ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

Google: ನ್ಯಾಯಮಂಡಳಿಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಸುಪ್ರೀಂ ಮೆಟ್ಟಿಲೇರಲು ಗೂಗಲ್ ಚಿಂತನೆ
ಗೂಗಲ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jan 06, 2023 | 12:06 PM

Share

ನವದೆಹಲಿ: ಸ್ಪರ್ಧಾತ್ಮಕತೆ ವಿರೋಧಿ ಧೋರಣೆ ಅನುಸರಿಸಿದ ಆರೋಪದ ಮೇಲೆ ತನಗೆ ದಂಡ ವಿಧಿಸಿರುವ ಭಾರತೀಯ ಸ್ಪರ್ಧಾ ಆಯೋಗದ (CCI- Competition Commission of India) ತೀರ್ಪನ್ನು ಪ್ರಶ್ನಿಸಿ ಗೂಗಲ್ ಸಂಸ್ಥೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಏರುವ ಆಲೋಚನೆಯಲ್ಲಿದೆ. ಮೊನ್ನೆಯಷ್ಟೇ (ಜ. 4ರಂದು) ರಾಷ್ಟ್ರೀಯ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (NCALT) ಸಿಸಿಐ ಆದೇಶಕ್ಕೆ ತಡೆಕೊಡಬೇಕೆಂಬ ಗೂಗಲ್ನ ಮನವಿಯನ್ನು ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಸುಪ್ರೀಂಕೋರ್ಟಿನಲ್ಲಿ ಗೂಗಲ್ ನ್ಯಾಯ ಪಡೆಯಲು ಪ್ರಯತ್ನಿಸಬಹುದು ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಸಿಐ ನೀಡಿರುವ ನಿರ್ದೇಶನದಿಂದ ತನ್ನ ವ್ಯವಹಾರ ತಂತ್ರಗಳಿಗೆ ಅಡೆಯಾಗುವುದರ ಜೊತೆಗೆ ಗ್ರಾಹಕರ ಹಿತಾಸಕ್ತಿಗೂ ಧಕ್ಕೆ ಆಗುತ್ತದೆ ಎಂಬುದು ವಿಶ್ವದ ಅಗ್ರಗಣ್ಯ ತಂತ್ರಜ್ಞಾನ ಸಂಸ್ಥೆ ಗೂಗಲ್​ನ ಅಸಮಾಧಾನವಾಗಿದೆ. ಸಿಸಿಐನ ನಿರ್ದೇಶನಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗದೇ ಬೇರೆ ದಾರಿ ಇಲ್ಲ ಎಂದು ಗೂಗಲ್ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಸಿಐ ನೀಡಿರುವ ಆದೇಶವನ್ನು ಪಾಲಿಸಲು ಗೂಗಲ್​ಗೆ ಜನವರಿ 19ರವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಈ ಆದೇಶಕ್ಕೆ ತಡೆ ತರುವುದು ಗೂಗಲ್ ಉದ್ದೇಶವಾಗಿದೆ.

ಗೂಗಲ್​ಗೆ ದಂಡ; ಏನಿದು ಪ್ರಕರಣ?

ಗೂಗಲ್ ಕಂಪನಿ ವಿರುದ್ಧ ವಿಶ್ವದ ಕೆಲ ದೇಶಗಳಲ್ಲಿ ವಿವಿಧ ಪ್ರಕರಣಗಳಿವೆ. ಭಾರತದಲ್ಲೂ ಕೆಲ ಪ್ರಕರಣಗಳಲ್ಲಿ. ಸದ್ಯ ಚಾಲ್ತಿಯಲ್ಲಿರುವ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗವು ಗೂಗಲ್​​ಗೆ 161 ಮಿಲಿಯನ್ ಡಾಲರ್ (ಸುಮಾರು 1337 ಕೋಟಿ ರೂ) ದಂಡ ವಿಧಿಸಿದೆ.

ಗೂಗಲ್ ಸ್ವಾಮ್ಯದ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯದ ಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಈ ಪ್ರಕರಣದ ಪ್ರಮುಖ ಅಂಶ.

ಇದನ್ನೂ ಓದಿ: Google: ಗೂಗಲ್​ಗೆ ಮತ್ತೆ ಹಿನ್ನಡೆ; ಶೇ 10 ದಂಡ ಪಾವತಿಸಲು ಎನ್​ಸಿಎಲ್​ಎಟಿ ಸೂಚನೆ

ಭಾರತದಲ್ಲಿರುವ ಶೇ. 97ರಷ್ಟು ಸ್ಮಾರ್ಟ್ ಫೋನ್​​​ಗಳು ಆಂಡ್ರಾಯ್ಡ್ ತಂತ್ರಾಂಶವನ್ನು ಹೊಂದಿವೆ. ಈ ಅವಲಂಬನೆಯನ್ನು ಗೂಗಲ್ ದುರುಪಯೋಗಿಸಿಕೊಳ್ಳುತ್ತಿದೆ. ಆಂಡ್ರಾಯ್ಡ್ ಸಿಸ್ಟಂನ ಲೈಸೆನ್ಸ್ ಪಡೆಯಬೇಕಾದರೆ ಗೂಗಲ್ನ ಷರುತ್ತುಗಳಿಗೆ ಒಪ್ಪಬೇಕಾಗುತ್ತದೆ. ಸ್ಮಾರ್ಟ್​ಫೋನ್​ಗಳಲ್ಲಿ ಗೂಗಲ್​​ನದ್ದೇ ಕ್ರೋಮ್, ಯೂಟ್ಯೂಬ್ ಹಾಗೂ ಇತರ ಆಪ್ ಗಳನ್ನು ಪೂರ್ವಸ್ಥಾಪನೆ (Pre-installation of Apps) ಮಾಡಬೇಕೆಂದು ಕೆಲ ಷರುತ್ತುಗಳಲ್ಲಿ ಒಂದಾಗಿದೆ. ಅಂದರೆ, ಸ್ಮಾರ್ಟ್ ಫೋನ್ ತಯಾರಕರು ತಮಗೆ ಬೇಕಾದ ಅಪ್ಲಿಕೇಶನ್ ಗಳನ್ನು ಪ್ರೀ ಇನ್​ಸ್ಟಾಲ್ ಮಾಡಲು ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಈ ಸಂಬಂಧ ಗೂಗಲ್ ವಿರುದ್ಧ ದೂರುಗಳು ವ್ಯಕ್ತವಾಗಿದ್ದವು. ಭಾರತೀಯ ಸ್ಪರ್ಧಾ ಆಯೋಗವು ಈ ದೂರಿನ ವಿಚಾರಣೆ ನಡೆಸಿ, ಗೂಗಲ್ನಿಂದ ಸ್ಪರ್ಧಾತ್ಮಕ ವಿರೋಧಿ ನೀತಿ ಅನುಸರಣೆಯಾಗುತ್ತಿದೆ ಎಂದು ತೀರ್ಮಾನಿಸಿ, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆ ಕಂಪನಿಗೆ ದಂಡ ಹಾಕುವ ತೀರ್ಪು ನೀಡಿತ್ತು.

ಇದನ್ನೂ ಓದಿ: Top Performing Airports: ಅತ್ಯುತ್ತಮ ಕಾರ್ಯನಿರ್ವಹಣೆ; ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣ

ಇಂಥದ್ದೇ ದೂರೊಂದರ ಸಂಬಂಧ 2018ರಲ್ಲಿ ಯೂರೋಪಿಯನ್ ಕಮಿಷನ್ 2018ರಲ್ಲಿ ಗೂಗಲ್ ವಿರುದ್ಧ 4.3 ಬಿಲಿಯನ್ ಡಾಲರ್ (ಸುಮಾರು 35 ಸಾವಿರ ಕೋಟಿ ರೂ) ದಂಡ ವಿಧಿಸಿತ್ತು. ಆ ಪ್ರಕರಣದಲ್ಲೂ ಗೂಗಲ್ ಸಂಸ್ಥೆ ಮೇಲಿನ ನ್ಯಾಯಾಲಯದಲ್ಲಿ ತೀರ್ಪು ಪ್ರಶ್ನಿಸಿ ಹೋಗುತ್ತಿದೆ.

ಯೂರೋಪಿಯನ್ ಕಮಿಷನ್ ನೀಡಿದ ತೀರ್ಪಿನಲ್ಲಿದ್ದ ಹಲವು ಅಂಶಗಳನ್ನು ಭಾರತೀಯ ಸ್ಪರ್ಧಾ ಆಯೋಗ ಯಥಾವತ್ತಾಗಿ ನಕಲು ಮಾಡಿ ತನ್ನ ತೀರ್ಪಿನಲ್ಲಿ ಸೇರಿಸಿದೆ ಎಂಬುದು ಗೂಗಲ್ನ ಮತ್ತೊಂದು ಆಕ್ಷೇಪಣೆಯಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ