AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top Performing Airports: ಅತ್ಯುತ್ತಮ ಕಾರ್ಯನಿರ್ವಹಣೆ; ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣ

‘ಸಿರಿಯಮ್ ಏವಿಯೇಷನ್ ಅನಾಲಿಟಿಕ್ಸ್’ ವರದಿಯ ಪ್ರಕಾರ 2022ರಲ್ಲಿ ವಿಶ್ವದಾದ್ಯಂತ ಅತ್ಯುತ್ತಮ ನಿರ್ವಹಣೆ ತೋರಿದ 10 ವಿಮಾನ ನಿಲ್ದಾಣಗಳ ಪಟ್ಟಿ ಇಲ್ಲಿದೆ. ಯುರೋಪ್​ನ ಯಾವುದೇ ವಿನಾ ನಿಲ್ದಾಣ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Top Performing Airports: ಅತ್ಯುತ್ತಮ ಕಾರ್ಯನಿರ್ವಹಣೆ; ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣ
TV9 Web
| Edited By: |

Updated on: Jan 06, 2023 | 11:49 AM

Share

ನವದೆಹಲಿ: ಜಾಗತಿಕ ಮಟ್ಟದಲ್ಲಿ 2022ರಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಎರಡನೇ ಸ್ಥಾನ ಪಡೆದುಕೊಂಡಿದೆ. ದೆಹಲಿಯ (Delhi) ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ಏಳನೇ ಸ್ಥಾನ ಪಡೆದಿರುವುದು ಪ್ರಯಾಣ ಮತ್ತು ವಿಮಾನಯಾನಕ್ಕೆ ಸಂಬಂಧಿಸಿದ ದತ್ತಾಂಶ ನಿರ್ವಹಣಾ ಕಂಪನಿ ‘ಸಿರಿಯಮ್ ಏವಿಯೇಷನ್ ಅನಾಲಿಟಿಕ್ಸ್ (Cirium Aviation Analytics)’ ವರದಿಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆದ 2,01,897 ವಿಮಾನಗಳ ಪೈಕಿ ಶೇ 84.08ರಷ್ಟು ನಿಗದಿತ ಸಮಯಕ್ಕೆ ತೆರಳಿವೆ. ದೆಹಲಿಯಿಂದ ಟೇಕಾಫ್ ಆದ 4,11,205 ವಿಮಾನಗಳ ಪೈಕಿ ಶೇಕಡಾ 81.84ರಷ್ಟು ನಿಗದಿತ ಸಮಯಕ್ಕೆ ನಿರ್ಗಮಿಸಿವೆ.

‘ಕೋವಿಡ್ ಸಾಂಕ್ರಾಮಿಕದಿಂದಾಗಿ ಹಲವು ಬಾರಿ ವಿಮಾನಯಾನ ಸಂಸ್ಥೆಗಳು ಹಿನ್ನಡೆ ಅನುಭವಿಸಿದ್ದವು. ವಿಮಾನಯಾನ ವಲಯ ಚೇತರಿಕೆ ಕಾಣುತ್ತಿದ್ದಂತೆಯೇ ಹೊಸ ಹೊಸ ಕೋವಿಡ್ ರೂಪಾಂತರಗಳು ಆತಂಕ ಸೃಷ್ಟಿಸಿದ್ದವು. ಹೀಗಾಗಿ 2022ರಲ್ಲಿ ಬೇಡಿಕೆಯಲ್ಲಿ ಹಠಾತ್ ಹೆಚ್ಚಳ ನಿರೀಕ್ಷಿಸಲು ವಿಮಾನಯಾನ ಸಂಸ್ಥೆಗಳಿಗೆ ಸಾಧ್ಯವಿರಲಿಲ್ಲ. ಅಂತಿಮವಾಗಿ 2022ರ ಕೊನೆಗಾಗುವಾಗ ಚೇತರಿಕೆ ಕಂಡಿತು’ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ITR U: ಗಡುವಿನ ಒಳಗೆ ಐಟಿಆರ್ ಸಲ್ಲಿಸಿಲ್ಲವೇ? ಅಪ್​ಡೇಟ್​ಗೆ ಇನ್ನೂ ಇದೆ ಅವಕಾಶ; ಆದರೆ…

ವಿಮಾನಯಾನ ಉದ್ಯಮ ಸದ್ಯ ಚೇತರಿಕೆ ಕಾಣುತ್ತಿದ್ದು, ಉದ್ಯೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2023ರಲ್ಲಿ ಇನ್ನಷ್ಟು ಚೇತರಿಕೆ ಕಾಣಲಿದೆ ಎಂದು ವರದಿ ತಿಳಿಸಿದೆ.

ಅತ್ಯುತ್ತಮ ಕಾರ್ಯನಿರ್ವಹಣೆಯ ವಿಮಾನ ನಿಲ್ದಾಣಗಳು

‘ಸಿರಿಯಮ್ ಏವಿಯೇಷನ್ ಅನಾಲಿಟಿಕ್ಸ್’ ವರದಿಯ ಪ್ರಕಾರ 2022ರಲ್ಲಿ ವಿಶ್ವದಾದ್ಯಂತ ಅತ್ಯುತ್ತಮ ನಿರ್ವಹಣೆ ತೋರಿದ 10 ವಿಮಾನ ನಿಲ್ದಾಣಗಳ ಪಟ್ಟಿ ಇಲ್ಲಿದೆ. ಯುರೋಪ್​ನ ಯಾವುದೇ ವಿನಾ ನಿಲ್ದಾಣ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

  1. ಹನೆಡಾ ವಿಮಾನ ನಿಲ್ದಾಣ, ಟೋಕಿಯೊ
  2. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು
  3. ಸಾಲ್ಟ್ ಲೇಕ್ ಸಿಟಿ ಇಂಟರ್​ನ್ಯಾಷನಲ್ ಏರ್​ಪೋರ್ಟ್, ಉಟಾ, ಅಮೆರಿಕ
  4. ಡೆಟ್ರಾಯಿಟ್ ಮೆಟ್ರೋಪಾಲಿಟನ್ ವೇಯ್ನ್ ಕೌಂಟಿ ವಿಮಾನ ನಿಲ್ದಾಣ, ಮಿಖಿಗೇನ್, ಅಮೆರಿಕ
  5. ಫಿಲಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪೆನ್ಸಿಲ್​ವೇನಿಯಾ, ಅಮೆರಿಕ
  6. ಮಿನ್ನಿಯಾಪೋಲಿಸ್ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನೆಸೋಟ, ಅಮೆರಿಕ
  7. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ
  8. ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವಾಷಿಂಗ್ಟನ್, ಅಮೆರಿಕ
  9. ಎಲ್ ಡೊರಾಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೊಗೊಟ
  10. ಷಾರ್ಲೆಟ್ ಡೌಗ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರ ಕೆರೊಲಿನಾ, ಅಮೆರಿಕ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ