ITR U: ಗಡುವಿನ ಒಳಗೆ ಐಟಿಆರ್ ಸಲ್ಲಿಸಿಲ್ಲವೇ? ಅಪ್​ಡೇಟ್​ಗೆ ಇನ್ನೂ ಇದೆ ಅವಕಾಶ; ಆದರೆ…

ಈ ಅವಕಾಶವನ್ನು 2022ರ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ನೀಡಿದೆ. ಇದರಂತೆ, ಸಂಬಂಧಿತ ಮೌಲ್ಯಮಾಪನ ವರ್ಷದ ಕೊನೆಯ ದಿನದಿಂದ 24 ತಿಂಗಳವರೆಗೆ ಐಟಿಆರ್ ಯು ಸಲ್ಲಿಸಬಹುದಾಗಿದೆ.

ITR U: ಗಡುವಿನ ಒಳಗೆ ಐಟಿಆರ್ ಸಲ್ಲಿಸಿಲ್ಲವೇ? ಅಪ್​ಡೇಟ್​ಗೆ ಇನ್ನೂ ಇದೆ ಅವಕಾಶ; ಆದರೆ...
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 06, 2023 | 10:50 AM

2021-22ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (IT Returns) ಸಲ್ಲಿಕೆಯ ಅಂತಿಮ ಗಡುವು ಡಿಸೆಂಬರ್ 31ರಂದು ಕೊನೆಗೊಂಡಿದೆ. ಗಡುವಿಗೂ ಮುನ್ನ ಐಟಿಆರ್ ಸಲ್ಲಿಸಲು ಸಾಧ್ಯವಾಗದವರಿಗೆ ಅಪ್​ಡೇಟೆಡ್ ಟ್ಯಾಕ್ಸ್ ರಿಟರ್ನ್ಸ್ ಅಥವಾ ಐಟಿಆರ್ ಯು (ITR U) ಸಲ್ಲಿಸಲು ಅವಕಾಶವಿದೆ. ಈ ಅವಕಾಶವನ್ನು 2022ರ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ನೀಡಿದೆ. ಇದರಂತೆ, ಸಂಬಂಧಿತ ಮೌಲ್ಯಮಾಪನ ವರ್ಷದ ಕೊನೆಯ ದಿನದಿಂದ 24 ತಿಂಗಳವರೆಗೆ ಐಟಿಆರ್ ಯು ಸಲ್ಲಿಸಬಹುದಾಗಿದೆ. ಆದರೆ, ಕೆಲವೊಂದು ನಿಯಮಗಳು ಇದಕ್ಕೆ ಅನ್ವಯವಾಗುತ್ತವೆ. ಅವುಗಳನ್ನು ಸರಿಯಾಗಿ ಪರಿಶೀಲಿಸಿ ಅಪ್​ಡೇಟ್ ಮಾಡುವುದು ಉತ್ತಮ. ಪರಿಷ್ಕೃತ ಮತ್ತು ಅಪ್​​ಡೇಟೆಡ್ ರಿಟರ್ನ್ಸ್ ಸಲ್ಲಿಕೆ ವಿಧಾನಗಳಲ್ಲಿ ವ್ಯತ್ಯಾಸವಿದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಐಟಿಆರ್ ಯು ಸಲ್ಲಿಸುವುದು ಹೇಗೆ?

ಅಪ್​ಡೇಟೆಡ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಮೂಲ ಐಟಿಆರ್ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುವುದಿಲ್ಲ. ತೆರಿಗೆದಾರರು ಹಚ್ಚುವರಿ ಆದಾಯ ಹೊಂದಿದ್ದು, ತೆರಿಗೆ ಪಾವತಿಸುತ್ತಿದ್ದರೆ ಅಪ್​ಡೇಟೆಡ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಶೂನ್ಯ ತೆರಿಗೆ ರಿಟರ್ನ್ ಸಲ್ಲಿಸಲು ಈ ವಿಧಾನ ಬಳಕೆಯಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಹೀಗಾಗಿ ಟಿಡಿಎಸ್ ರಿಫಂಡ್ ಕ್ಲೇಮ್ ಮಾಡಲು ನೀವು ಇಚ್ಛಿಸುವಿರಾದರೆ ಐಟಿಆರ್ ಯು ಸಲ್ಲಿಕೆಯಿಂದ ಹೆಚ್ಚಿನ ಪ್ರಯೋಜನವಾಗದು. ಹೆಚ್ಚುವರಿ ತೆರಿಗೆ ಪಾವತಿಗೆ ಅಪ್​ಡೇಟೆಡ್ ರಿಟರ್ನ್ಸ್ ಸಲ್ಲಿಸಬಹುದು ಎಂದು ‘ಟ್ಯಾಕ್ಸ್​ಬಡ್ಡಿ’ ಸ್ಥಾಪಕ ಸುಜಿತ್ ಬಂಗಾರ್ ತಿಳಿಸಿರುವುದಾಗಿ ‘ಲೈವ್ ಮಿಂಟ್ ಡಾಟ್​ಕಾಂ’ ವರದಿ ಮಾಡಿದೆ.

ಪರಿಷ್ಕೃತ, ಅಪ್​ಡೇಟೆಡ್ ರಿಟರ್ನ್ಸ್ ವ್ಯತ್ಯಾಸವೇನು?

ಪರಿಷ್ಕೃತ ಮತ್ತು ಅಪ್​​ಡೇಟೆಡ್ ರಿಟರ್ನ್ಸ್ ಸಲ್ಲಿಕೆ ವಿಧಾನಗಳಲ್ಲಿ ವ್ಯತ್ಯಾಸವಿದೆ. ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆಯಲ್ಲಿ ಮೂಲ ಐಟಿಆರ್​​ ಅನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ, ಅಪ್​​ಡೇಟೆಡ್​​ನಲ್ಲಿ ಹೆಚ್ಚುವರಿ ತೆರಿಗೆ ಪಾವತಿಗೆ ಸಂಬಂಧಿಸಿದ ರಿಟರ್ನ್ಸ್ ಮಾತ್ರ ಸಲ್ಲಿಸಬಹುದಾಗಿದೆ.

ಹೆಚ್ಚು ತೆರಿಗೆ, ದಂಡಕ್ಕೆ ಕಾರಣವಾದೀತು

ಅಪ್​​ಡೇಟೆಡ್ ರಿಟರ್ನ್ಸ್ ಸಲ್ಲಿಕೆಯಿಂದ ಹೆಚ್ಚು ತೆರಿಗೆ ಮತ್ತು ದಂಡಕ್ಕೆ ಕಾರಣವಾಗುತ್ತದೆ ಎಂಬುದು ನೆನಪಿರಲಿ. ಗಡುವು ಮುಗಿದ ನಂತರ 12 ತಿಂಗಳ ಒಳಗೆ ಸಲ್ಲಿಸಿದರೆ ಶೇ 25 ತೆರಿಗೆ, 24 ತಿಂಗಳ ಒಳಗೆ ಸಲ್ಲಿಸಿದರೆ ಶೇ 50ರ ತೆರಿಗೆ ಹಾಗೂ ಅದರ ಬಡ್ಡಿ ಪಾವತಿಸಬೇಕಾಗುತ್ತದೆ. ಇದು ನಿಯಮಿತ ತೆರಿಗೆ ಸ್ಲ್ಯಾಬ್ ಪ್ರಕಾರ ವಿಧಿಸುವ ತೆರಿಗೆಗಿಂತ ಹೆಚ್ಚಾಗಿರುತ್ತದೆ. ಜುಲೈ 31ರ ನಂತರ ಸಲ್ಲಿಸಿದ್ದ ಐಟಿಆರ್​​ ಅನ್ನು 30 ದಿನಗಳ ಒಳಗಾಗಿ (ಈ ಹಿಂದೆ 120 ದಿನ ಅವಕಾಶವಿತ್ತು) ಪರಿಷ್ಕರಿಸಬೇಕು ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ ತಿಳಿಸಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ