ITR Refund Status: ಐಟಿಆರ್ ರಿಫಂಡ್ ಸ್ಥಿತಿಗತಿ ಆನ್ಲೈನ್ನಲ್ಲಿ ಪರಿಶೀಲಿಸಲು ಹೀಗೆ ಮಾಡಿ
ITR Refund Status; ಐಟಿಆರ್ ರಿಫಂಡ್ ಆಗಿದೆಯೇ, ಇಲ್ಲವೇ ಎಂಬುದನ್ನು ಆನ್ಲೈನ್ ಮೂಲಕವೂ ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಐಟಿಆರ್ ರಿಫಂಡ್ ಸ್ಥಿತಿಗತಿಯನ್ನು ಆನ್ಲೈನ್ ಮೂಲಕ ತಿಳಿಯುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ತೆರಿಗೆ ವಿವರ ಸಲ್ಲಿಕೆ ಅಥವಾ ಐಟಿಆರ್ ಸಲ್ಲಿಕೆ (Tax filing) ಅವಧಿ ಮುಗಿದಿದೆ. ವಾಸ್ತವವಾಗಿ ಪಾವತಿ ಮಾಡಬೇಕಿದ್ದಕ್ಕಿಂತಲೂ ಹೆಚ್ಚಿನ ತೆರಿಗೆ ನೀವು ಪಾವತಿಸಿದ್ದಲ್ಲಿ, ಹೆಚ್ಚುವರಿ ಟಿಡಿಎಸ್ ಕಡಿತವಾಗಿದ್ದಲ್ಲಿ (TDS deductions) ಸರ್ಕಾರಿ ಇಲಾಖೆಯಿಂದ ಅದು ನಿಮಗೆ ರಿಫಂಡ್ ಆಗುತ್ತದೆ. ಐಟಿಆರ್ ರಿಫಂಡ್ (ITR Refund) ಆಗಿದೆಯೇ, ಇಲ್ಲವೇ ಎಂಬುದನ್ನು ಆನ್ಲೈನ್ ಮೂಲಕವೂ ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಐಟಿಆರ್ ರಿಫಂಡ್ ಸ್ಥಿತಿಗತಿಯನ್ನು ಆನ್ಲೈನ್ ಮೂಲಕ ತಿಳಿಯುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
- ಐಟಿಆರ್ ರಿಫಂಡ್ ಸ್ಥಿತಿಗತಿ ತಿಳಿಯುವುದಕ್ಕಾಗಿ ಎನ್ಎಸ್ಡಿಎಲ್ ವೆಬ್ಸೈಟ್ಗೆ (https://tin.tin.nsdl.com/oltas/servlet/RefundStatusTrack) ಭೇಟಿ ನೀಡಿ. ಮುಖಪುಟದಲ್ಲಿ ಪ್ಯಾನ್ ಸ್ಥಿತಿಗತಿ ಪರಿಶೀಲನೆಗೆ ಕ್ಲಿಕ್ ಮಾಡಿ (check status for PAN) ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
- ಮುಂದಿನ ಪುಟದಲ್ಲಿ ಪ್ಯಾನ್ ಸಂಖ್ಯೆ ನಮೂದಿಸಬೇಕಾಗುತ್ತದೆ. ನಂತರ ಅಸೆಸ್ಮೆಂಟ್ ವರ್ಷ ಹಾಗೂ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಬಳಿಕ ಮುಂದುವರಿಯಲು ಕ್ಲಿಕ್ ಮಾಡಿ.
- ಈಗ ನಿಮ್ಮ ಐಟಿಆರ್ ರಿಫಂಡ್ ಸ್ಥಿತಿಗತಿ ಕಾಣಿಸುತ್ತದೆ.
ಎನ್ಎಸ್ಡಿಎಲ್ ವೆಬ್ಸೈಟ್ನಲ್ಲಿ ಉಲ್ಲೇಖಿಸಿರುವಂತೆ ಎರಡು ವಿಧಾನಗಳಲ್ಲಿ ಐಟಿಆರ್ ರಿಫಂಡ್ ಅಥವಾ ಮರುಪಾವತಿ ಮಾಡಲಾಗುತ್ತದೆ. ಅವುಗಳು ಹೀಗಿವೆ;
ಆರ್ಟಿಜಿಎಸ್ / ಎನ್ಇಸಿಎಸ್: ಬ್ಯಾಂಕ್ ಖಾತೆಗೆ ನೇರವಾಗಿ ರಿಫಂಡ್ ಮಾಡುವುದಕ್ಕೆ ತೆರಿಗೆದಾರನ ಬ್ಯಾಂಕ್ ಖಾತೆಯ ಎಂಐಸಿಆರ್ ಕೋಡ್ ಅಥವಾ ಐಎಫ್ಎಸ್ಸಿ ಕೋಡ್ ಮತ್ತು ಸರಿಯಾದ ಸಂವಹನದ ವಿಳಾಸವನ್ನು ನೀಡುವುದು ಕಡ್ಡಾಯ.
ಪೇಪರ್ ಚೆಕ್: ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಸರಿಯಾದ ವಿಳಾಸ ನೀಡುವುದು ಕಡ್ಡಾಯ.
ಅಸೆಸಿಂಗ್ ಅಧಿಕಾರಿ ಅಥವಾ ರಿಫಂಡ್ ಬ್ಯಾಂಕರ್ ಮರುಪಾವತಿ ಮಾಡಿದ 10 ದಿನಗಳ ನಂತರವಷ್ಟೇ ಮರುಪಾವತಿಯ ಸ್ಥಿತಿಗತಿಯನ್ನು ತಿಳಿಯಲು ಸಾಧ್ಯವಿದೆ.
ರಿಫಂಡ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಹಣ ಬಂದಿಲ್ಲವೇ?
ಆದಾಯ ತೆರಿಗೆ ಇಲಾಖೆಯು ರಿಫಂಡ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ಮರುಪಾವತಿ ಮಾಡಬೇಕಿರುವ ಬ್ಯಾಂಕ್ನಿಂದ (ಎಸ್ಬಿಐ) ನಿಮ್ಮ ಬ್ಯಾಂಕ್ ಖಾತೆಗೆ ಅದು ವರ್ಗಾವಣೆಯಾಗಿಲ್ಲದಿರುವ ಸಾಧ್ಯತೆಯೂ ಇದೆ. ಇಂಥ ಸಂದರ್ಭದಲ್ಲಿ ನೀವು ಆದಾಯ ತೆರಿಗೆ ಇಲಾಖೆ ಜತೆ ಲಿಂಕ್ ಮಾಡಿರುವ ಬ್ಯಾಂಕ್ ಖಾತೆ ಯಾವುದೆಂದು ದೃಢಪಡಿಸಿಕೊಳ್ಳಿ. ನಿಮ್ಮ ಪ್ಯಾನ್ ಸಂಖ್ಯೆಗೆ ಅನುಗುಣವಾಗಿ ಹಲವು ಬ್ಯಾಂಕ್ ಖಾತೆಗಳು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಜತೆ ಲಿಂಕ್ ಆಗಿರುವ ಸಾಧ್ಯತೆ ಇದೆ. ಹೀಗಾಗಿ ರಿಫಂಡ್ ಮೊತ್ತವನ್ನು ಸ್ವೀಕರಿಸಲು ನೀವು ನಿರ್ದಿಷ್ಟ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ ಮತ್ತು ಪ್ರಿ-ವ್ಯಾಲಿಡೇಟ್ ಮಾಡಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ