Green Bond: ನಿಮ್ಮ ಹಣ ಪರಿಸರಪೂರಕ ಕೆಲಸಕ್ಕೆ ಬಳಕೆಯಾಗಬೇಕೇ? ಗ್ರೀನ್ ಬಾಂಡ್ ಸರಿಯಾದ ಮಾರ್ಗ
ಇತರ ಸರ್ಕಾರಿ ಡೆಬ್ಟ್ ಬಾಂಡ್ಗಳಂತೆಯೇ ಗ್ರೀನ್ ಬಾಂಡ್ ಕೂಡ. ಇವು ಸರ್ಕಾರ ನೀಡುವ ಸಾಲಪತ್ರ. ಅಂದರೆ ಹೂಡಿಕೆದಾರರಿಂದ ಹಣ ಪಡೆದು ಅದಕ್ಕೆ ಪ್ರತಿಯಾಗಿ ಬಾಂಡ್ ನೀಡಲಾಗುತ್ತದೆ. ಈ ಹಣಕ್ಕೆ ನಿರ್ದಿಷ್ಟ ಬಡ್ಡಿ ನೀಡಲಾಗುತ್ತದೆ. ಗ್ರೀನ್ ಬಾಂಡ್ ಅನ್ನೂ ಇದೇ ರೀತಿ ಹೂಡಿಕೆದಾರರಿಗೆ ವಿತರಿಸಲಾಗುತ್ತದೆ. ಒಂದೇ ವ್ಯತ್ಯಾಸ ಎಂದರೆ ಗ್ರೀನ್ ಬಾಂಡ್ ಮೂಲಕ ಸಂಗ್ರಹಿಸಲಾದ ಹಣವನ್ನು ಪರಿಸರಸ್ನೇಹಿ ಕಾರ್ಯಗಳಿಗೆ ಮಾತ್ರ ವಿನಿಯೋಗಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಗ್ರೀನ್ ಬಾಂಡ್ (Green Bond) ಬಗ್ಗೆ ಹೆಚ್ಚು ಸದ್ದಾಗುತ್ತಿದೆ. ಜಗತ್ತಿನಾದ್ಯಂತ ವಿವಿಧ ದೇಶಗಳು ಗ್ರೀನ್ ಬಾಂಡ್ ಮೂಲಕ ಪರಿಸರಸ್ನೇಹಿ ಚಟುವಟಿಕೆಗಳಿಗೆ ಬಂಡವಾಳ ಸಂಗ್ರಹಿಸುವ ಕೆಲಸ ಮಾಡುತ್ತಿವೆ. ಭಾರತ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಿದೆ. ಕಳೆದ ವರ್ಷದ ಬಜೆಟ್ನಲ್ಲಿ (Union Budget) ಗ್ರೀನ್ ಬಾಂಡ್ ಬಗ್ಗೆ ಪ್ರಸ್ತಾಪವಾಗಿತ್ತು. 2022ರ ನವೆಂಬರ್ ನಲ್ಲಿ ಸಾವರೀನ್ ಗ್ರೀನ್ ಬಾಂಡ್ನ ಚೌಕಟ್ಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣಗೊಳಿಸಿದ್ದರು. ಈಗ ಹೂಡಿಕೆದಾರರು ಭಾರತ ಸರ್ಕಾರದ ಗ್ರೀನ್ ಬಾಂಡ್ ಗಳನ್ನು ಖರೀದಿಸಬಹುದಾಗಿದೆ. ಈ ಮಾರ್ಚ್ ತಿಂಗಳಷ್ಟರಲ್ಲಿ ಭಾರತ ಸರ್ಕಾರ 16 ಸಾವಿರ ಕೋಟಿ ರೂ ಮೌಲ್ಯದ ಬಾಂಡ್ ಗಳನ್ನು ವಿತರಿಸುವ ಗುರಿ ಹೊಂದಿದೆ.
ಏನಿದು ಗ್ರೀನ್ ಬಾಂಡ್?
ಇತರ ಸರ್ಕಾರಿ ಡೆಬ್ಟ್ ಬಾಂಡ್ಗಳಂತೆಯೇ ಗ್ರೀನ್ ಬಾಂಡ್ ಕೂಡ. ಇವು ಸರ್ಕಾರ ನೀಡುವ ಸಾಲಪತ್ರ. ಅಂದರೆ ಹೂಡಿಕೆದಾರರಿಂದ ಹಣ ಪಡೆದು ಅದಕ್ಕೆ ಪ್ರತಿಯಾಗಿ ಬಾಂಡ್ ನೀಡಲಾಗುತ್ತದೆ. ಈ ಹಣಕ್ಕೆ ನಿರ್ದಿಷ್ಟ ಬಡ್ಡಿ ನೀಡಲಾಗುತ್ತದೆ.
ಗ್ರೀನ್ ಬಾಂಡ್ ಅನ್ನೂ ಇದೇ ರೀತಿ ಹೂಡಿಕೆದಾರರಿಗೆ ವಿತರಿಸಲಾಗುತ್ತದೆ. ಒಂದೇ ವ್ಯತ್ಯಾಸ ಎಂದರೆ ಗ್ರೀನ್ ಬಾಂಡ್ ಮೂಲಕ ಸಂಗ್ರಹಿಸಲಾದ ಹಣವನ್ನು ಪರಿಸರಸ್ನೇಹಿ ಕಾರ್ಯಗಳಿಗೆ ಮಾತ್ರ ವಿನಿಯೋಗಿಸಲಾಗುತ್ತದೆ. ಇಂಥ ಯೋಜನೆಗಳು ಆವ್ಯಾವು ಎಂಬುದನ್ನು ಗ್ರೀನ್ ಫೈನಾನ್ಸ್ ವರ್ಕಿಂಗ್ ಕಮಿಟಿ ನಿರ್ಧರಿಸುತ್ತದೆ.
ಇದನ್ನೂ ಓದಿ: Sovereign Green Bonds: ಎರಡು ಕಂತು ಸಾವರಿನ್ ಗ್ರೀನ್ ಬಾಂಡ್ ಬಿಡುಗಡೆ ಮಾಡಲಿದೆ ಆರ್ಬಿಐ
ಸರ್ಕಾರ ಕಳೆದ ವರ್ಷ ಬಿಡುಗಡೆ ಮಾಡಿದ ಗ್ರೀನ್ ಬಾಂಡ್ ಫ್ರೇಂವರ್ಕ್ ಪ್ರಕಾರ ಮರುಬಳಕೆ ಇಂಧನ, ಸ್ವಚ್ಛ ಸಾರಿಗೆ, ಪರಿಸರಸ್ನೇಹಿ ಕಟ್ಟಡ, ಜಲ ಮತ್ತು ತ್ಯಾಜ್ಯಗಳ ಸಮರ್ಪಕ ನಿರ್ವಹಣೆ, ಮಾಲಿನ್ಯ ನಿಯಂತ್ರಣ, ಜೀವವೈವಿಧ್ಯತೆ ಸಂರಕ್ಷಣೆ ಮತ್ತಿತರ ಹಸಿರು ಹಸಿರು ಯೋಜನೆಗಳಿಗೆ ಗ್ರೀನ್ ಬಾಂಡ್ನ ಹಣ ವಿನಿಯೋಗವಾಗುತ್ತದೆ.
ಸರ್ಕಾರ ಆಶ್ವಾಸನೆ ನೀಡಿರುವ ಪ್ರಕಾರ ಗ್ರೀನ್ ಬಾಂಡ್ಗಳಿಂದ ಸಂಗ್ರಹಿಸಿದ ಹಣವನ್ನು ಯಾವ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಬೇಕು. ಈ ವಿಚಾರದಲ್ಲಿ ಪಾರದರ್ಶಕತೆ ತೋರಬೇಕಿದೆ. ಕೆಲ ದೇಶಗಳಲ್ಲಿ ಗ್ರೀನ್ ಪ್ರಾಜೆಕ್ಟ್ ಹೆಸರಿನಲ್ಲಿ ಪರಿಸರ ವಿರೋಧಿ ಯೋಜನೆಗಳನ್ನು ನಿರ್ವಹಿಸಿದ ಆರೋಪ ಇದೆ. ಭಾರತದಲ್ಲೂ ಪಳೆಯುಳಿಕೆ ಇಂಧನವೆನಿಸಿದ ಸಿಎನ್ಜಿ ಅನಿಲ ಯೋಜನೆಗಳಿಗೆ ಈ ಹಣ ಬಳಕೆಯಾಗಬಹುದು ಎಂಬ ಆರೋಪ ಇದೆ. ಇಂಥ ವಿಚಾರದಲ್ಲಿ ಸರ್ಕಾರ ಪಾರದರ್ಶಕವಾಗಿರಬೇಕು.
ಭಾರತದಲ್ಲಿ ಈಗ ಮರುಬಳಕೆ ಇಂಧನದ ಯೋಜನೆಗಳತ್ತ ಬಹಳ ಗಮನ ಹರಿಸಲಾಗುತ್ತಿದೆ. ಸೌರ ವಿದ್ಯುತ್, ಜಲವಿದ್ಯುತ್, ಜೈವಿಕ ಇಂಧನ, ವಾಯುಶಕ್ತಿ ಇತ್ಯಾದಿ ಯೋಜನೆಗಳ ಮೇಲೆ ಗ್ರೀನ್ ಬಾಂಡ್ ಹಣವನ್ನು ವಿನಿಯೋಗಿಸುವ ಸಾಧ್ಯತೆ ಇದೆ.
ಗ್ರೀನ್ ಬಾಂಡ್ನಿಂದ ಏನು ಲಾಭ?
ಸಾವರೀನ್ ಗ್ರೀನ್ ಬಾಂಡ್ನಿಂದ ಹೂಡಿಕೆದಾರರಿಗೆ ತೀರಾ ಹೆಚ್ಚು ರಿಟರ್ನ್ ಸಿಗುವುದಿಲ್ಲ. ವರ್ಷಕ್ಕೆ ಶೇ. 2-3ರಷ್ಟು ಬಡ್ಡಿ ದೊರೆಯುತ್ತದೆ. ಈ ಸಾವರೀನ್ ಗ್ರೀನ್ ಬಾಂಡ್ ಸುಮಾರು 14 ವರ್ಷ ಕಾಲಾವಧಿಯದ್ದಾಗಿರುತ್ತದೆ. ಪ್ರತೀ ವರ್ಷ ನಿರ್ದಿಷ್ಟ ರಿಟರ್ನ್ ಪ್ರಾಪ್ತವಾಗುತ್ತದೆ. ಆದರೆ, ತಮ್ಮ ಹಣ ಪರಿಸರಸ್ನೇಹಿ ಕಾರ್ಯಗಳಿಗೆ ಬಳಕೆಯಾಗಬೇಕೆಂದು ಇಚ್ಛಿಸುವ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಸಾವರೀನ್ ಗ್ರೀನ್ ಬಾಂಡ್ ಹೇಳಿ ಮಾಡಿಸಿದ ಹೂಡಿಕೆದಾಣವಾಗಿದೆ. ಇಲ್ಲಿ ಸಾವರೀನ್ ಎಂದರೆ ನಿರ್ದಿಷ್ಟ ಕ್ಷೇತ್ರಕ್ಕೆ ವಿನಿಯೋಗವಾಗುವ ಹಣ ಎಂದರ್ಥ.
ಗ್ರೀನ್ ಬಾಂಡ್ ನಿಂದ ಮತ್ತೊಂದು ಪ್ರಯೋಜನ ಎಂದರೆ ಇದು ತೆರಿಗೆ ವಿನಾಯಿತಿ ಕೊಡುವ ಹೂಡಿಕೆಯಾಗುತ್ತದೆ.
ಇದನ್ನೂ ಓದಿ: PM Solar Panel Yojana: ರೈತರೇ, ಸೋಲಾರ್ ಅಳವಡಿಸಿ ಲಾಭ ಮಾಡುವುದು ಹೇಗೆ? ಇಲ್ಲಿದೆ ನೋಡಿ
ಇಲ್ಲಿ ಮತ್ತೊಂದ ಸಂಗತಿ ಎಂದರೆ ಬೇರೆ ಕೆಲ ದೇಶಗಳಲ್ಲಿ ಗ್ರೀನ್ ಬಾಂಡ್ ಜೊತೆಗೆ ಬ್ಲೂ ಬಾಂಡ್ ಮತ್ತು ಕ್ಲೈಮೇಟ್ ಬಾಂಡ್ ಗಳೂ ಚಾಲನೆಯಲ್ಲಿವೆ. ಬ್ಲೂ ಬಾಂಡ್ ಜಲಸಂರಕ್ಷಣೆ, ಜಲವೈವಿಧ್ಯತೆ ಸಂರಕ್ಷಿಸುವ ಯೋಜನೆಗಳಿಗೆ ವಿನಿಯೋಗವಾಗುತ್ತದೆ. ಇನ್ನು, ಕ್ಲೈಮೇಟ್ ಬಾಂಡ್ ಹವಾಮಾನ ಬದಲಾವಣೆ ಎದುರಿಸುವ ಯೋಜನೆಗೆ ವಿನಿಯೋಗವಾಗುತ್ತದೆ. ಬ್ಲೂ ಬಾಂಡ್ ಮತ್ತು ಕ್ಲೈಮೇಟ್ ಬಾಂಡ್ ಗಳನ್ನು ಗ್ರೀನ್ ಬಾಂಡ್ ಎಂದೂ ಕರೆಯಲಡ್ಡಿ ಇಲ್ಲ.
ಸದ್ಯಕ್ಕೆ ಭಾರತದಲ್ಲಿ ಸರ್ಕಾರ ಗ್ರೀನ್ ಬಾಂಡ್ ವಿತರಣೆ ಮಾಡುತ್ತಿದೆ. ಪರಿಸರಪೂರಕ ಯೋಜನೆಗಳನ್ನು ಮಾಡಬಯಸುವ ಖಾಸಗಿ ಸಂಸ್ಥೆಗಳೂ ಕಾರ್ಪೊರೇಟ್ ಗ್ರೀನ್ ಬಾಂಡ್ ಬಿಡುಗಡೆ ಮಾಡಿ ಬಂಡವಾಳ ಸಂಗ್ರಹಿಸಬಹುದು.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ