Horoscope Today 28 December 2024: ಈ ರಾಶಿಯವರಿಗೆ ವೈವಾಹಿಕ ಜೀವನದ ಚಿಂತೆ ಕಾಡಬಹುದು

ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

Horoscope Today 28 December 2024: ಈ ರಾಶಿಯವರಿಗೆ ವೈವಾಹಿಕ ಜೀವನದ ಚಿಂತೆ ಕಾಡಬಹುದು
ಈ ರಾಶಿಯವರಿಗೆ ವೈವಾಹಿಕ ಜೀವನದ ಚಿಂತೆ ಕಾಡಬಹುದು
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶೂಲಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:46 ರಿಂದ 11:10ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:59 ರಿಂದ 03:23 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 06:57 ರಿಂದ 08:22 ರವರೆಗೆ.

ಮೇಷ ರಾಶಿ: ನೀವು ಗ್ರಹಿಸುವ ವಿಧಾನ ವ್ಯತ್ಯಾಸವಾದ ತಪ್ಪಾಗಿ ತಿಳಿಯುವಿರಿ. ಇಂದು ಯಾವ ನಿರ್ಧಾರವನ್ನೂ ಸ್ವತಂತ್ರವಾಗಿ ಮಾಡುವುದು ಕಷ್ಟ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ಇಂದು ಕೆಲಸದಲ್ಲಿ ಯಾವುದೇ ಅನಾನುಕೂಲತೆ ಇರುವುದಿಲ್ಲ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು.‌ ಹಿಂದಿನ ತಪ್ಪುಗಳು ಪಾಠವಾಗುವುದು. ದೈವಾನುಗ್ರಹವನ್ನು ಪಡೆದು ಮುಂದಿನ ಹೊಸ ಕಾರ್ಯಕ್ಕೆ ಅಣಿಯಾಗಿ. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಕೆಲವು ವಿಷಯಗಳ ಬಗ್ಗೆ ಮನೆಯ ಹಿರಿಯರಿಂದ ವ್ಯತ್ಯಾಸಗಳು ಆಗಬಹುದು. ಕೆಲವು ಸಮಯದಲ್ಲಿ ಪರಿಸ್ಥಿತಿ ಸಹ ಸಾಮಾನ್ಯವಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ಹೊಸ ಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ. ಇಂದು ವಿಘಟನೆಗೆ ಆಗಲು ಅವಕಾಶವು ಕೊಡುವುದು ಬೇಡ.

ವೃಷಭ ರಾಶಿ; ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕೆಂದರೂ ಆಗದು. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ಪರಸ್ಥಳದಲ್ಲಿ ವಾಸ ಮಾಡುವ ಸಂದರ್ಭವು ಬರಲಿಸೆ. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಖಾಸಗಿ ಸಂಸ್ಥೆ ದೂರದೃಷ್ಟಿಯ ಯೋಜನೆಯು ಪ್ರಯೋಜನವಾದೀತು. ಇಂದು ಮನೆಯ ಸದಸ್ಯರ ಮನವೊಲಿಸುವುದು ಕಷ್ಟವಾಗದು.‌ ನಿರಾಶೆಯನ್ನು ಉಂಟುಮಾಡವ ಆಲೋಚನೆಗಳನ್ನು ತಪ್ಪಿಸಿ. ಬೇಗನೆ ಹಣವನ್ನು ಸಂಪಾದಿಸಲು ಅನ್ಯ ಮಾರ್ಗವನ್ನು ಹಿಡಿಯಬಹುದು. ಹೊಸ ಸಂಪರ್ಕದಿಂದ ಅದೃಷ್ಟ ಬದಲಾಗುತ್ತದೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹಳೆಯ ವಸ್ತುವನ್ನು ಪುನಃ ಉಪಯೋಗಿಸುವಿರಿ.

ಮಿಥುನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಕಾಲ ಕೂಡಿಬರದು. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಕೈ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಂಡು ದೈನಂದಿನ ಕೆಲಸಗಳೂ ಕಷ್ಟವಾದೀತು. ಇಂದು ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನು ವಿಳಂಬದಿಂದ ಬರುವುದು. ಕುಟುಂಬ ವಾತಾವರಣವು ಇಂದು ಹೆಚ್ಚು ಭಾವನಾತ್ಮಕವಾಗಿ ಇರುತ್ತದೆ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಕಾಣಿಸಿಕೊಳ್ಳುವುದು. ಹಿರಿಯ ಅಧಿಕಾರಿಗಳ ಜೊತಡ ವೈಮನಸ್ಸು ಬರಬಹುದು. ಹಿರಿಯರ ಎದುರು ವಿನಯದಿಂದ ಮಾತನಾಡಿ. ಮನೆಗೆ ಬಂದವರಿಗೆ ಉತ್ತಮ‌ ಸತ್ಕಾರ ನೀಡುವಿರಿ.

ಕರ್ಕಾಟಕ ರಾಶಿ: ವ್ಯಾಪಾರ ವಹಿವಾಟಿನಲ್ಲಿ ನಿಮಗೆ ನೇರವಾಗಿ ಭಾಗವಹಿಸಲಾಗದು. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ಮಕ್ಕಳಿಂದ ಧನಸಹಾಯದ ನಿರೀಕ್ಷೆ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಈ ದಿನ ನೀವು ಸಂತೋಷವಾಗಿರುವಿರಿ. ಆದರೆ ಅಸಭ್ಯ ವರ್ತನೆಯು ಕೆಲವರಿಂದ ಮಾತುಗಳು ಕೇಳಿಬರಬಹುದು. ಕೆಲಸದ ಬಿಡುವಿಲ್ಲದಿದ್ದರೂ ಇನ್ನಿತರ ಚಟುವಟಿಕೆಯಲ್ಲಿ ಭಾಗ ವಹಿಸುವಿರಿ. ಇಂದು ನೀವು ಯಾವುದೇ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದು. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಇಂದು ಕೆಲಸದ ಕಾರಣಕ್ಕೆ ಏಕಾಂಗಿಯಾಗಬೇಕಾಗುವುದು. ಸೂಕ್ಷ್ಮ ಕೆಲಸವನ್ನು ಮಾಡಲು ತಾಳ್ಮೆ ಇರದು.

ಸಿಂಹ ರಾಶಿ: ಇಂದು ನಿಮಗೆ ಎಂತಹ ನಿಶ್ಶಬ್ದ ಏಕಾಂತವೂ ನಿಮ್ಮ ಮನಸ್ಸಿಗೆ ಕಿರಿಕಿರಿ ತರುವುದು. ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನ ಪಟ್ಟುಕೊಳ್ಳುವಿರಿ. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ಈ ದಿನ ನೀವು ತಾಳ್ಮೆಯನ್ನು ಅಭ್ಯಾಸ ಮಾಡುವುದರ ಮೂಲಕ ನಿರೀಕ್ಷೆಗಿಂತ ಹೆಚ್ಚಿನದನ್ನು ಗಳಿಸಬಹುದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ಇಂದು, ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಈ ಕಾರಣದಿಂದಾಗಿ ಜನರು ನಿಮ್ಮನ್ನು ಕಂಡು ನಗುವರು. ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತದೆ. ದೇಶೀಯ ಸಂತೋಷ ಮತ್ತು ಆನಂದದ ಸಾಧನಗಳನ್ನು ಪ್ರದರ್ಶನಕ್ಕಾಗಿ, ಹವ್ಯಾಸಗಳಿಗಾಗಿ ಖರ್ಚು ಮಾಡಲಾಗುವುದು. ಅತಿಯಾದ ಫಲದ ನಿರೀಕ್ಷೆಯಲ್ಲಿ ಇರುವುದು ಬೇಡ.

ಕನ್ಯಾ ರಾಶಿ: ಇಂದು ಸ್ಥಿರಾಸ್ತಿಯ ಬಗ್ಗೆ ನಿಮ್ಮ ಹಾಗೂ ಸಹೋದರರ ನಡುವೆ ಗೊಂದಲ ಉಂಟಾಗುವುದು. ಅಧಿಕಾರಿಗಳಿಗೆ ಬೇಕಾದುದನ್ನು ನೀಡಿ ಅವರನ್ನು ಖುಷಿಪಡಿಸುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಂದು ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ. ಆದರೆ ಕೆಲವು ತಪ್ಪುಗ್ರಹಿಕೆಯಿಂದಾಗಿ ಅಸಮಾಧಾನ ಇರಲಿದೆ. ಇಂದಿನ ಉದ್ಯಮವು ನಿಮ್ಮ ಹಿಡಿತದಲ್ಲಿ ಇರುತ್ತದೆ. ಲಾಭವೂ ಹೆಚ್ಚಾಗುವುದು. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಇಂದಿನ ಲಾಭ ಪಡೆಯಲು ಆಲಸ್ಯವನ್ನು ತಪ್ಪಿಸುವುದು ಅವಶ್ಯಕ. ಕಾರ್ಯಕ್ಷೇತ್ರದ ಗೆಳೆಯರು ನಿಮ್ಮ ನಡವಳಿಕೆಯಿಂದ ಸಂತೋಷವಾಗಿರುತ್ತಾರೆ. ಇದರಿಂದ ಅವರು ತಮ್ಮ ಕೆಲಸವನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಪೂರ್ಣವಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಬಹುದು. ಮಕ್ಕಳ‌ ವಿಚಾರದಲ್ಲಿ ದುಂದು ವೆಚ್ಚವೇ ಆದೀತು.

ತುಲಾ ರಾಶಿ: ಇಂದು ನಿಮ್ಮ ಯೋಜನೆಯಲ್ಲಿ ಅಂದಾಜು ಲೆಕ್ಕ ವ್ಯತ್ಯಸವಾಗುವುದು. ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಒಪ್ಪಿಸಿ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುತ್ತವೆ. ಮನಸ್ಸು ಅನೈತಿಕ ಚಟುವಟಿಕೆಗಳಿಂದ ವಿಮುಖವಾಗಬಹುದು. ಮನೆಯವರ ಸಮಸ್ಯೆ ಬಗೆಹರಿಯಲಿದ್ದು, ಮುಖಂಡರ ಸಹಾಯವನ್ನೂ ಪಡೆಯಬೇಕಾಗುವುದು. ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಕೋಪವನ್ನು ನಿಯಂತ್ರಿಸಿ.

ವೃಶ್ಚಿಕ ರಾಶಿ: ಇಂದು ನಿಮಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಜಯ ಸಿಗುವುದು. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಸ್ವಯಂಕೃತ ಅಪರಾಧಗಳಿಂದ ಕಿಂಚಿತ್ತೂ ಬೇಸರವಾಗದು. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ದೈಹಿಕ ದೋಷಗಳನ್ನು ಸಕಾರಾತ್ಮಕವಾಗಿ ಎದುರಿಸುವಿರಿ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸಕ್ಕೆ ಕಷ್ಟವಾಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸ ಕಾರ್ಯಗಳಲ್ಲಿ ತೊಡಗುವಿರಿ. ಸ್ವಲ್ಪ ಕುಟುಂಬದ ಸಮಸ್ಯೆಗಳಿಂದಾಗಿ, ಮನಸ್ಸು ಚಂಚಲವಾಗಿರುತ್ತದೆ. ಮನೆಯಲ್ಲಿ ಸಣ್ಣ ವಿಚಾರವೂ ವಿವಾದವಾಗುವ ಸಾಧ್ಯತೆಯಿದೆ. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಇಂದಿನ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು.

ಧನು ರಾಶಿ: ನಿಮಗಾದ ಅಪಮಾನಕ್ಕೆ ಪ್ರತೀಕಾರವನ್ನು ಪಡೆಯಲು ಸಮಯವನ್ನು ಕಾಯುವಿರಿ. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ಅಧಿಕಾರಿ ವರ್ಗದವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ದೈನಂದಿನ ವ್ಯಾಪಾರಿಗಳು ಹೆಚ್ಚು ಶ್ರಮಿಸಬೇಕು. ಲೇಖನ ಸಾಮಗ್ರಿಗಳು ಅಥವಾ ಮುದ್ರಣ ಕೆಲಸಕ್ಕೆ ಸಂಬಂಧಿಸಿದ ಜನರು ಹೊಸ ಉದ್ಯೋಗಗಳನ್ನು ಪಡೆಯುವರು. ನೀವು ಕುಟುಂಬಕ್ಕಾಗಿ ಹೊಸದನ್ನು ಮಾಡುತ್ತೀರಿ. ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ಹೊಂದಿಸುವಿರಿ. ಸರಳ ಜೀವನವನ್ನು ನೀವು ಇಷ್ಟಪಡುವಿರಿ.

ಮಕರ ರಾಶಿ: ಕಟ್ಟಡಗಳ ನಿರ್ಮಾಣ ಮಾಡುವವರಿಗೆ ಇಂದು ಬೇಕಾದುದು ಜರುಗುವುದು. ನಿಮ್ಮ ವಿವಾಹದ ಇಚ್ಛೆಯನ್ನು ಮನೆಯಲ್ಲಿ ಪ್ರಸ್ತಾಪಿಸುವಿರಿ. ಮಾನಸಿಕ ಅಸಮತೋಲನದಿಂದ ಎಲ್ಲ ಕಾರ್ಯವೂ ಅಸ್ತವ್ಯಸ್ತ ಆಗಬಹುದು. ಸ್ನೇಹಿತರಿಂದ ಸಹಾಯದ ನಿರೀಕ್ಷೆ ಇದ್ದು, ಹುಸಿಯಾಗುವುದು. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುತ್ತದೆ. ಸತ್ಯವನ್ನು ಮುಚ್ಚಿಡಲಾಗದು. ಸಹೋದರಿಯರು ಮತ್ತು ಸಂಗಾತಿಯ ಬೆಂಬಲ ಪಡೆಯುವಿರಿ. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಅವಕಾಶ ಬರುವುದು. ಸಂಗಾತಿಯ ಎದುರು ಏನನ್ನೂ ಹೇಳದೇ ಸುಮ್ಮನಿರುವಿರಿ.

ಕುಂಭ ರಾಶಿ: ಇಂದು ಅಪರಿಚಿತ ವ್ಯಕ್ತಿಗಳಿಂದ ಕರೆ ಬರಬಹುದು. ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ಇಂದು ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ಹಣ ಗಳಿಸುವ ಬಯಕೆ ಅಪೂರ್ಣವಾಗಬಹುದು. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ಅನೇಕ ಲಾಭದ ಅವಕಾಶಗಳು ಸಿಗುತ್ತವೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಸಾಮಾಜಿಕ ಕಾರ್ಯಕ್ಕೆ ಗೌರವ ನಿಮ್ಮನ್ನು ಅರಸಿ ಬರಲಿದೆ. ಮನೆಯವರು ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು. ಮನೆಯ ನಿರ್ಮಾಣಕ್ಕೆ ನಿಮ್ಮ ಪುಟ್ಟ ಯೋಜನೆ ಸಿದ್ಧವಾಗುವುದು.

ಮೀನ ರಾಶಿ: ಇಂದು ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮಗೆ ಹತಾಶೆ ಕಾಣಿಸುವುದು. ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು.‌ ತಂದೆಯಿಂದ ಮಾನಸಿಕವಾಗಿ ನೋವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ.‌ ಕಾರ್ಯಕ್ಷೇತ್ರದಿಂದ ಹೆಚ್ಚುವರಿ ಆದಾಯ ಬರುವುದು. ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂಪತ್ತಿನ ಮೂಲವು ಹೆಚ್ಚಾಗುತ್ತವೆ. ಸಾಮಾಜಿಕ ಚಟುವಟಿಕೆಗಳಿಗೆ ಸಮಯವನ್ನು ಕೊಡಲಾಗದೇ ಜನರು ನಿಮ್ಮಿಂದ ದೂರವಿರಬಹುದು. ಮನೆಯವರ ಮನ ನೋಯಿಸಿ ಕಾರ್ಯ ಮಾಡಲಾಗದು. ಇಂದಿನ ಪ್ರತಿ ಕ್ಷಣವನ್ನೂ ಆನಂದಿಸುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)