Sovereign Green Bonds: ಎರಡು ಕಂತು ಸಾವರಿನ್ ಗ್ರೀನ್ ಬಾಂಡ್ ಬಿಡುಗಡೆ ಮಾಡಲಿದೆ ಆರ್ಬಿಐ
ಸಾವರಿನ್ ಗ್ರೀನ್ ಬಾಂಡ್ ಎಂಬುದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹೂಡಿಕೆದಾರರಿಂದ ಹಣ ಸಂಗ್ರಹ ಮಾಡಲು ಇರುವ ಒಂದು ಸಾಧನ. ಅಂದರೆ ಈ ಬಾಂಡ್ಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಸರ್ಕಾರ ಹಣ ಸಂಗ್ರಹಿಸುತ್ತದೆ. ಈ ಹಣವನ್ನು ಹವಾಮಾನ, ಪರಿಸರ ವ್ಯವಸ್ಥೆಗೆ ಪೂರಕವಾದ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
ನವದೆಹಲಿ: ಜನವರಿ 25 ಮತ್ತು ಫೆಬ್ರವರಿ 9ರಂದು 8,000 ಕೋಟಿ ರೂ.ನ ಎರಡು ಕಂತು ಸಾವರಿನ್ ಗ್ರೀನ್ ಬಾಂಡ್ (Sovereign Green Bonds) ಬಿಡುಗಡೆ ಮಾಡುವುದಾಗಿ ಆರ್ಬಿಐ (RBI) ಘೋಷಿಸಿದೆ. ಬಾಂಡ್ ಮೂಲಕ ದೊರೆಯುವ ಆದಾಯವನ್ನು ಸರ್ಕಾರಿ ವಲಯದ ಯೋಜನೆಗಳಲ್ಲಿ ನಿಯೋಜಿಸಲಾಗುವುದು. ಅದು ಇಂಗಾಲದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ. ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಾವರಿನ್ ಗ್ರೀನ್ ಬಾಂಡ್ಗಳನ್ನು ಬಿಡುಗಡೆ ಮಾಡುವ ಬಗ್ಗೆ 2022-23ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು.
ಅದರಂತೆ, 2022-23ನೇ ಸಾಲಿಗಾಗಿ ಒಟ್ಟು 16,000 ಕೋಟಿ ರೂ. ಮೊತ್ತದ ಸಾವರಿನ್ ಗ್ರೀನ್ ಬಾಂಡ್ಗಳನ್ನು ಬಿಡುಗಡೆ ಮಾಡುವುದಾಗಿ 2022ರ ಸೆಪ್ಟೆಂಬರ್ 29ರಂದು ಸರ್ಕಾರ ಘೋಷಿಸಿತ್ತು. 2022ರ ನವೆಂಬರ್ 9ರಂದು ಸಾವರಿನ್ ಗ್ರೀನ್ ಬಾಂಡ್ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿತ್ತು. ಈ ಗ್ರೀನ್ ಬಾಂಡ್ಗಳು 5ರಿಂದ 10 ವರ್ಷಗಳ ಅವಧಿಗೆ ಲಭ್ಯವಿರಲಿದೆ ಎಂದು ಆರ್ಬಿಐ ತಿಳಿಸಿದೆ.
ಇದನ್ನೂ ಓದಿ: Green Bond: ನಿಮ್ಮ ಹಣ ಪರಿಸರಪೂರಕ ಕೆಲಸಕ್ಕೆ ಬಳಕೆಯಾಗಬೇಕೇ? ಗ್ರೀನ್ ಬಾಂಡ್ ಸರಿಯಾದ ಮಾರ್ಗ
ಏನಿದು ಸಾವರಿನ್ ಗ್ರೀನ್ ಬಾಂಡ್?
ಸಾವರಿನ್ ಗ್ರೀನ್ ಬಾಂಡ್ ಎಂಬುದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹೂಡಿಕೆದಾರರಿಂದ ಹಣ ಸಂಗ್ರಹ ಮಾಡಲು ಇರುವ ಒಂದು ಸಾಧನ. ಅಂದರೆ ಈ ಬಾಂಡ್ಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಸರ್ಕಾರ ಹಣ ಸಂಗ್ರಹಿಸುತ್ತದೆ. ಈ ಹಣವನ್ನು ಹವಾಮಾನ, ಪರಿಸರ ವ್ಯವಸ್ಥೆಗೆ ಪೂರಕವಾದ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಈ ಯೋಜನೆಯನ್ನು 2022-23ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಕೇಂದ್ರ ಸರ್ಕಾರದ ಪರವಾಗಿ ಆರ್ಬಿಐ ಈ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. ಈ ಬಾಂಡ್ಗೆ ಹೂಡಿಕೆದಾರರಿಗೆ ಸರ್ಕಾರ ಖಾತರಿ ನೀಡುತ್ತದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Fri, 6 January 23