AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KYC Update: ಕೆವೈಸಿ ಅಪ್​ಡೇಟ್​ಗೆ ಬ್ಯಾಂಕ್ ಶಾಖೆಗೆ ತೆರಳಬೇಕಿಲ್ಲ; ಆರ್​ಬಿಐ

ಆರಂಭದಲ್ಲಿ ಬ್ಯಾಂಕ್​ಗೆ ಸಲ್ಲಿಸಿದ್ದ ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಅಥವಾ ಇತರ ಯಾವುದೇ ವಿಧಾನದ ಮೂಲಕ ಸ್ವ ದೃಢೀಕರಣ ಮಾಡಬಹುದು ಎಂದು ಆರ್​​ಬಿಐ ಹೇಳಿದೆ.

KYC Update: ಕೆವೈಸಿ ಅಪ್​ಡೇಟ್​ಗೆ ಬ್ಯಾಂಕ್ ಶಾಖೆಗೆ ತೆರಳಬೇಕಿಲ್ಲ; ಆರ್​ಬಿಐ
RBI repo rate hike Best time to book your fixed deposits FDs know interest rates here Image Credit source: PTI
TV9 Web
| Edited By: |

Updated on: Jan 06, 2023 | 1:49 PM

Share

ನವದೆಹಲಿ: ಕೆವೈಸಿ (KYC) ಅಪ್​ಡೇಟ್ ಮಾಡುವುದಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ತೆರಳುವ ಅಗತ್ಯವಿಲ್ಲ ಎಂದು ಆರ್​ಬಿಐ (RBI) ಹೇಳಿದೆ. ಈಗಾಗಲೇ ಬ್ಯಾಂಕ್​ಗೆ ಅಗತ್ಯ ದಾಖಲೆಗಳನ್ನು ನೀಡಿದ್ದಲ್ಲಿ, ವಿಳಾಸ ಬದಲಾವಣೆ ಆಗಿರದಿದ್ದಲ್ಲಿ ಕೆವೈಸಿ ಅಪ್​​ಡೇಟ್​​ಗೆಂದು ಬ್ಯಾಂಕ್ ಶಾಖೆಗೆ ತೆರಳಬೇಕಾಗಿಲ್ಲ ಎಂದು ಆರ್​ಬಿಐ ಹೇಳಿದೆ. ಈ ಮೂಲಕ, ಅನವಶ್ಯಕ ಗ್ರಾಹಕರ ಸಮಯ ವ್ಯರ್ಥವಾಗುವುದನ್ನು ತಪ್ಪಿಸಿದೆ. ಆರಂಭದಲ್ಲಿ ಬ್ಯಾಂಕ್​ಗೆ ಸಲ್ಲಿಸಿದ್ದ ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಅಥವಾ ಇತರ ಯಾವುದೇ ವಿಧಾನದ ಮೂಲಕ ಸ್ವ ದೃಢೀಕರಣ ಮಾಡಬಹುದು ಎಂದು ಆರ್​​ಬಿಐ ಹೇಳಿದೆ.

ಕೆವೈಸಿ ಅಪ್​ಡೇಟ್; ಹೊಸ ಮಾರ್ಗಸೂಚಿಯಲ್ಲೇನಿದೆ?

ಕೆವೈಸಿ ಅಪ್​ಡೇಟ್​ ವಿಚಾರವಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆಯ ಬೆನ್ನಲ್ಲೇ ಆರ್​​ಬಿಐ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿ ಪ್ರಕಾರ, ಕೆವೈಸಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದಲ್ಲಿ ಗ್ರಾಹಕರು ಸ್ವ ದೃಢೀಕರಣದ ಮಾಡಿದರೆ ಸಾಕು. ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಎಟಿಎಂಗಳು, ಇಂಟರ್​​ನೆಟ್ ಬ್ಯಾಂಕಿಂಗ್​​ನಂಥ ಡಿಜಿಟಲ್ ವಿಧಾನಗಳ ಮೂಲಕ ಬ್ಯಾಂಕ್​ಗಳು ಗ್ರಾಹಕರು ಸ್ವ-ದೃಢೀಕರಣ ಮಾಡಿರುವುದನ್ನು ಪರಿಶೀಲಿಸಬೇಕು. ಗ್ರಾಹಕರ ಜತೆ ಮುಖಾಮುಖಿ ಸಂವಹನ ಅಗತ್ಯವಿಲ್ಲ. ಅವರನ್ನು ಶಾಖೆಗಳಿಗೆ ಕರೆಸಿಕೊಳ್ಳುವ ಅತ್ಯವೂ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bank Locker Rules: ಲಾಕರ್ ವಸ್ತುಗಳಿಗೆ ಹಾನಿಯಾದರೆ ಬ್ಯಾಂಕ್​ಗಳು ನೀಡಬೇಕು ಭಾರೀ ಪರಿಹಾರ; ಹೊಸ ನಿಯಮದ ಪೂರ್ಣ ವಿವರ ಇಲ್ಲಿದೆ

ಬ್ಯಾಂಕ್​ಗಳು ನಿಯಮಿತವಾಗಿ ಗ್ರಾಹಕರ ದಾಖಲೆಗಳನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿ ಇಟ್ಟುಕೊಂಡಿರಬೇಕು. ದಾಖಲೆಗಳನ್ನು ಅಕ್ರಮ ಹಣಕಾಸು ವರ್ಗಾವಣೆ ಕಾಯ್ದೆ ಅನ್ವಯ ಪರಾಮರ್ಶಿಸಿ, ಅಪ್​ಡೇಟ್ ಮಾಡಿಕೊಳ್ಳುತ್ತಾ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಗ್ರಾಹಕರು ಸಲ್ಲಿಸಿದ್ದ ಕೆವೈಸಿ ದಾಖಲೆಗಳ ಸಿಂಧುತ್ವವು ಅವಧಿ ಮೀರಿರುವ ಸಂದರ್ಭಗಳಲ್ಲಿ ಕೂಡ ದಾಖಲೆಗಳನ್ನು ಸಮರ್ಪಕವಾಗಿ ಕಾಪಿಡುವುದು ಅಗತ್ಯ. ಇಂಥ ಸಂದರ್ಭಗಳಲ್ಲಿ, ಗ್ರಾಹಕರು ಸಲ್ಲಿಸಿದ ಕೆವೈಸಿ ದಾಖಲೆಗಳು / ಸ್ವಯಂ-ದೃಢೀಕರಣದ ಸ್ವೀಕೃತಿಯನ್ನು ಬ್ಯಾಂಕ್‌ಗಳು ಒದಗಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ