ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು (Technology) ಎಲ್ಲಾ ಕ್ಷೇತ್ರಗಳಲ್ಲಿಯೂ ವಿಸ್ತರಿಸುತ್ತಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನ ಬಂದ ನಂತರ ಎಲ್ಲ ವಿಭಾಗಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ನಾವು ಸೇವಿಸುತ್ತಿರುವ ಆಹಾರದ ಬಗ್ಗೆ ಮಾಹಿತಿ ನೀಡುವ ತಂತ್ರಜ್ಞಾನ ಕೂಡ ಬಂದಾಗಿದೆ. ಸಂಶೋಧಕರು ಇದರ ಭಾಗವಾಗಿ ಮೊಬೈಲ್ ಆ್ಯಪ್ ರಚಿಸಿದ್ದಾರೆ. ಈ ಆ್ಯಪ್ ಸಹಾಯದಿಂದ ನೀವು ಸೇವಿಸುವ ಆಹಾರದಲ್ಲಿ ಎಷ್ಟು ಪೌಷ್ಟಿಕಾಂಶದ ಮೌಲ್ಯವಿದೆ?, ಈ ಆಹಾರದಿಂದ ನೀವು ಎಷ್ಟು ಶಕ್ತಿ ಪಡೆಯುತ್ತೀರಿ?, ದೇಹಕ್ಕೆ ಬೇಕಾದ ಪ್ರೊಟೀನ್ ಸಿಗುತ್ತಿದೆಯೇ?, ಇಲ್ಲವೇ ಎಂಬ ಎಲ್ಲ ಮಾಹಿತಿ ಈ ಆ್ಯಪ್ ನೀಡುತ್ತದೆ.
ಎಲ್ಲಾ ರೀತಿಯ ವಿವರಗಳನ್ನು ಒದಗಿಸುವ ಈ ಮೊಬೈಲ್ ಅಪ್ಲಿಕೇಶನ್ ಹೆಸರು NutriAid. ಈ ಅಪ್ಲಿಕೇಶನ್ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಅಭಿವೃದ್ಧಿಪಡಿಸಿದೆ. ಇಂದು ಹಸಿವಿನ ಸವಾಲುಗಳಿಗಿಂತ ಪೌಷ್ಟಿಕಾಂಶದ ಕೊರತೆಯು ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆ ಉದ್ದೇಶಕ್ಕಾಗಿ ಅವರು ಇ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಿದ್ದಾರೆ.
ನಿಮ್ಮ ಸ್ಮಾರ್ಟ್ಫೋನ್ ಕಳ್ಳತನವಾದರೆ ತಕ್ಷಣ ಈ 3 ಕೆಲಸಗಳನ್ನು ಮಾಡಿ
ಇಂಡೋ-ಜರ್ಮನ್ ಪರಸ್ಪರ ಸಹಕಾರದೊಂದಿಗೆ ಸುಮಾರು ಎರಡು ವರ್ಷಗಳ ಸಂಶೋಧನೆಯ ನಂತರ ಈ ಮೊಬೈಲ್ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ. ತಾರ್ನಾಕಾದ ಎನ್‌ಐಎನ್‌ನಲ್ಲಿ ಜರ್ಮನ್ ವಿಜ್ಞಾನಿಗಳೊಂದಿಗೆ ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಯಿತು. ಸ್ಮಾರ್ಟ್ಫೋನ್ ಮೂಲಕ ನೀವು ಸೇವಿಸುವ ಆಹಾರವನ್ನು ಸರಳವಾಗಿ ಸ್ಕ್ಯಾನ್ ಮಾಡಿದರೆ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಶೇಕಡಾವಾರು ವಿವರಗಳು ಡಿಸ್ಪ್ಲೇ ಮೇಲೆ ಕಾಣಿಸುತ್ತವೆ. ಈ ಅಪ್ಲಿಕೇಶನ್ ಬಗ್ಗೆ ಸಂಪೂರ್ಣ ವಿವರಗಳನ್ನು nutriaide.org ವೆಬ್‌ಸೈಟ್‌ನಲ್ಲಿ ನೋಡಬಹುದು.
ಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ವಿವೋದ ಬೆಸ್ಟ್ ಸ್ಮಾರ್ಟ್ಫೋನ್
ಇದೇ ವೇಳೆ ಈ ಆ್ಯಪ್ ಬಗ್ಗೆ ಎನ್ ಐಎನ್ ನಿರ್ದೇಶಕಿ ಡಾ. ಹೇಮಲತಾ ಮಾತನಾಡಿ, ಈ ಆ್ಯಪ್ ದೇಶದಲ್ಲಿರುವ 5,500 ಆಹಾರಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ಯಾಕೆಟ್‌ಗಳಲ್ಲಿ ಲಭ್ಯವಿರುವ ಆಹಾರದ 12% ವರೆಗೆ ಈ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾಗಿದೆ ಎಂದು ಅವರು ಹೇಳಿದರು. ಆಗ್ಸ್‌ಬರ್ಗ್ ಸೆಂಟರ್ ಫಾರ್ ಕ್ಲೈಮೇಟ್ ರೆಸಿಲಿಯನ್ಸ್‌ನ ಮಾನವ ಭೂಗೋಳಶಾಸ್ತ್ರಜ್ಞ ಪ್ರೊ.ಮಾರ್ಕಸ್ ಕೆಕ್, ಈ ಅಪ್ಲಿಕೇಶನ್ ಅನ್ನು NIN ಸಹಯೋಗದೊಂದಿಗೆ ತರಲಾಗಿದೆ ಎಂದು ಹೇಳಿದರು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ