Tech Tips: ನಿಮ್ಮ ಸ್ಮಾರ್ಟ್ಫೋನ್ ಕಳ್ಳತನವಾದರೆ ತಕ್ಷಣ ಈ 3 ಕೆಲಸಗಳನ್ನು ಮಾಡಿ
Phone Stolen: ಸ್ಮಾರ್ಟ್ಫೋನ್ ಕಳೆದು ಹೋದಾಗ ಅಥವಾ ಕಳ್ಳತನವಾದರೆ ಏನು ಮಾಡಬೇಕು ಎಂದು ದೋಚುವುದಿಲ್ಲ. ಗಾಬರಿಯಲ್ಲಿ ಇರುತ್ತೇವೆ. ಇಂಥ ಸಂದರ್ಭ ನಾವು ಮಾಡಬೇಕಾದ ಕೆಲವು ಕೆಲಸಗಳಿವೆ. ಸ್ಮಾರ್ಟ್ಫೋನ್ಗಳು ಕಾಣೆಯಾದಾಗ ತಕ್ಷಣ ಹೀಗೆ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಂಭವವಿರುತ್ತದೆ.
ಇಂದು ಸ್ಮಾರ್ಟ್ಫೋನ್ (Smartphone) ನಮ್ಮ ಜೀವನದ ಒಂದು ಭಾಗವಾಗಿದೆ, ಮೊಬೈಲ್ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಕಡೆಗಳಲ್ಲಿ ಮೊಬೈಲ್ ಬಳಕೆ ಬೇಕೇ ಬೇಕು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಇಂದು ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಸಿಗುವುದರಿಂದ ಇದರ ಬಗ್ಗೆ ಜಾಗರೂಕವಾಗಿರುವುದು ಕೆಲವರು ಮಾತ್ರ. ಹೀಗಾಗಿ ಇದು ಕಳ್ಳತನ ಆಗುವುದು ಅಥವಾ ಕಳೆದುಹೋಗುವ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಅಂತಹ ಸಮಯದಲ್ಲಿ ನಾವು ಭಯ ಪಡುತ್ತೇವೆ. ಫೋನ್ ಕಳೆದು ಹೋದಾಗ ಏನು ಮಾಡಬೇಕು ಎಂದು ದೋಚುವುದಿಲ್ಲ. ನಿಮ್ಮ ಫೋನ್ ಎಲ್ಲಿಯಾದರೂ ಬಿದ್ದರೆ ಅಥವಾ ಕಳೆದುಹೋದರೆ ತಕ್ಷಣ ಮಾಡಬೇಕಾದ ಕೆಲವು ಕೆಲಸಗಳಿವೆ.
ಸ್ಮಾರ್ಟ್ಫೋನ್ಗಳು ಕಾಣೆಯಾದಾಗ ತಕ್ಷಣ ಹೀಗೆ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಂಭವವಿರುತ್ತದೆ. ಇಂದಿನ ಕಾಲದಲ್ಲಿ ಮೊಬೈಲ್‌ಗಳಲ್ಲಿ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಇತರ ಹಲವು ಹಣಕಾಸು ಸೇವೆಗಳು ಆನ್ ಆಗಿರುತ್ತದೆ. ಇದರಿಂದ ಮೊಬೈಲ್ ಕಳ್ಳತನವಾದರೆ ಬ್ಯಾಂಕ್ ಖಾತೆ ಖಾಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಮೊಬೈಲ್ ಕಳ್ಳತನವಾದರೆ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ.
ಆನ್ಲೈನ್ನಲ್ಲಿ ಸುಲಭವಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಿ: ಮನೆಗೇ ಬರುತ್ತೆ ಕಾರ್ಡ್
ನಿಮ್ಮ ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಿ: ಮೊದಲು, ನಿಮ್ಮ ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ. ಇದಕ್ಕಾಗಿ ನೀವು ನಿಮ್ಮ ಟೆಲಿಕಾಂ ಆಪರೇಟರ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು ಅಥವಾ 14422 ಸಂಖ್ಯೆಯನ್ನು ಡಯಲ್ ಮಾಡಬಹುದು.
ಎಫ್‌ಐಆರ್ ದಾಖಲಿಸಿ: ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ. ಎಫ್‌ಐಆರ್‌ನಲ್ಲಿ ಫೋನ್ IMEI ಸಂಖ್ಯೆ, ಇತರ ಮಾಹಿತಿಯನ್ನು ಒದಗಿಸಬೇಕು.
ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಲಾಕ್ ಮಾಡಿ ಮತ್ತು ಡೇಟಾವನ್ನು ತೆರವುಗೊಳಿಸಿ: ನೀವು ಫೋನ್‌ನಲ್ಲಿ ‘ಫೈಂಡ್ ಮೈ ಡಿವೈಸ್’ ಅಥವಾ ‘ಫೈಂಡ್ ಮೈ ಫೋನ್’ ವೈಶಿಷ್ಟ್ಯವನ್ನು ಆನ್ ಮಾಡಿದ್ದರೆ, ರಿಮೋಟ್ ಆಗಿ ಲಾಕ್ ಮಾಡಲು ಮತ್ತು ನಿಮ್ಮ ಡೇಟಾವನ್ನು ಅಳಿಸಲು ನೀವು ಅದನ್ನು ಬಳಸಬಹುದು.
ಲ್ಯಾಪ್ಟಾಪ್ ಇರುವವರು ಕೂಡಲೇ ಈ ತಪ್ಪು ಮಾಡುವುದನ್ನು ನಿಲ್ಲಿಸಿ: ಇಲ್ಲದಿದ್ದರೆ ಅಪಾಯ ಖಚಿತ
- ನೀವು ಮುಂಚಿತವಾಗಿ ಫೋನ್‌ನ IMEI ಸಂಖ್ಯೆ ಮತ್ತು ಇತರ ಪ್ರಮುಖ ಮಾಹಿತಿಯನ್ನು ಬರೆದಿಟ್ಟುಕೊಂಡರೆ ಉತ್ತಮ.
- ನಿಮ್ಮ ಫೋನ್‌ನಲ್ಲಿ “ಫೈಂಡ್ ಮೈ ಫೋನ್” ವೈಶಿಷ್ಟ್ಯವನ್ನು ಆನ್ ಮಾಡಿ.
- ಪಾಸ್ವರ್ಡ್ ಅಥವಾ ಪಿನ್ ಮೂಲಕ ನಿಮ್ಮ ಫೋನ್ ಅನ್ನು ರಕ್ಷಿಸಿ.
ಈ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಫೋನ್ ಅನ್ನು ಕಳ್ಳತನದಿಂದ ರಕ್ಷಿಸಬಹುದು ಮತ್ತು ನಿಮ್ಮ ವೈಯಕ್ತಿಕ ವಿವರ ತಿಳಿದುಕೊಳ್ಳುವುದನ್ನು ತಡೆಯಬಹುದು. ನಿಮ್ಮ ಕದ್ದ ಫೋನ್ ಅನ್ನು ಪತ್ತೆ ಮಾಡಲು ಇದು ಸಹಾಯ ಮಾಡುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ