AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಸ್ಮಾರ್ಟ್​ಫೋನ್​ಗೆ ವಯಸ್ಸಾಗಿದೆಯೇ?: ಹಳೆಯ ಮೊಬೈಲ್ ಅನ್ನು ಹೊಸದರಂತೆ ಮಾಡಿ

Smartphone Tips: ಸ್ಮಾರ್ಟ್​ಫೋನ್ ಹೊರಗಡೆ ಎಷ್ಟೇ ಶೈನಿಯಾಗಿದ್ದರೂ ಅದು ರಿಯಲ್ ಟೈಮ್‌ಗೆ ಕೆಲಸ ಮಾಡದಿದ್ದರೆ ಕೆಟ್ಟ ಕೋಪ ಬರುತ್ತದೆ. ಆದ್ದರಿಂದ ನೀವು ಫೋನಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಫೋನ್ ಹಳೆಯದಾಗುತ್ತಿದ್ದಂತೆ, ಕೆಲ ಮಾರ್ಪಾಡು ಮಾಡಬೇಕಾಗುತ್ತದೆ. ಆದ್ದರಿಂದ ನೀವು ಈ ಎಲ್ಲಾ ಅಂಶಗಳ ಮೇಲೆ ನಿಗಾ ಇಡಬೇಕು.

Tech Tips: ನಿಮ್ಮ ಸ್ಮಾರ್ಟ್​ಫೋನ್​ಗೆ ವಯಸ್ಸಾಗಿದೆಯೇ?: ಹಳೆಯ ಮೊಬೈಲ್ ಅನ್ನು ಹೊಸದರಂತೆ ಮಾಡಿ
Smartphones
Vinay Bhat
|

Updated on: Feb 15, 2024 | 1:48 PM

Share

ಸಾಮಾನ್ಯವಾಗಿ ಸ್ಮಾರ್ಟ್​ಫೋನ್ (Smartphone) ಹಳೆಯದಾಗುತ್ತಿದ್ದಂತೆ, ಅದರಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೊರಗಡೆ ಎಷ್ಟೇ ಹೊಳೆಯುತ್ತಿದ್ದರೂ ಅಗತ್ಯವಿದ್ದಾಗ ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ, ಹ್ಯಾಂಗ್ ಆಗುತ್ತಿದ್ದರೆ ಕೆಟ್ಟ ಕೋಪ ಬರುತ್ತದೆ. ಆದ್ದರಿಂದ ನೀವು ಫೋನಿನ ಬಗ್ಗೆ ಜಾಗರೂಕರಾಗಿರಬೇಕು. ಮುಖ್ಯವಾಗಿ ಫೋನ್ ಹಳೆಯದಾದಂತೆ ಅದಕ್ಕೆ ವಿಶೇಷ ಕಾಳಜಿ ಬೇಕಾಗುತ್ತದೆ. ಇಲ್ಲಿ ನಾವು ತಿಳಿಸುವ ಕೆಲ ಅಂಶಗಳ ಮೇಲೆ ನಿಗಾ ಇಟ್ಟರೆ ನಿಮ್ಮ ಹಳೆಯ ಫೋನ್ ಹೊಚ್ಚ ಹೊಸ ರೀತಿಯಲ್ಲಿ ಕೆಲಸ ಮಾಡಲು ಶುರುಮಾಡುತ್ತದೆ.

ಫೋನ್ ಅನ್ನು ನವೀಕರಿಸಿ:

ಅನೇಕ ಬಾರಿ ಜನರು ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್ ಕೊಟ್ಟೇ ಇರುವುದಿಲ್ಲ. ಈ ಕಾರಣದಿಂದಾಗಿ, ಫೋನ್ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುವುದಿಲ್ಲ. ಫೋನ್ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತದೆ. ಅಲ್ಲದೆ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಫೋನ್ ನಿಧಾನವಾಗಿ ಹ್ಯಾಂಗ್ ಆದರೆ ಅದೊಂದು ದೊಡ್ಡ ಸಮಸ್ಯೆ. ಅಪ್ಡೇಟ್ ಕೊಟ್ಟರೆ ಹೆಚ್ಚಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಭಾರತಕ್ಕೆ ಬಂತು ಆಕರ್ಷಕವಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್: ಬೆಲೆ ಕೇವಲ 7,299 ರೂ.

ಹೊಸ ಲಾಂಚರ್ ಡೌನ್‌ಲೋಡ್ ಮಾಡಿ:

ಆಂಡ್ರಾಯ್ಡ್ ಫೋನ್‌ಗಳ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ನೀವು ಅವುಗಳಲ್ಲಿ ಸಾಕಷ್ಟು ಕಸ್ಟಮೈಸೇಶನ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್​ನಿಂದ ಹೊಸ ಲಾಂಚರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ಕೆಲವು ಉತ್ತಮ ಲಾಂಚರ್‌ಗಳಾದ ನೋವಾ ಲಾಂಚರ್, ಆಕ್ಷನ್ ಲಾಂಚರ್ ಮತ್ತು ಮೈಕ್ರೋಸಾಫ್ಟ್ ಲಾಂಚರ್ ಇದನ್ನು ಇನ್​ಸ್ಟಾಲ್ ಮಾಡಿ. ಇದು ಫೋನ್ ಅನ್ನು ಹೊಚ್ಚ ಹೊಸ ರೀತಿಯಲ್ಲಿ ಕೆಲಸ ಮಾಡುತ್ತದೆ.

ಡೇಟಾ ಕ್ಲೀನ್ ಮಾಡಿ:

ಫೋನ್ ಅನ್ನು ದೀರ್ಘಕಾಲ ಬಳಸಿದ ನಂತರ ಸಾಕಷ್ಟು ಡೇಟಾ ಸಂಗ್ರಹವಾಗಿರುತ್ತದೆ. ಆದ್ದರಿಂದ ಫೋನ್‌ನಿಂದ ಅನಗತ್ಯ ಮೀಡಿಯಾ ಫೈಲ್‌ಗಳನ್ನು ಡಿಲೀಟ್ ಮಾಡಿ. ಬೇಡದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಸೇವ್ ಮಾಡಿಟ್ಟ ಡೇಟಾವನ್ನು ಅಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಫೋನ್ ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ಇನ್ಮುಂದೆ ಹಣ ಬೇಕು ಅಂದ್ರೆ ಎಟಿಎಂಗೆ ಹೋಗಬೇಕಿಲ್ಲ: ಈ ಶಾಪ್​ನಲ್ಲಿ ಸಿಗುತ್ತದೆ

ಫೋನ್ ರೀಸೆಟ್ ಮಾಡಿ:

ಫೋನ್ ಅನ್ನು ಹೊಸದಾಗಿ ಕಾಣುವಂತೆ ಮಾಡಲು, ನೀವು ಒಮ್ಮೆ ಫ್ಯಾಕ್ಟರಿ ರೀಸೆಟ್ ಮಾಡಬಹುದು. ಇದು ನಿಮ್ಮ ಫೋನ್‌ನಿಂದ ಎಲ್ಲಾ ಜಂಕ್ ಫೈಲ್‌ಗಳನ್ನು ಡಿಲೀಟ್ ಮಾಡುತ್ತದೆ. ಆದರೆ ಫ್ಯಾಕ್ಟರಿ ರೀಸೆಟ್ ಮಾಡುವ ಮೊದಲು, ಫೋನ್ ಡೇಟಾದ ಬ್ಯಾಕಪ್ ತೆಗೆದುಕೊಳ್ಳಿ. ಏಕೆಂದರೆ ಫ್ಯಾಕ್ಟರಿ ರೀಸೆಟ್‌ನಲ್ಲಿ ಕಾಂಟೆಕ್ಟ್, ಫೋಟೋ, ವಿಡಿಯೋ ಎಲ್ಲಾ ಡೇಟಾವು ಡಿಲೀಟ್ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ