AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಇನ್ಮುಂದೆ ಹಣ ಬೇಕು ಅಂದ್ರೆ ಎಟಿಎಂಗೆ ಹೋಗಬೇಕಿಲ್ಲ: ಈ ಶಾಪ್​ನಲ್ಲಿ ಸಿಗುತ್ತದೆ

Virtual ATM: ಕೆಲವು ಸಂದರ್ಭದಲ್ಲಿ ನಿಮಗೆ ಅಗತ್ಯವಾಗಿ ನಗದು ಹಣ ಬೇಕಾಗಿರುತ್ತದೆ. ಆಗ ಯುಪಿಐ ಕಾರ್ಯನಿರ್ವಹಿಸುವುದಿಲ್ಲ. ಕೈಯಲ್ಲಿ ಡೆಬಿಟ್ ಕಾರ್ಡ್ ಇರುವುದಿಲ್ಲ, ಇದ್ದರೂ ಎಟಿಎಂನಲ್ಲಿ ಹಣ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ವರ್ಚುವಲ್ ಎಟಿಎಂ ಸಹಾಯದಿಂದ ಕ್ಯಾಶ್ ಪಡೆಯಬಹುದು. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಿ.

Tech Tips: ಇನ್ಮುಂದೆ ಹಣ ಬೇಕು ಅಂದ್ರೆ ಎಟಿಎಂಗೆ ಹೋಗಬೇಕಿಲ್ಲ: ಈ ಶಾಪ್​ನಲ್ಲಿ ಸಿಗುತ್ತದೆ
ATM Cash
Vinay Bhat
|

Updated on: Feb 15, 2024 | 11:48 AM

Share

ಇಂದು ಏಕೀಕೃತ ಪಾವತಿ ಇಂಟರ್ಫೇಸ್ ಅಂದರೆ ಯಪಿಐ (UPI) ದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಬಳಕೆದಾರರು ಮೊಬೈಲ್ ಮತ್ತು ಇಂಟರ್ನೆಟ್ ಬಳಸಿ ಆನ್‌ಲೈನ್ ಮೂಲಕ ಪಾವತಿಗಳನ್ನು ಮಾಡುತ್ತಾರೆ. ಹೀಗಾಗಿ ಅನೇಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಉಪಯೋಗಿಸುವುದೂ ಇಲ್ಲ. ಆದರೆ ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಕೆಲಸ ಮಾಡದಿದ್ದರೆ ನಗದು ಹಣ ಅಗತ್ಯವಿರುತ್ತದೆ. ಅಥವಾ QR ಕೋಡ್ ಅನ್ನು ವಿವಿಧ ಪ್ರದೇಶಗಳಲ್ಲಿ ಆನ್‌ಲೈನ್ ಪಾವತಿಗಾಗಿ ಇರಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಟಿಎಂ ಹುಡುಕುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹಾಗೊಂದು ವೇಳೆ ಎಟಿಎಂ ಸಿಕ್ಕರೂ ಅದರಲ್ಲಿ ಹಣ ಇಲ್ಲದಿದ್ದರೆ ಏನು ಮಾಡುವುದು?.

ಇಂಥ ಸಮಸ್ಯೆಗೆ ಇದೀಗ ಪರಿಹಾರ ಸಿಕ್ಕಿದೆ. ಅದೇ ವರ್ಚುವಲ್ ಎಟಿಎಂ. ವರ್ಚುವಲ್ ಎಟಿಎಂ ಸಹಾಯದಿಂದ ನೀವು ಈ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಿ.

ಯಾರಾದರು ನಿಮಗೆ ತಪ್ಪಾಗಿ ಹಣ ಕಳುಹಿಸಿದರೆ ಖುಷಿ ಪಡಬೇಡಿ: ಇದರ ಹಿಂದಿದೆ ಅತಿ ದೊಡ್ಡ ಜಾಲ

ವರ್ಚುವಲ್ ಎಟಿಎಂ ಎಂದರೇನು?

ಚಂಡೀಗಢ ಮೂಲದ ಫಿನ್‌ಟೆಕ್ ಕಂಪನಿಯು ವರ್ಚುವಲ್ ಎಟಿಎಂ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದು ಕಾರ್ಡ್‌ಲೆಸ್ ಮತ್ತು ಹಾರ್ಡ್‌ವೇರ್ ಲೆಸ್ ವಾಪಸಾತಿ ಸೇವೆಯಾಗಿದೆ. ಇದಕ್ಕೆ ಎಟಿಎಂ ಕಾರ್ಡ್ ಮತ್ತು ಪಿನ್ ಅಗತ್ಯವಿಲ್ಲ.

ವರ್ಚುವಲ್ ಎಟಿಎಂನಿಂದ ಹಣವನ್ನು ಪಡೆಯುವುದು ಹೇಗೆ

ವರ್ಚುವಲ್ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸ್ಮಾರ್ಟ್​ಫೋನ್ ಅಗತ್ಯವಿದೆ. ಜೊತೆಗೆ ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬೇಕು. ನಂತರ ನೀವು ಆನ್‌ಲೈನ್ ಮೊಬೈಲ್ ಬ್ಯಾಂಕಿಂಗ್‌ನಿಂದ ಹಣವನ್ನು ಹಿಂಪಡೆಯಲು ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕೂ ಮುನ್ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನಿಮ್ಮ ಫೋನ್ ನಂಬರ್​ಗೆ ಲಿಂಕ್ ಆಗಿರಬೇಕು.

OTP ಮೂಲಕ ಕಾರ್ಯ

ನಂತರ ನೀವು ಬ್ಯಾಂಕ್ ನೀಡುವ OTP ಅನ್ನು ನಮೂದಿಸಬೇಕು. ಈಗ ನೀವು ಪೇಮಾರ್ಟ್ ಅಂಗಡಿಯಲ್ಲಿ OTP ತೋರಿಸಬೇಕು. ಈ ರೀತಿಯಾಗಿ ಅಂಗಡಿಯವರಿಂದ ಹಣವನ್ನು ಹಿಂಪಡೆಯಬಹುದು. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನಿಮಗೆ ವರ್ಚುವಲ್ Paytm Paymart ನ ಅಂಗಡಿದಾರರ ಪಟ್ಟಿಯನ್ನು ತೋರಿಸುತ್ತದೆ, ಅಲ್ಲಿ ಹೆಸರು, ಸ್ಥಳ, ಫೋನ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ.

ಸ್ಯಾಮ್​ಸಂಗ್​ನ ಈ ಫೋನ್ ಬೆಲೆ ಭಾರತದಲ್ಲಿ ರೂ. 48,999, ಆದರೆ ಪಾಕಿಸ್ತಾನದಲ್ಲಿ 1.85 ಲಕ್ಷ

ವರ್ಚುವಲ್ ATM ಅನ್ನು ಯಾರು ಬಳಸಬಹುದು?

ವರ್ಚುವಲ್ ಎಟಿಎಂ ಐಡಿಬಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಜಮ್ಮು ಕಾಶ್ಮೀರ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ. ಪ್ರಸ್ತುತ, ಚಂಡೀಗಢ, ದೆಹಲಿ, ಹೈದರಾಬಾದ್, ಚೆನ್ನೈ, ಮುಂಬೈನ ಆಯ್ದ ಸ್ಥಳಗಳಲ್ಲಿ ವರ್ಚುವಲ್ ಎಟಿಎಂಗಳನ್ನು ಕಾಣಬಹುದು. ಇದು ಈ ವರ್ಷದ ಮಾರ್ಚ್ ವೇಳೆಗೆ ದೇಶಾದ್ಯಂತ ಲಭ್ಯವಾಗಲಿದೆ.

ಎಷ್ಟು ಹಣವನ್ನು ಹಿಂಪಡೆಯಬಹುದು?

ವರ್ಚುವಲ್ ಎಟಿಎಂನಿಂದ ನೀವು ಕನಿಷ್ಟ 100 ರೂ. ಮತ್ತು ಗರಿಷ್ಠ 2,000 ರೂ. ವರೆಗೆ ಪಡೆಯಬಹುದು. ಇದರ ಮಾಸಿಕ ಮಿತಿ 10 ಸಾವಿರ ರೂ. ಅಂದರೆ ತಿಂಗಳಿಗೆ 10 ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ಹಿಂಪಡೆಯುವಂತಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ