Redmi A3: ಭಾರತಕ್ಕೆ ಬಂತು ಆಕರ್ಷಕವಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್: ಬೆಲೆ ಕೇವಲ 7,299 ರೂ.

Redmi A3 Phone Launched in India: ಬಹಳ ದಿನಗಳ ನಂತರ ಪ್ರಸಿದ್ಧ ಶವೋಮಿ ಕಂಪನಿ ತನ್ನ ಸಬ್​ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ಹೊಸ ರೆಡ್ಮಿ A3 ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,299 ರೂ. ಇದೆ. ಫೆಬ್ರವರಿ 23 ರಿಂದ ಖರೀದಿಸಬಹುದು.

Redmi A3: ಭಾರತಕ್ಕೆ ಬಂತು ಆಕರ್ಷಕವಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್: ಬೆಲೆ ಕೇವಲ 7,299 ರೂ.
Redmi A3
Follow us
Vinay Bhat
|

Updated on: Feb 15, 2024 | 12:14 PM

ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಹೊಸ ಸ್ಮಾರ್ಟ್​ಫೋನ್ ಒಂದನ್ನು ಭಾರತದಲ್ಲಿ ಲಾಂಚ್ ಮಾಡಿದೆ. ತನ್ನ ಸಬ್​ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ಹೊಸ ರೆಡ್ಮಿ A3 (Redmi A3) ಫೋನನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಇದು ರೆಡ್ಮಿ A- ಸರಣಿಗೆ ಸೇರ್ಪಡೆಗೊಳ್ಳುತ್ತದೆ. ಈ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅತ್ಯುತ್ತಮ ಕ್ಯಾಮೆರಾ ಇದೆ. 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಬೆಲೆ ಕೂಡ ಹೆಚ್ಚು ನಿಗದಿ ಮಾಡಲಾಗಿಲ್ಲ. ಹಾಗಾದರೆ, ರೆಡ್ಮಿ A3 ಸ್ಮಾರ್ಟ್​ಫೋನ್​ನ ಬೆಲೆ ಎಷ್ಟು?, ಎನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ರೆಡ್ಮಿ A3 ಬೆಲೆ, ಲಭ್ಯತೆ:

ಹೊಸ ರೆಡ್ಮಿ A3 ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ ಬೇಸ್ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ 7,299 ರೂ. ಇದೆ. 4GB + 128GB ಆವೃತ್ತಿಯ ಬೆಲೆ ರೂ. 8,299. ಅಂತೆಯೆ 6GB + 128GB ಮಾದರಿಯ ಬೆಲೆ ರೂ. 9,299 ಆಗಿದೆ. ಕೈಗೆಟುಕುವ ಹ್ಯಾಂಡ್‌ಸೆಟ್ ಅನ್ನು ಮಿಡ್‌ನೈಟ್ ಬ್ಲ್ಯಾಕ್, ಲೇಕ್ ಬ್ಲೂ ಮತ್ತು ಆಲಿವ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು ಫೆಬ್ರವರಿ 23 ರಿಂದ ಫ್ಲಿಪ್​ಕಾರ್ಟ್, Mi.com ಮತ್ತು ಶವೋಮಿಯ ಚಿಲ್ಲರೆ ಪಾಲುದಾರರ ಮೂಲಕ ಖರೀದಿಸಬಹುದು.

ಇನ್ಮುಂದೆ ಹಣ ಬೇಕು ಅಂದ್ರೆ ಎಟಿಎಂಗೆ ಹೋಗಬೇಕಿಲ್ಲ: ಈ ಶಾಪ್​ನಲ್ಲಿ ಸಿಗುತ್ತದೆ

ರೆಡ್ಮಿ A2 ಅನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಆರಂಭಿಕ ಬೆಲೆ 2GB RAM + 32GB ಸ್ಟೋರೇಜ್ ರೂಪಾಂತರಕ್ಕೆ 5,999 ರೂ. ಆಗಿದೆ.

ರೆಡ್ಮಿ A3 ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೋ) ರೆಡ್ಮಿ A3 ಫೋನ್ ಆಂಡ್ರಾಯ್ಡ್ 13 (Go Edition) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.71-ಇಂಚಿನ HD+ (1,600×700 ಪಿಕ್ಸೆಲ್‌ಗಳು) ಡಿಸ್ಪ್ಲೇ ಜೊತೆಗೆ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ನೀಡಲಾಗಿದೆ. ಹೊಸ ರೆಡ್ಮಿ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ G36 SoC ಯಿಂದ ಚಾಲಿತವಾಗಿದ್ದು, 3GB RAM ನೊಂದಿಗೆ ಸಂಯೋಜಿಸಲ್ಪಟ್ಟಿದೆ. ವರ್ಚುವಲ್ RAM ಕಾರ್ಯನಿರ್ವಹಣೆಯೊಂದಿಗೆ, ಲಭ್ಯವಿರುವ ಮೆಮೊರಿಯನ್ನು 12GB ವರೆಗೆ ವಿಸ್ತರಿಸಬಹುದು.

ಸ್ಯಾಮ್​ಸಂಗ್​ನ ಈ ಫೋನ್ ಬೆಲೆ ಭಾರತದಲ್ಲಿ ರೂ. 48,999, ಆದರೆ ಪಾಕಿಸ್ತಾನದಲ್ಲಿ 1.85 ಲಕ್ಷ

8-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುವ ರೆಡ್ಮಿ A3 ನಲ್ಲಿ AI- ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಪ್ಯಾಕ್ ಮಾಡಲಾಗಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವಿದೆ.

ರೆಡ್ಮಿ A3 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ 5.0, GPS/ A-GPS, ಮೈಕ್ರೋ-ಯುಎಸ್‌ಬಿ ಪೋರ್ಟ್, ಗ್ಲೋನಾಸ್, 3.5 ಎಂಎಂ ಆಡಿಯೋ ಜ್ಯಾಕ್ ಸೇರಿವೆ. ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ