ಸ್ಯಾಮ್‌ಸಂಗ್‌ನ ಈ ಫೋನ್ ಬೆಲೆ ಭಾರತದಲ್ಲಿ ರೂ. 48,999, ಆದರೆ ಪಾಕಿಸ್ತಾನದಲ್ಲಿ 1.85 ಲಕ್ಷ
Samsung Galaxy S23 FE 5G Price in India and Pakistan: ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಮೆಜಾನ್ ಮೂಲಕ ಖರೀದಿಸಿದರೆ 48 ಸಾವಿರದ 900 ರೂ. ಇದೆ. ಅದೇ ಪಾಕಿಸ್ತಾನದಲ್ಲಿ ಈ ಫೋನಿನ ಬೆಲೆ ಬರೋಬ್ಬರಿ 1,84,999 ಆಗಿದೆ. ಪಾಕಿಸ್ತಾನದಲ್ಲಿ ಈ ಫೋನಿಗೆ ಯಾಕಿಷ್ಟು ಬೆಲೆ?. ಇಲ್ಲಿದೆ ನೋಡಿ ಮಾಹಿತಿ.
ಭಾರತದಲ್ಲಿ 50,000 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿರುವ ಅದೇ ಫೋನ್‌ಗೆ ಪಾಕಿಸ್ತಾನದ ಜನರು ಒಂದೂವರೆ ಲಕ್ಷಕ್ಕೂ ಅಧಿಕ ಹಣ ಪಾವತಿಸಬೇಕಾಗುತ್ತದೆ. ಈ ಸುದ್ದಿ ಕೇಳಿ ಶಾಕ್ ಆದ್ರೂ ಇದು ಸತ್ಯ. ನೀವು ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G (Samsung Galaxy S23 FE 5G) ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಗೆ ಪಡೆಯುತ್ತೀರಿ. ಆದರೆ ಮತ್ತೊಂದೆಡೆ, ಅದೇ ಫೋನ್‌ಗೆ ಪಾಕಿಸ್ತಾನದಲ್ಲಿ ಲಕ್ಷ ನೀಡಬೇಕು. ಗ್ಯಾಲಕ್ಸಿ S23 FE 5G ಮೊಬೈಲ್ ಫೋನ್‌ನ ಎರಡು ರೂಪಾಂತರಗಳಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಮಾರಾಟ ಮಾಡಲಾಗುತ್ತದೆ. ಇದು 8 GB RAM + 128 GB ಸಂಗ್ರಹಣೆ ಮತ್ತು 8 GB RAM + 256 GB ಸಂಗ್ರಹಣೆಯಿಂದ ಕೂಡಿದೆ.
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಸ್ಮಾರ್ಟ್‌ಫೋನ್‌ನಲ್ಲಿ ಸದ್ಯ ಅಮೆಜಾನ್‌ನಲ್ಲಿ 48 ಸಾವಿರದ 900 ರೂ. ಗಳಿಗೆ ಮಾರಾಟವಾಗುತ್ತಿದೆ. ಈ ಫೋನ್ 8 GB RAM / 128 GB ಸ್ಟೋರೇಜ್ ರೂಪಾಂತರದ್ದಾಗಿದೆ. ಈ ಹ್ಯಾಂಡ್‌ಸೆಟ್‌ನ 8 GB RAM / 256 GB ಸ್ಟೋರೇಜ್ ರೂಪಾಂತರಕ್ಕೆ ರೂ. 59,999 ನಿಗದಿ ಮಾಡಲಾಗಿದೆ.
ಪೋಕೋ X6 ಫೋನಿಗೆ ಭರ್ಜರಿ ಡಿಮ್ಯಾಂಡ್: ಹೊಸ ರೂಪಾಂತರದಲ್ಲಿ ಬಿಡುಗಡೆ, ಬೆಲೆ ಎಷ್ಟು?
ಪಾಕಿಸ್ತಾನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಬೆಲೆ
ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿ ಈ ಫೋನ್‌ನ 128 GB ಸ್ಟೋರೇಜ್ ರೂಪಾಂತರಕ್ಕೆ 1,84,999 ರೂ. ಇದೆ. ಅದೇ 256 GB ರೂಪಾಂತರವು 1,89,999 ರೂ. ಗೆ ಪಟ್ಟಿಮಾಡಲ್ಪಟ್ಟಿದೆ. ಈ ಬೆಲೆಯನ್ನು ನಾವು ಭಾರತಕ್ಕೆ ಕನ್ವರ್ಟ್ ಮಾಡಿ ನೋಡಿದರೆ 128 GB ರೂಪಾಂತರದ ಬೆಲೆ 54,936 ಮತ್ತು 256 GB ಮಾದರಿಯ ಬೆಲೆ 56,421 ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಫೀಚರ್ಸ್ (ಭಾರತೀಯ ರೂಪಾಂತರ)
ಡಿಸ್‌ಪ್ಲೇ: ಭಾರತದಲ್ಲಿ ಈ ಸ್ಮಾರ್ಟ್‌ಫೋನ್ 6.4 ಇಂಚಿನ ಡೈನಾಮಿಕ್ ಪೂರ್ಣ-HD ಪ್ಲಸ್ AMOLED 2X ಡಿಸ್‌ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದೆ.
ಚಿಪ್‌ಸೆಟ್: ಈ ಸ್ಮಾರ್ಟ್‌ಫೋನ್‌ನಲ್ಲಿ Exynos 2200 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಬಳಸಲಾಗಿದೆ.
ಕ್ಯಾಮೆರಾ ಸೆಟಪ್: OIS ಬೆಂಬಲದೊಂದಿಗೆ 50MP ಪ್ರಾಥಮಿಕ ಸಂವೇದಕ, ಜೊತೆಗೆ 12MP ಅಲ್ಟ್ರಾ-ವೈಡ್ ಸಂವೇದಕ ಮತ್ತು 8MP ಟೆಲಿಫೋಟೋ ಸಂವೇದಕವನ್ನು ಹಿಂಭಾಗದಲ್ಲಿ ಒದಗಿಸಲಾಗಿದೆ. 10 MP ಸೆಲ್ಫಿ ಸಂವೇದಕವು ಮುಂಭಾಗದಲ್ಲಿ ಲಭ್ಯವಿದೆ.
ಫೋನ್‌ನಲ್ಲಿ ಮಾತನಾಡುತ್ತಿರುವಾಗ ದಿಢೀರ್ ಕಾಲ್ ಕಟ್ ಆಗುತ್ತಾ?: ಅಲ್ಲೊಂದು ಸಮಸ್ಯೆ ಇದೆ
ಬ್ಯಾಟರಿ ಸಾಮರ್ಥ್ಯ: ಫೋನ್‌ನಲ್ಲಿ 4500mAh ಬ್ಯಾಟರಿ ನೀಡಲಾಗಿದ್ದು, ಇದು 25 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ ಬರುತ್ತದೆ. ಇದು ಕೇವಲ 30 ನಿಮಿಷಗಳಲ್ಲಿ ಫೋನ್ 0 ರಿಂದ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಫೀಚರ್ಸ್ (ಪಾಕಿಸ್ತಾನಿ ರೂಪಾಂತರ)
ಡಿಸ್‌ಪ್ಲೇ: ಈ ಸ್ಮಾರ್ಟ್‌ಫೋನ್ 6.4 ಇಂಚಿನ ಪೂರ್ಣ-HD ಪ್ಲಸ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಇದು 120 Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.
ಪ್ರೊಸೆಸರ್: ಆಕ್ಟಾ-ಕೋರ್ ಎಕ್ಸಿನೋಸ್ 2200 ಪ್ರೊಸೆಸರ್ ಅನ್ನು ಈ ಸ್ಯಾಮ್‌ಸಂಗ್ ಫೋನ್‌ನಲ್ಲಿ ವೇಗ ಮತ್ತು ಬಹುಕಾರ್ಯಕ್ಕಾಗಿ ಬಳಸಲಾಗಿದೆ.
ಕ್ಯಾಮೆರಾ ಸೆಟಪ್: ಹಿಂಭಾಗವು 50MP ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್ ಸಂವೇದಕ ಮತ್ತು 8MP ಟೆಲಿಫೋಟೋ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಅದೇ ಸಮಯದಲ್ಲಿ, ಮುಂಭಾಗದಲ್ಲಿ 10 MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಸಾಮರ್ಥ್ಯ: ಫೋನ್ 4500 mAh ಬ್ಯಾಟರಿಯನ್ನು ಹೊಂದಿದ್ದು ಇದು 25 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜ್ ಅನ್ನು ಬೆಂಬಲಿಸುತ್ತದೆ.
ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಪಾಕಿಸ್ತಾನ ಅಥವಾ ಭಾರತವಾಗಿರಲಿ, ಎರಡೂ ದೇಶಗಳಲ್ಲಿ ಒಂದೇ ರೀತಿಯ ಫೀಚರ್ಗಳನ್ನು ಹೊಂದಿದೆ. ಒಂದೇ ವ್ಯತ್ಯಾಸವೆಂದರೆ ಬೆಲೆ. ಪಾಕಿಸ್ತಾನದಲ್ಲಿ ಹೆಚ್ಚಿನ ಬೆಲೆಯ ಹಿಂದೆ ಎರಡೂ ದೇಶಗಳ ತೆರಿಗೆ ನಿಬಂಧನೆಗಳಲ್ಲಿನ ವ್ಯತ್ಯಾಸ ಮತ್ತು ಕರೆನ್ಸಿಯ ಮೌಲ್ಯ ಮುಂತಾದ ಹಲವು ಕಾರಣಗಳಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ