Tech Tips: ಲ್ಯಾಪ್​ಟಾಪ್ ಇರುವವರು ಕೂಡಲೇ ಈ ತಪ್ಪು ಮಾಡುವುದನ್ನು ನಿಲ್ಲಿಸಿ: ಇಲ್ಲದಿದ್ದರೆ ಅಪಾಯ ಖಚಿತ

Laptop Battery Life Tips: ನಾವು ಮಾಡುವ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದಲೇ ಲ್ಯಾಪ್‌ಟಾಪ್ ಬ್ಯಾಟರಿ ಹಾಳಾಗುತ್ತದೆ ಎಂದು ನಿಮಗೆ ತಿಳಿದಿದೆಯೇ. ಕೆಲವು ಬ್ಯಾಟರಿಗಳು ಒಂದು ವರ್ಷ ಕೂಡ ಬರುವುದಿಲ್ಲ. ಬ್ಯಾಟರಿ ಹಾಳಾದರೆ ಅದನ್ನು ಬದಲಾಯಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ, ಇಂದಿನಿಂದಲೇ ಈ ತಪ್ಪುಗಳನ್ನು ಮಾಡುವುದು ನಿಲ್ಲಿಸಿ.

Tech Tips: ಲ್ಯಾಪ್​ಟಾಪ್ ಇರುವವರು ಕೂಡಲೇ ಈ ತಪ್ಪು ಮಾಡುವುದನ್ನು ನಿಲ್ಲಿಸಿ: ಇಲ್ಲದಿದ್ದರೆ ಅಪಾಯ ಖಚಿತ
Laptop
Follow us
Vinay Bhat
|

Updated on: Feb 19, 2024 | 11:53 AM

ಯಾವುದೇ ಗ್ಯಾಜೆಟ್ ಆಗಿರಲಿ ಅದಕ್ಕೆ ಬ್ಯಾಟರಿ ಬಹಳ ಮುಖ್ಯ. ಬ್ಯಾಟರಿಯು (Battery) ಗ್ಯಾಜೆಟ್‌ಗೆ ಜೀವ ನೀಡುವ ಪ್ರಮುಖ ಸಾಧನವಾಗಿದೆ. ಆದರೆ ತಿಳಿದೋ ಅಥವಾ ತಿಳಿಯದೆಯೋ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ, ಇದು ಬ್ಯಾಟರಿಯ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದರಿಂದ ಲ್ಯಾಪ್‌ಟಾಪ್ ಬ್ಯಾಟರಿಯು ಒಂದು ವರ್ಷ ಕೂಡ ಬಾರದೆ ಕೆಲವೇ ತಿಂಗಳುಗಳಲ್ಲಿ ಹಾನಿಗೊಳಗಾಗುತ್ತದೆ. ಲ್ಯಾಪ್​ಟಾಪ್ ಬ್ಯಾಟರಿಯ ಆರೋಗ್ಯ ಚೆನ್ನಾಗಿ ಇರಲು ಏನು ಮಾಡಬೇಕು ಎಂಬ ಬಗ್ಗೆ ನಾವು ಇಲ್ಲಿ ತಿಳಿಸುತ್ತೇವೆ.

ಲ್ಯಾಪ್​ಟಾಪ್ ಬ್ಯಾಟರಿ ಹಾಳಾದರೆ ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಇದನ್ನು ತಪ್ಪಿಸಲು ನೀವು ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.

ಬಿಡುಗಡೆಗೆ ಸಜ್ಜಾದ ಒಪ್ಪೋದ ಹೊಸ F25 ಸ್ಮಾರ್ಟ್​ಫೋನ್: ಹೇಗಿದೆ?, ಬೆಲೆ ಎಷ್ಟು?

ತಾಪಾಮಾನ

ಲ್ಯಾಪ್‌ಟಾಪ್ ಅತಿಯಾಗಿ ಬಿಸಿಯಾಗಲು ಪ್ರಾರಂಭಿಸಿದಾಗ, ಇದು ನಿಮ್ಮ ಲ್ಯಾಪ್‌ಟಾಪ್‌ನ ಬ್ಯಾಟರಿಯು ಪರಿಣಾಮ ಬೀರುತ್ತಿದೆ ಎಂದು ಅರ್ಥಮಾಡಿಕೊಳ್ಳಿ. ನೀವು ಬಿಸಿಲಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಅಥವಾ ಬಿಸಿಯಾದಂತಹ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಇದು ಸಿಸ್ಟಮ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀಳುತ್ತದೆ. ಇಲ್ಲಿ ಲ್ಯಾಪ್​ಟಾಪ್ ಕೂಡ ಬಿಸಿಯಾಗಲು ಪ್ರಾರಂಭಿಸುತ್ತದೆ. ಹೀಗಾಗಿ ಲ್ಯಾಪ್‌ಟಾಪ್ ಹೀಟ್ ಆಗುವಂತಹ ಯಾವುದೇ ಕೆಲಸವನ್ನು ಮಾಡಬೇಡಿ.

ಚಾರ್ಜಿಂಗ್

ಬ್ಯಾಟರಿ ಕಡಿಮೆಯಾದ ತಕ್ಷಣ ಲ್ಯಾಪ್‌ಟಾಪ್ ಅನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಅಭ್ಯಾಸ ಅನೇಕರಲ್ಲಿದೆ. ಹಾಗೆಯೆ ಬ್ಯಾಟರಿಯನ್ನು ಶೇಕಡಾ 100 ರಷ್ಟು ಚಾರ್ಜ್ ಮಾಡಿದ ನಂತರವೂ ಅದನ್ನು ದೀರ್ಘಕಾಲದವರೆಗೆ ಚಾರ್ಜ್ ಇಡುವುದರಿಂದ ಬ್ಯಾಟರಿಯ ಜೀವಿತಾವಧಿ ಕುಗ್ಗುತ್ತದೆ. ಆದ್ದರಿಂದ, ಲ್ಯಾಪ್‌ಟಾಪ್ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ಬದಲು, ಅದನ್ನು 80 ಪ್ರತಿಶತದವರೆಗೆ ಮಾತ್ರ ಚಾರ್ಜ್ ಮಾಡಿ ಪ್ಲಗ್ ತೆಗೆಯಿರಿ. ಲ್ಯಾಪ್‌ಟಾಪ್ ಅನ್ನು ಅಗತ್ಯವಿದ್ದಾಗ ಮಾತ್ರ ಚಾರ್ಜ್‌ನಲ್ಲಿ ಇರಿಸಿ.

ಸ್ಯಾಮ್​ಸಂಗ್​ನಿಂದ ಅದ್ಭುತ: ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್

ಬ್ಯಾಟರಿ ಡೆಡ್

ಲ್ಯಾಪ್‌ಟಾಪ್‌ನ ಬ್ಯಾಟರಿ ಪೂರ್ತಿಯಾಗಿ ಡೆಡ್ ಆದ ನಂತರ ಮಾತ್ರ ಚಾರ್ಜ್‌ಗೆ ಹಾಕುತ್ತೇವೆ ಎಂದು ಕೆಲವರು ಭಾವಿಸುತ್ತಾರೆ, ಆದರೆ ಹಾಗೆ ಮಾಡುವುದು ಸರಿಯಲ್ಲ. ಲ್ಯಾಪ್‌ಟಾಪ್ ಬ್ಯಾಟರಿಯು ಶೇಕಡಾ 20 ಕ್ಕೆ ಇಳಿದರೆ ಲ್ಯಾಪ್‌ಟಾಪ್ ಅನ್ನು ಚಾರ್ಜ್ ಮಾಡಿ, ಬ್ಯಾಟರಿ ಸಂಪೂರ್ಣವಾಗಿ ಮುಗಿಯುವ ತನಕ ಕಾಯಬೇಡಿ.

ತಪ್ಪು ಚಾರ್ಜಿಂಗ್

ಹೊಸ ಲ್ಯಾಪ್‌ಟಾಪ್‌ನೊಂದಿಗೆ ಕೊಟ್ಟ ಚಾರ್ಜರ್ ಕೆಟ್ಟುಹೋದ ನಂತರ ಹಣವನ್ನು ಉಳಿಸಲು ಅನೇಕ ಜನರು ಲೋಕಲ್ ಚಾರ್ಜರ್ ಅನ್ನು ಖರೀದಿಸುವುದು ಹಲವು ಬಾರಿ ಕಂಡುಬಂದಿದೆ. ಸಹಜವಾಗಿ, ಇದನ್ನು ಮಾಡುವುದರಿಂದ ನಿಮ್ಮ ಹಣವನ್ನು ಉಳಿಯುತ್ತದೆ ನಿಜ, ಆದರೆ ಸ್ಥಳೀಯ ಚಾರ್ಜರ್ ಅನ್ನು ಬಳಸುವುದರಿಂದ ನಿಮ್ಮ ಲ್ಯಾಪ್‌ಟಾಪ್‌ನ ಬ್ಯಾಟರಿ ಹಾನಿಯಾಗಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್