ಸ್ಯಾಮ್​ಸಂಗ್​ನಿಂದ ಅದ್ಭುತ: ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್

Samsung Galaxy Z Fold 6: ಸ್ಯಾಮ್‌ಸಂಗ್‌ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ Z ಫೋಲ್ಡ್ 6 ನ ಕ್ಯಾಮೆರಾ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಮಾಧ್ಯಮ ವರದಿಗಳ ಪ್ರಕಾರ, ಟಿಪ್‌ಸ್ಟರ್ ರೆವೆಗ್ನಸ್ ಸ್ಯಾಮ್‌ಸಂಗ್‌ನ ಹೊಸ ಫೋಲ್ಡಬಲ್ ಫೋನ್ ಅನ್ನು 200MP ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಬಹುದು ಎಂದು ಹೇಳಿದ್ದಾರೆ.

ಸ್ಯಾಮ್​ಸಂಗ್​ನಿಂದ ಅದ್ಭುತ: ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್
Samsung galaxy z fold 6
Follow us
|

Updated on: Feb 18, 2024 | 12:07 PM

ಸ್ಯಾಮ್‌ಸಂಗ್ ವಿಶ್ವದಲ್ಲಿ ಅದ್ಭುತವಾದ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು (Foldable Phone) ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದರ ಬೆಲೆ ಕೂಡ ದುಬಾರಿ ಆಗಿದೆ. ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಫೋನ್‌ಗಳ ಬೆಲೆಗಳು ಗ್ಯಾಲಕ್ಸಿ S ಮಾದರಿಗಳಿಗಿಂತ ಹೆಚ್ಚಿಬೆ. ಆದರೆ, ಹೆಚ್ಚಿನ ಬೆಲೆಯ ಹೊರತಾಗಿಯೂ, ಮಡಿಸಬಹುದಾದ ಫೋನ್‌ಗಳಲ್ಲಿ ವಾವ್ ಎನ್ನುವಂತಹ ಕ್ಯಾಮೆರಾ ಲಭ್ಯವಿಲ್ಲ. ಆದರೆ, ಈ ಬಾರಿ ದಕ್ಷಿಣ ಕೊರಿಯಾದ ಕಂಪನಿಯು ಮಡಚಬಹುದಾದ ಫೋನ್‌ನ ಕ್ಯಾಮೆರಾದಲ್ಲಿ ದೊಡ್ಡ ಸುಧಾರಣೆ ಮಾಡಲಿದೆಯಂತೆ. ಹೊಸ ಫೋಲ್ಡಬಲ್ ಫೋನ್- ಗ್ಯಾಲಕ್ಸಿ Z ಫೋಲ್ಡ್ 6 ನಲ್ಲಿ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಅಳವಡಿಸಲಿದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್‌ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ Z ಫೋಲ್ಡ್ 6 ನ ಕ್ಯಾಮೆರಾ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಮಾಧ್ಯಮ ವರದಿಗಳ ಪ್ರಕಾರ, ಟಿಪ್‌ಸ್ಟರ್ ರೆವೆಗ್ನಸ್ ಸ್ಯಾಮ್‌ಸಂಗ್‌ನ ಹೊಸ ಫೋಲ್ಡಬಲ್ ಫೋನ್ ಅನ್ನು 200MP ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಬಹುದು ಎಂದು ಹೇಳಿದ್ದಾರೆ. ಸ್ಯಾಮ್​ಸಂಗ್​ನ ಗ್ಯಾಲಕ್ಸಿ S24 ಆಲ್ಟ್ರಾ 200MP ಕ್ಯಾಮೆರಾವನ್ನು ಹೊಂದಿದೆಯಷ್ಟೆ.

ಬರೋಬ್ಬರಿ 12 ಅಪ್​ಗ್ರೇಡ್: ಇತಿಹಾಸ ನಿರ್ಮಿಸಲು ಸಜ್ಜಾದ ರಿಯಲ್ ಮಿಯ ಹೊಸ ಫೋನ್

ಗ್ಯಾಲಕ್ಸಿ S24 ಆಲ್ಟ್ರಾದ 200MP ಪ್ರಾಥಮಿಕ ಕ್ಯಾಮೆರಾದಲ್ಲಿ 1/1.3 ಇಂಚಿನ ಸಂವೇದಕ, f/1.7 ಅಪರ್ಚರ್, ಆಟೋ ಫೋಕಸ್ ಮತ್ತು OIS ಅನ್ನು ಹೊಂದಿದೆ. ಟಿಪ್‌ಸ್ಟರ್ ಪ್ರಕಾರ, ಗ್ಯಾಲಕ್ಸಿ ಎಸ್ 24 ಅಲ್ಟ್ರಾದಂತೆ, ಕಂಪನಿಯು ಗ್ಯಾಲಕ್ಸಿ ಝಡ್ ಫೋಲ್ಡ್ 6 ನಲ್ಲಿ ಕೂಡ 200 ಎಂಪಿ ಮುಖ್ಯ ಕ್ಯಾಮೆರಾವನ್ನು ಒದಗಿಸಬಹುದು. ಇದು ಪ್ರಸ್ತುತ ಮಾದರಿಯ 50MP ಕ್ಯಾಮೆರಾಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ.

ಆದರೆ, ಸ್ಯಾಮ್​ಸಂಗ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ನಲ್ಲಿ 200MP ಕ್ಯಾಮೆರಾವನ್ನು ಕಂಪನಿಯು ದೃಢಪಡಿಸಿಲ್ಲ. ಈ ಸ್ಮಾರ್ಟ್​ಫೋನ್ ಅನ್ನು ದೊಡ್ಡ ಡಿಸ್​ಪ್ಲೇಯೊಂದಿಗೆ ನೀಡಲಾಗುವುದು ಎನ್ನಲಾಗಿದೆ. ಮತ್ತೊಂದು ಸೋರಿಕೆಯ ಪ್ರಕಾರ, ಕಂಪನಿಯು ಗ್ಯಾಲಕ್ಸಿ Z Fold 6 ನ ಅಗ್ಗದ ಆವೃತ್ತಿಯನ್ನು ಸಹ ಪ್ರಾರಂಭಿಸಬಹುದು. ಇದರ ವಿನ್ಯಾಸವು ಮುಖ್ಯ ಮಾದರಿಯಂತೆಯೇ ಇರುವ ಸಾಧ್ಯತೆಯಿದೆ.

ಮನೆಯ ಈ ಜಾಗದಲ್ಲಿ ವೈ-ಫೈ ರೂಟರ್ ಇಟ್ಟರೆ ವೇಗ ದುಪ್ಪಟ್ಟಾಗುತ್ತದೆ?

ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್‌ನ ಬೆಲೆ ಸಾಕಷ್ಟು ದುಬಾರಿಯಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆ ಆಗುವ ಹೊಸ ಫೋಲ್ಡಬಲ್ ಫೋನ್‌ಗಳ ಬೆಲೆಗಳು ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಲಿದೆಯಂತೆ. ಸದ್ಯ ಗ್ಯಾಲಕ್ಸಿ Z Fold 5 ಬೆಲೆ ಭಾರತದಲ್ಲಿ 1,43,999 ರೂ. ಗಳಿಂದ ಪ್ರಾರಂಭವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ