Wifi Speed Tricks: ಮನೆಯ ಈ ಜಾಗದಲ್ಲಿ ವೈ-ಫೈ ರೂಟರ್ ಇಟ್ಟರೆ ವೇಗ ದುಪ್ಪಟ್ಟಾಗುತ್ತದೆ?

Tech Tips: ಅನೇಕರು ರೂಟರ್ ಅನ್ನು ಸರಿಯಾದ ಸ್ಥಳದಲ್ಲಿ ಇಡುವುದಿಲ್ಲ. ಪರಿಣಾಮ, ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ವೈಫೈ ರೂಟರ್ ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

Wifi Speed Tricks: ಮನೆಯ ಈ ಜಾಗದಲ್ಲಿ ವೈ-ಫೈ ರೂಟರ್ ಇಟ್ಟರೆ ವೇಗ ದುಪ್ಪಟ್ಟಾಗುತ್ತದೆ?
Wifi Speed Tricks
Follow us
Vinay Bhat
|

Updated on: Feb 17, 2024 | 12:13 PM

ಮನೆಯಲ್ಲಿ ಮೊಬೈಲ್ ನೆಟ್​ವರ್ಕ್ ಸರಿಯಾಗಿ ಸಿಗುತ್ತಿಲ್ಲ, ಇಂಟರ್ನೆಟ್ (Internet) ಬಳಸಲು ಆಗುತ್ತಿಲ್ಲ ಎಂದು ವೈಫೈ ಹಾಕಿದರೆ ಅದುಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?. ಆಪರೇಟರ್‌ಗೆ ಪದೇ ಪದೇ ಕರೆ ಮಾಡಿದರೂ ಪ್ರಯೋಜನವಾಗುತ್ತಿಲ್ಲವೇ?. ಹಾಗಾದರೆ ಇದಕ್ಕೆಲ್ಲ ಏನು ಕಾರಣ?. ಈ ಪ್ರಶ್ನೆಗೆ ಉತ್ತರವನ್ನು ನಾವು ನೀಡುತ್ತೇವೆ. ನಿಮ್ಮ ಇಂಟರ್ನೆಟ್ ವೇಗವು ವೈಫೈ ರೂಟರ್‌ನ ಸ್ಥಳವನ್ನು ಅವಲಂಬಿಸಿರುತ್ತದೆ. ಅಂದರೆ, ನಿಮ್ಮ ಇಂಟರ್ನೆಟ್ ಎಷ್ಟು ವೇಗವನ್ನು ಹೊಂದಿದೆ ಎಂಬುದು ನಿಮ್ಮ ವೈಫೈ ರೂಟರ್ ಅನ್ನು ನೀವು ಎಲ್ಲಿ ಇರಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಜನರು ಮಾಡುವ ತಪ್ಪು ಇಲ್ಲಿಯೇ.

ಅನೇಕರು ರೂಟರ್ ಅನ್ನು ಸರಿಯಾದ ಸ್ಥಳದಲ್ಲಿ ಇಡುವುದಿಲ್ಲ. ಪರಿಣಾಮ, ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ವೈಫೈ ರೂಟರ್ ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮಧ್ಯಮ ಬೆಲೆಯ ಪೋಕೋ X6 ಸ್ಮಾರ್ಟ್​ಫೋನ್ ಹೇಗಿದೆ?: ಇಲ್ಲಿದೆ ವಿಮರ್ಶೆ

ನೀವು ವೈಫೈ ರೂಟರ್ ಅನ್ನು ಕೋಣೆಯ ಕೆಳ ಜಾಗದಲ್ಲಿ ಎಲ್ಲೋ ಇರಿಸಿದ್ದೀರಾ?. ಹಾಗಾದರೆ ಅದನ್ನು ಗೋಡೆಯ ಮೇಲೆ ಅಂದರೆ ಸ್ವಲ್ಪ ಎತ್ತರದಲ್ಲಿ ಇರಿಸಲು ಪ್ರಯತ್ನಿಸಿ. ಆಗ ನೀವು ಮೊದಲಿಗಿಂತ ಉತ್ತಮ ಇಂಟರ್ನೆಟ್ ವೇಗವನ್ನು ಪಡೆಯುತ್ತೀರಿ.

ಮುಚ್ಚಿದ ಕೋಣೆಯಲ್ಲಿ ರೂಟರ್ ಅನ್ನು ಇಡುವುದು ಉತ್ತಮವಲ್ಲ. ಆಗ ಇಡೀ ಮನೆಗೆ ಇಂಟರ್ನೆಟ್ ಸಿಗುವುದಿಲ್ಲ. ರೂಟರ್ ಇರುವ ಕೋಣೆಯಲ್ಲಿ ಮಾತ್ರ ವೈ-ಫೈ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಉಳಿದ ಕೊಠಡಿಗಳನ್ನು ತಲುಪಲು ಸಾಧ್ಯವಿಲ್ಲ. ಹೀಗಾಗಿ ತೆರೆದ ಜಾಗದಲ್ಲಿ ವೈಫೈ ರೂಟರ್ ಅನ್ನು ಇಡಿ. ಆಗ ವೈಫೈ ವೇಗವನ್ನು ಹೆಚ್ಚಿಸುತ್ತದೆ.

ನೀವು ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರೆ, ಮೊದಲ ಮತ್ತು ಎರಡನೇ ಮಹಡಿಗಳ ನಡುವೆ ವೈಫೈ ರೂಟರ್ ಇಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನೀವು ಇಡೀ ಮನೆಯಲ್ಲಿ ವೈ-ಫೈ ಸಂಪರ್ಕವನ್ನು ಪಡೆಯುತ್ತೀರಿ. ಆಗ ವೇಗ ಕೂಡ ಹೆಚ್ಚಾಗುತ್ತದೆ. ನೆಲಮಹಡಿಯಲ್ಲಿರುವ ರೂಂ ಒಂದರಲ್ಲಿ ರೂಟರ್ ಹಾಕಿದರೆ ಎರಡನೇ ಮಹಡಿಯಲ್ಲಿ ಇಂಟರ್‌ನೆಟ್ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ.

ಡೇಟಾ ಜೊತೆಗೆ OTT ಕೂಡ ಫ್ರೀ: ರಿಲಯನ್ಸ್ ಜಿಯೋದ ಈ ಪ್ಲಾನ್​ಗೆ ಭರ್ಜರಿ ಡಿಮ್ಯಾಂಡ್

ರೂಟರ್ ಬಳಿ ಯಾವುದೇ ಕಬ್ಬಿಣ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳು ಇರಬಾರದು. ಅಂದರೆ ವೈ-ಫೈ ಅನ್ನು ಟಿವಿ, ರೆಫ್ರಿಜರೇಟರ್ ಮತ್ತು ಇತರೆ ಉಪಕರಣಗಳಾದ ಬೇಬಿ ಮಾನಿಟರ್, ಬ್ಲೂಟೂತ್ ಹೆಡ್ ಸೆಟ್‌ಗಳಿಂದ ದೂರವಿರಿಸಿ. ಇವುಗಳನ್ನು ಹತ್ತಿರದಲ್ಲಿ ಇರಿಸುವುದರಿಂದ ಸಿಗ್ನಲ್‌ಗೆ ಅಡ್ಡಿಪಡಿಸಿದಂತಾಗುತ್ತದೆ. ಇದು ವೈ-ಫೈ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಹಾಗೆಯೆ ಅಗತ್ಯವಿರುವ ಸಾಧನಗಳಿಗೆ ಮಾತ್ರ ವೈಫೈ ಅನ್ನು ಸಂಪರ್ಕಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್