Tech Tricks: ಏರ್‌ಪ್ಲೇನ್ ಮೋಡ್‌ ಆನ್ ಮಾಡಿ ಇಂಟರ್ನೆಟ್ ಉಪಯೋಗಿಸುವ ಟ್ರಿಕ್ ಗೊತ್ತೇ?

Airplane Mode Internet: ಫ್ಲೈಟ್ ಮೋಡ್‌ನಲ್ಲಿರುವ ಫೋನ್‌ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುವುದಿಲ್ಲ ಎಂದು ನೀವು ನಂಬಿದ್ದರೆ, ಈ ಸುದ್ದಿ ನಿಮಗಾಗಿ. ಮೊಬೈಲ್ ಫ್ಲೈಟ್ ಮೋಡ್‌ನಲ್ಲಿರುವಾಗಲೂ ನೀವು ಇಂಟರ್ನೆಟ್ ಅನ್ನು ಉಪಯೋಗಿಸಬಹುದು. ಏರ್‌ಪ್ಲೇನ್ ಮೋಡ್‌ನಲ್ಲಿ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಅನ್ನು ಹೇಗೆ ಆನ್ ಮಾಡುವುದು ಎಂದು ಇಲ್ಲಿ ತಿಳಿಯಿರಿ.

Tech Tricks: ಏರ್‌ಪ್ಲೇನ್ ಮೋಡ್‌ ಆನ್ ಮಾಡಿ ಇಂಟರ್ನೆಟ್ ಉಪಯೋಗಿಸುವ ಟ್ರಿಕ್ ಗೊತ್ತೇ?
Tech Tips
Follow us
|

Updated on: Jan 13, 2024 | 12:27 PM

ಅರೇ… ಏರ್‌ಪ್ಲೇನ್ ಮೋಡ್‌ ಆನ್ ಮಾಡಿ ಇಂಟರ್ನೆಟ್ ಅನ್ನು ಹೇಗೆ ಉಪಯೋಗ ಮಾಡುವುದು ಎಂದು ನೀವು ಯೋಚಿಸುತ್ತಿರುವಿರಿ. ಸ್ಮಾರ್ಟ್‌ಫೋನ್ (Smartphone) ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಟ್ಟರೆ ನಿಮಗೆ ಮೊಬೈಲ್​ನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಏರ್‌ಪ್ಲೇನ್ ಮೋಡ್‌ ಆನ್ ಇದ್ದರೆ ಅನೇಕ ಪ್ರಮುಖ ಕಾರ್ಯಗಳು ಆಗುವುದಿಲ್ಲ. ಇಮೇಲ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಪ್ರಮುಖ ಸಂದೇಶಗಳು ಸೆಂಡ್ ಆಗಲ್ಲ. ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ವೀಕ್ಷಿಸಲು ಆಗುವುದಿಲ್ಲ. ನಿಮಗೆ ಯಾವುದೇ ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯ ಆಗಲ್ಲ. ಆದರೆ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿಯೇ ನೀವು ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಅದು ಹೇಗೆ ನೋಡಿ.

  • ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇ ಸ್ಟೋರ್​ನಿಂದ ನೀವು Force LTE Only (4G/5G) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಈ ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ನೀವು ಅದನ್ನು ನಿಮ್ಮ ಮೊಬೈಲ್‌ನಲ್ಲಿ ಇನ್​ಸ್ಟಾಲ್ ಮಾಡಬೇಕು.
  • ಒಮ್ಮೆ ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡರೆ ನಿಮ್ಮ ಮುಂದೆ 4 ಆಯ್ಕೆಗಳು ಕಾಣಿಸುತ್ತವೆ.
  • ಇದರಲ್ಲಿ ಎರಡನೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ METHOD2:(ANDROID 11+).
  • ನಂತರ ನಿಮ್ಮ ಫೋನ್ ಮಾಹಿತಿಗೆ ಹೋಗಿ, ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಆರಿಸಿ.
  • ಇಲ್ಲಿ ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಸಕ್ರಿಯಗೊಳಿಸಿ.
  • ನಂತರ ನಿಮ್ಮ ಮೊಬೈಲ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನೀವು ಅಚ್ಚರಿಯನ್ನು ನೋಡುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರುತ್ತದೆ. ಆದರೆ ಅದರಲ್ಲಿರುವ ಡೇಟಾ ಆನ್ ಆಗಿರುತ್ತದೆ. ಈಗ ನೀವು ನಿಮ್ಮ ನೆಚ್ಚಿನ ಸೈಟ್‌ಗೆ ನೀವು ಹೋಗಬಹುದು. ವಾಟ್ಸ್​ಆ್ಯಪ್ ಸೇರಿದಂತೆ ಹಲವಾರು ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬ್ರೌಸ್ ಮಾಡಬಹುದು. ಯೂಟ್ಯೂಬ್​ನಲ್ಲಿ ನಿಮ್ಮ ಮೆಚ್ಚಿನ ವಿಡಿಯೋಗಳನ್ನು ವೀಕ್ಷಿಸಬಹುದು. ಯಾವುದೇ ಕಚೇರಿ ಕೆಲಸಗಳಿದ್ದರೆ, ಇಂಟರ್ನೆಟ್ ಮೂಲಕ ಮೊಬೈಲ್‌ನಲ್ಲಿ ಪೂರ್ಣಗೊಳಿಸಬಹುದು.

Smartphone Battery: ಸ್ಮಾರ್ಟ್​ಫೋನ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಲು ಈ ಸಿಂಪಲ್ ಟಿಪ್ಸ್ ಬಳಸಿ

ಇದನ್ನೂ ಓದಿ
Image
ಕ್ಯಾಮೆರಾ ಪ್ರಿಯರು ಶಾಕ್: ಬಂತು 180MP ಕ್ಯಾಮೆರಾದ ಹೊಸ ಮ್ಯಾಜಿಕ್ ಫೋನ್
Image
ಪಾಕಿಸ್ತಾನದಲ್ಲಿಲ್ಲ ಪ್ರೈಮ್-ಹಾಟ್​ಸ್ಟಾರ್: ಅವರು ಯಾವ OTT ಉಪಯೋಗಿಸ್ತಾರೆ?
Image
ಒಪ್ಪೋ ಪ್ರಿಯರಿಗೆ ಬಂಪರ್ ಸುದ್ದಿ: ರಿಲೀಸ್ ಆಯಿತು ರೆನೋ 11 ಸರಣಿ ಫೋನ್
Image
ಭಾರತಕ್ಕೆ ಬಂತು ಅದ್ಭುತ ಫೀಚರ್ಸ್​ನ ಪೋಕೋದ ಎರಡು ಹೊಸ ಸ್ಮಾರ್ಟ್​ಫೋನ್

ಈ ಅಪ್ಲಿಕೇಶನ್​ಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ 4.4 ರೇಟಿಂಗ್ ಹೊಂದಿದೆ. ಇದುವರೆಗೆ 10 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ನೆಟ್‌ವರ್ಕ್ 4G/3G/2G ನಡುವೆ ಬದಲಾಯಿಸಲು ಮತ್ತು ಆಯ್ಕೆ ಮಾಡಲು ಅನುಮತಿಸುತ್ತದೆ. ಆದರೆ ಫೋರ್ಸ್ LTE ಅಪ್ಲಿಕೇಶನ್ ಎಲ್ಲ ಸ್ಮಾರ್ಟ್‌ಫೋನ್​ಗಳನ್ನು ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರ್ಯಾಂಡ್ ಮೇಲೆ ಇದು ನಿರ್ಧಾರವಾಗಿದೆ. ಕೆಲವು ಬ್ರ್ಯಾಂಡ್‌ಗಳು ನೆಟ್‌ವರ್ಕ್ ಸ್ವಿಚ್ ಆಯ್ಕೆಯನ್ನು ಆಫ್ ಮಾಡುತ್ತವೆ, ಆದ್ದರಿಂದ ಈ ಅಪ್ಲಿಕೇಶನ್ ಅವುಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?