AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿಲ್ಲ ಅಮೆಜಾನ್ ಪ್ರೈಮ್-ಹಾಟ್​ಸ್ಟಾರ್: ಅವರು ಯಾವ OTT ಉಪಯೋಗಿಸುತ್ತಾರೆ ಗೊತ್ತೇ?

Pakistan OTT Platform: ಭಾರತೀಯರು ಅಮೆಜಾನ್ ಪ್ರೈಮ್, ಹಾಟ್​ಸ್ಟಾರ್, ನೆಟ್​ಫ್ಲಿಕ್ಸ್, ಝೀ5, ಸೋನಿ ಲಿವ್,ಅಹಾ ಹೀಗೆ ಅನೇಕ OTT ಪ್ಲಾಟ್‌ಫಾರ್ಮ್‌ಗಳನ್ನು ಉಪಯೋಗಿಸುತ್ತಾರೆ. ಆದರೆ ಇವುಗಳಲ್ಲಿ ಎಲ್ಲ ಒಟಿಟಿ ಪಾಕಿಸ್ತಾನದಲ್ಲಿ ಗೋಚರಿಸುವುದಿಲ್ಲ. ಅವರು ಯಾವ OTT ಉಪಯೋಗಿಸುತ್ತಾರೆ ಗೊತ್ತೇ?.

ಪಾಕಿಸ್ತಾನದಲ್ಲಿಲ್ಲ ಅಮೆಜಾನ್ ಪ್ರೈಮ್-ಹಾಟ್​ಸ್ಟಾರ್: ಅವರು ಯಾವ OTT ಉಪಯೋಗಿಸುತ್ತಾರೆ ಗೊತ್ತೇ?
Pakistan OTT
Vinay Bhat
|

Updated on: Jan 13, 2024 | 10:50 AM

Share

ಪಾಕಿಸ್ತಾನದ (Pakistan) ಹೆಸರು ಕೇಳಿದ ತಕ್ಷಣ ನಮ್ಮ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಮೂಡುತ್ತವೆ. ಇದರಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ, ಪಾಕಿಸ್ತಾನದ ಆಹಾರ ಪದ್ಧತಿ ಹೇಗಿದೆ?, ಅವರುಕೂಡ ನಮ್ಮಂತೆ ಮನರಂಜನೆಗಾಗಿ ಟಿವಿ ಅಥವಾ OTT ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆಯೇ?, ಹೀಗೆ ಪಾಕಿಸ್ತಾನದ ಬಗ್ಗೆ ನಿಮ್ಮ ಮನಸ್ಸಿನಲ್ಲಿಯೂ ಇದೇ ರೀತಿಯ ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳಲ್ಲಿ ಒಂದಕ್ಕೆ ನಾವು ಉತ್ತರವನ್ನು ಕಂಡುಕೊಂಡಿದ್ದೇವೆ. ಪಾಕಿಸ್ತಾನದಲ್ಲಿ ಯಾವ OTT ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಸಲಾಗುತ್ತದೆ ಎಂದು ನಾವು ನಿಮಗೆ ಹೇಳುತ್ತೇವೆ.

ಪಾಕಿಸ್ತಾನದ ಸಿನಿಮಾ ಮತ್ತು ಸಂಗೀತ ಉದ್ಯಮವು ಅದ್ಭುತವಾಗಿದ್ದರೂ, ಅಲ್ಲಿನ ದೇಶಕ್ಕಿಂತ ಭಾರತದಲ್ಲಿ ಹೆಚ್ಚು ಪ್ರೀತಿಯನ್ನು ಪಡೆಯುವ ಅನೇಕ ಪಾಕಿಸ್ತಾನಿ ಗಾಯಕರು ಇದ್ದಾರೆ. ಇಷ್ಟೇ ಅಲ್ಲದೆ, ಈ ಗಾಯಕರ ಹಾಡುಗಳು ಭಾರತದಲ್ಲಿಯೂ ಹೆಚ್ಚು ಫೇಮಸ್ ಆಗಿದೆ. ಇದರ ಹೊರತಾಗಿಯೂ, ಭಾರತೀಯರು ಅಮೆಜಾನ್ ಪ್ರೈಮ್, ಹಾಟ್​ಸ್ಟಾರ್, ನೆಟ್​ಫ್ಲಿಕ್ಸ್, ಝೀ5, ಸೋನಿ ಲಿವ್,ಅಹಾ ಹೀಗೆ ಅನೇಕ OTT ಪ್ಲಾಟ್‌ಫಾರ್ಮ್‌ಗಳನ್ನು ಉಪಯೋಗಿಸುತ್ತಾರೆ. ಆದರೆ ಇವುಗಳಲ್ಲಿ ಎಲ್ಲ ಒಟಿಟಿ ಪಾಕಿಸ್ತಾನದಲ್ಲಿ ಗೋಚರಿಸುವುದಿಲ್ಲ.

Vivo X100 Series: ದುಬಾರಿ ಬೆಲೆ, ಆಕರ್ಷಕ ಫೀಚರ್ಸ್: ವಿವೋ X100, ವಿವೋ X100 ಪ್ರೊ ಈಗ ಖರೀದಿಗೆ ಲಭ್ಯ

ಇದನ್ನೂ ಓದಿ
Image
ಒಪ್ಪೋ ಪ್ರಿಯರಿಗೆ ಬಂಪರ್ ಸುದ್ದಿ: ರಿಲೀಸ್ ಆಯಿತು ರೆನೋ 11 ಸರಣಿ ಫೋನ್
Image
ಭಾರತಕ್ಕೆ ಬಂತು ಅದ್ಭುತ ಫೀಚರ್ಸ್​ನ ಪೋಕೋದ ಎರಡು ಹೊಸ ಸ್ಮಾರ್ಟ್​ಫೋನ್
Image
ಫೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಸಿಂಪಲ್ ಟಿಪ್ಸ್
Image
ಲೇಟೆಸ್ಟ್ ಫೋನ್ ಪರಿಚಯಿಸಿದ ಸ್ಯಾಮ್​ಸಂಗ್

ಈ OTT ಪ್ಲಾಟ್‌ಫಾರ್ಮ್ ಪಾಕಿಸ್ತಾನದಲ್ಲಿ ಪ್ರಸಿದ್ಧವಾಗಿದೆ

ಪಾಕಿಸ್ತಾನದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಒಟಿಟಿ ಪ್ಲಾಟ್‌ಫಾರ್ಮ್ ಎಂದರೆ ಅದು ಯೂಟ್ಯೂಬ್ ಆಗಿದೆ. ಇಂದು ಯೂಟ್ಯೂಬ್​ನ ಎಲ್ಲಾ ಸೇವೆಗಳು ಉಚಿತ. ಆದರೆ ನೀವು ಯೂಟ್ಯೂಬ್ ಜಾಹೀರಾತುಗಳನ್ನು ಮುಕ್ತಗೊಳಿಸಲು ಬಯಸಿದರೆ, ಕಡಿಮೆ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಸದ್ಯ ಪಾಕಿಸ್ತಾನದಲ್ಲಿ ಹೆಚ್ಚಿನ ಜನರು ಬಳಸುತ್ತಿರುವುದು ಯೂಟ್ಯೂಬ್ ಆಗಿದೆ.

ಯೂಟ್ಯೂಬ್ ಹೊರತುಪಡಿಸಿ, ಪಾಕಿಸ್ತಾನದಲ್ಲಿ ಹಲವು OTT ಪ್ಲಾಟ್‌ಫಾರ್ಮ್‌ಗಳು ಇವೆ. ಇದರಲ್ಲಿ tapmad.com ಎರಡನೇ ಸ್ಥಾನದಲ್ಲಿದೆ. ಇದರ ನಂತರ ನೆಟ್​ಫ್ಲಿಕ್ಸ್, itponytaa.com ಮತ್ತು geo.tv ಹೆಸರುಗಳು ಬರುತ್ತವೆ. ಈ ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳು ಮನರಂಜನ ವಿಷಯವನ್ನು ಒದಗಿಸುತ್ತವೆ.

ಅಮೆಜಾನ್ ಪ್ರೈಮ್ ಮತ್ತು ಹಾಟ್‌ಸ್ಟಾರ್ ಪಾಕಿಸ್ತಾನದಲ್ಲಿ ಇಲ್ಲ

ಭಾರತದಲ್ಲಿ ಜನಪ್ರಿಯವಾಗಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಪಾಕಿಸ್ತಾನದಲ್ಲಿ ಗೋಚರಿಸುವುದಿಲ್ಲ. ಇದರ ಹಿಂದೆ ವಿಭಿನ್ನ ಕಾರಣಗಳಿವೆ. ಅಮೆಜಾನ್ ಮತ್ತು ಹಾಟ್‌ಸ್ಟಾರ್ ಪಾಕಿಸ್ತಾನದಲ್ಲಿ ಪ್ರಸಾರ ಮಾಡಲು ಪರವಾನಗಿ ಪಡೆದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಈ ಎರಡೂ OTT ಪ್ಲಾಟ್‌ಫಾರ್ಮ್‌ಗಳು ಪಾಕಿಸ್ತಾನದಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಕೂಡ ಹೇಳಲಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?