AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honor Magic 6 series: ಕ್ಯಾಮೆರಾ ಪ್ರಿಯರು ಶಾಕ್: ಬಂತು 180MP ಕ್ಯಾಮೆರಾದ ಹೊಸ ಮ್ಯಾಜಿಕ್ ಸ್ಮಾರ್ಟ್​ಫೋನ್: ಬೆಲೆ?

Honor Magic 6, Honor Magic 6 Pro: ಹಾನರ್ ಮ್ಯಾಜಿಕ್ 6 ಮತ್ತು ಹಾನರ್ ಮ್ಯಾಜಿಕ್ 6 ಪ್ರೊ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ ಚಿಪ್‌ಸೆಟ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಪ್ರೊ ರೂಪಾಂತರವು OIS ಬೆಂಬಲದೊಂದಿಗೆ ಬರೋಬ್ಬರಿ 180 ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಸಂವೇದಕದೊಂದಿಗೆ ಬರುತ್ತದೆ.

Honor Magic 6 series: ಕ್ಯಾಮೆರಾ ಪ್ರಿಯರು ಶಾಕ್: ಬಂತು 180MP ಕ್ಯಾಮೆರಾದ ಹೊಸ ಮ್ಯಾಜಿಕ್ ಸ್ಮಾರ್ಟ್​ಫೋನ್: ಬೆಲೆ?
Honor Magic 6, Honor Magic 6 Pro
Vinay Bhat
|

Updated on: Jan 13, 2024 | 11:41 AM

Share

ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಹಾನರ್ ಹೊಸ ಫೋನ್​ನೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಕ್ಯಾಮೆರಾ ಪ್ರಿಯರನ್ನು ದಂಗುಗೊಳಿಸುವ ಎರಡು ಮೊಬೈಲ್​ಗಳನ್ನು ಪರಿಚಯಿಸಿದೆ. ಹಾನರ್ ತನ್ನ ಮ್ಯಾಜಿಕ್ ಸರಣಿ ಅಡಿಯಲ್ಲಿ ಹೊಸ ಹಾನರ್ ಮ್ಯಾಜಿಕ್ 6 ಮತ್ತು ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ ಚಿಪ್‌ಸೆಟ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಪ್ರೊ ರೂಪಾಂತರವು OIS ಬೆಂಬಲದೊಂದಿಗೆ ಬರೋಬ್ಬರಿ 180 ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಸಂವೇದಕದೊಂದಿಗೆ ಬರುತ್ತದೆ. ಈ ಫೋನುಗಳ ಬೆಲೆ ಮತ್ತು ಫೀಚರ್ಸ್ ಕುರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾನರ್ ಮ್ಯಾಜಿಕ್ 6, ಹಾನರ್ ಮ್ಯಾಜಿಕ್ 6 ಪ್ರೊ ಬೆಲೆ, ಲಭ್ಯತೆ:

ಹಾನರ್ ಮ್ಯಾಜಿಕ್ 6 ಫೋನ್ 12GB + 256GB ರೂಪಾಂತರಕ್ಕೆ CNY 4,399 (ಅಂದಾಜು ರೂ 51,399) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. 16GB + 256GB ಆವೃತ್ತಿಗೆ CNY 4,699 (ಸುಮಾರು ರೂ. 54,906) ಮತ್ತು 16GB + 512GB ಕಾನ್ಫಿಗರೇಶನ್‌ಗಾಗಿ CNY 4,999 (ಸುಮಾರು ರೂ. 58,412) ಇದೆ.

Samsung Galaxy A25 5G: ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಫೋನ್ ಪರಿಚಯಿಸಿದ ಸ್ಯಾಮ್​ಸಂಗ್

ಇದನ್ನೂ ಓದಿ
Image
ಪಾಕಿಸ್ತಾನದಲ್ಲಿಲ್ಲ ಪ್ರೈಮ್-ಹಾಟ್​ಸ್ಟಾರ್: ಅವರು ಯಾವ OTT ಉಪಯೋಗಿಸ್ತಾರೆ?
Image
ಒಪ್ಪೋ ಪ್ರಿಯರಿಗೆ ಬಂಪರ್ ಸುದ್ದಿ: ರಿಲೀಸ್ ಆಯಿತು ರೆನೋ 11 ಸರಣಿ ಫೋನ್
Image
ಭಾರತಕ್ಕೆ ಬಂತು ಅದ್ಭುತ ಫೀಚರ್ಸ್​ನ ಪೋಕೋದ ಎರಡು ಹೊಸ ಸ್ಮಾರ್ಟ್​ಫೋನ್
Image
ಫೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಸಿಂಪಲ್ ಟಿಪ್ಸ್

ಮತ್ತೊಂದೆಡೆ, ಹಾನರ್ ಮ್ಯಾಜಿಕ್ 6 ಪ್ರೊ ಬೇಸ್ 12GB + 256GB ಮಾದರಿಗೆ CNY 5,699 (ಸುಮಾರು ರೂ 66,591) ಯಿಂದ ಪ್ರಾರಂಭವಾಗುತ್ತದೆ. 16GB + 512GB ಮಾದರಿಯ ಬೆಲೆ CNY 6,199 (ಅಂದಾಜು ರೂ 72,434), 16GB + 1TB ಆವೃತ್ತಿಯ ಬೆಲೆ CNY 6,699 (ಸುಮಾರು ರೂ 79,686).

ಈ ಫೋನ್‌ಗಳು ಸೀ ಲೇಕ್ ಗ್ರೀನ್, ಕಿಲಿಯನ್ ಸ್ನೋ, ವೀಟ್ ವೇವ್ ಗ್ರೀನ್, ವೆಲ್ವೆಟ್ ಬ್ಲ್ಯಾಕ್ ಮತ್ತು ಫ್ಲೋಯಿಂಗ್ ಕ್ಲೌಡ್ ಪರ್ಪಲ್ ಬಣ್ಣಗಳಲ್ಲಿ ಬರುತ್ತವೆ. ಹಾನರ್ ಮ್ಯಾಜಿಕ್ 6, ಹಾನರ್ ಮ್ಯಾಜಿಕ್ 6 ಪ್ರೊ ಪ್ರೊ ಪ್ರಸ್ತುತ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ-ಬುಕ್ಕಿಂಗ್​ಗೆ ಲಭ್ಯವಿದೆ. ಭಾರತದಲ್ಲಿ ಹಾನರ್ ಮ್ಯಾಜಿಕ್ 6 ಸರಣಿಯ ಬಿಡುಗಡೆಯ ಬಗ್ಗೆ ಕಂಪನಿಯು ಇನ್ನೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಹಾನರ್ ಮ್ಯಾಜಿಕ್ 6 ಫೀಚರ್ಸ್

ಡಿಸ್‌ಪ್ಲೇ: ಹಾನರ್ ಮ್ಯಾಜಿಕ್ 6 ಫೋನ್ 6.78-ಇಂಚಿನ ಪೂರ್ಣ-HD+ OLED ಡಿಸ್‌ಪ್ಲೇಯನ್ನು ಹೊಂದಿದ್ದು, 1Hz ನಿಂದ 120Hz ವರೆಗಿನ ವೇರಿಯಬಲ್ ರಿಫ್ರೆಶ್ ದರದಿಂದ ಕೂಡಿದೆ.

ಚಿಪ್‌ಸೆಟ್: ಈ ಫೋನ್ 4nm ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 3 SoC ಜೊತೆಗೆ ಅಡ್ರಿನೋ 750 GPU ನೊಂದಿಗೆ ಜೋಡಿಸಲ್ಪಟ್ಟಿದೆ.

ಹಿಂಬದಿಯ ಕ್ಯಾಮೆರಾಗಳು: ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ f/1.9 ಅಪರ್ಚರ್ ಮತ್ತು OIS ಜೊತೆಗೆ 50MP ವೈಡ್-ಆಂಗಲ್ ಕ್ಯಾಮೆರಾ, OIS ಜೊತೆಗೆ 32MP ಟೆಲಿಫೋಟೋ ಕ್ಯಾಮೆರಾ ಮತ್ತು ಆಟೋಫೋಕಸ್‌ನೊಂದಿಗೆ 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ.

ಸೆಲ್ಫಿ ಕ್ಯಾಮೆರಾ: ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮ್ಯಾಜಿಕ್ 6 50MP ವೈಡ್-ಆಂಗಲ್ ಕ್ಯಾಮೆರಾದೊಂದಿಗೆ f/2.0 ಅಪರ್ಚರ್ ಅನ್ನು ಹೊಂದಿದೆ.

ಸಾಫ್ಟ್‌ವೇರ್: ಹಾನರ್ ಮ್ಯಾಜಿಕ್ 6 ಆಂಡ್ರಾಯ್ಡ್ 14 ಅನ್ನು ಆಧರಿಸಿದ MagicOS 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ: ಈ ಫೋನ್ 5,450mAh ಬ್ಯಾಟರಿಯನ್ನು ಹೊಂದಿದ್ದು, 66W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹಾನರ್ ಮ್ಯಾಜಿಕ್ 6 ಪ್ರೊ ಫೀಚರ್ಸ್

ಡಿಸ್‌ಪ್ಲೇ: ಹಾನರ್ ಮ್ಯಾಜಿಕ್ 6 ಪ್ರೊ 6.8-ಇಂಚಿನ ಪೂರ್ಣ-HD+ OLED ಡಿಸ್‌ಪ್ಲೇ ಜೊತೆಗೆ 120Hz ವರೆಗಿನ ರಿಫ್ರೆಶ್ ದರವನ್ನು ನೀಡುತ್ತದೆ.

ಚಿಪ್‌ಸೆಟ್: ಮ್ಯಾಜಿಕ್ 6 ಪ್ರೊ 4nm ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಜೊತೆಗೆ ಅಡ್ರಿನೋ 750 GPU ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಹಿಂಬದಿಯ ಕ್ಯಾಮೆರಾಗಳು: ಪ್ರೊ ರೂಪಾಂತರವು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ, 50MP ವೈಡ್-ಆಂಗಲ್ ಕ್ಯಾಮೆರಾದೊಂದಿಗೆ f/1.4 ರಿಂದ f/2.0 ವರೆಗೆ ವೇರಿಯಬಲ್ ಅಪರ್ಚರ್, 180MP 2.5x OIS ಪೆರಿಸ್ಕೋಪ್ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಆಟೋಫೋಕಸ್ ನೀಡಲಾಗಿದೆ.

ಸೆಲ್ಫಿ ಕ್ಯಾಮೆರಾ: ಮ್ಯಾಜಿಕ್ 6 ಪ್ರೊ 50MP ವೈಡ್-ಆಂಗಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 3D ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.

ಸಾಫ್ಟ್‌ವೇರ್: ಪ್ರೊ ರೂಪಾಂತರವು ಮ್ಯಾಜಿಕ್ಓಎಸ್ 8.0 ನಲ್ಲಿಯೂ ಕಾರ್ಯನಿರ್ವಹಿಸುತ್ತದೆ, ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ.

ಬ್ಯಾಟರಿ: ಫೋನ್ 5,600mAh ಬ್ಯಾಟರಿಯನ್ನು ಹೊಂದಿದ್ದು ಅದು 80W ವೈರ್ಡ್ ಚಾರ್ಜಿಂಗ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?