ಮಾರುಕಟ್ಟೆಗೆ ಅಪ್ಪಳಿಸಿತು ಮತ್ತೊಂದು ಮಡಚುವ ಫೋನ್: ಹಾನರ್ ಮ್ಯಾಜಿಕ್ Vs 2 ಫೋನ್ ಬಿಡುಗಡೆ

Honor Magic Vs 2 foldable smartphone launched: ಪ್ರಸಿದ್ಧ ಹಾನರ್ ಕಂಪನಿ ತನ್ನ ಹೊಸ ಹಾನರ್ ಮ್ಯಾಜಿಕ್ Vs 2 ಅನ್ನು ಚೀನಾದಲ್ಲಿ ರಿಲೀಸ್ ಮಾಡಿದೆ. ಟ್ರಿಪಲ್ ಹಿಂಬದಿಯ ಕ್ಯಾಮೆರಾ ಆಯ್ಕೆ ಹೊಂದಿರುವ ಮಡಚಬಹುದಾದ ಸ್ಮಾರ್ಟ್‌ಫೋನ್ ಎರಡು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

ಮಾರುಕಟ್ಟೆಗೆ ಅಪ್ಪಳಿಸಿತು ಮತ್ತೊಂದು ಮಡಚುವ ಫೋನ್: ಹಾನರ್ ಮ್ಯಾಜಿಕ್ Vs 2 ಫೋನ್ ಬಿಡುಗಡೆ
Honor Magic Vs 2
Follow us
|

Updated on: Oct 15, 2023 | 12:05 PM

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಮಡಚುವ ಫೋನುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಒಪ್ಪೋ ತನ್ನ ಎರಡನೇ ಮಡಚುವ ಫೋನ್ ಅನಾವರಣ ಮಾಡಿತ್ತು. ಇದೀಗ ಪ್ರಸಿದ್ಧ ಹಾನರ್ ಕಂಪನಿ ತನ್ನ ಹೊಸ ಹಾನರ್ ಮ್ಯಾಜಿಕ್ Vs 2 (Honor Magic Vs 2) ಅನ್ನು ಚೀನಾದಲ್ಲಿ ರಿಲೀಸ್ ಮಾಡಿದೆ. ಟ್ರಿಪಲ್ ಹಿಂಬದಿಯ ಕ್ಯಾಮೆರಾ ಆಯ್ಕೆ ಹೊಂದಿರುವ ಮಡಚಬಹುದಾದ ಸ್ಮಾರ್ಟ್‌ಫೋನ್ ಎರಡು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾನರ್ ಮ್ಯಾಜಿಕ್ Vs 2 ಬೆಲೆ

ಗ್ಲೇಸಿಯರ್ ಬ್ಲೂ, ಮಿಡ್‌ನೈಟ್ ಬ್ಲ್ಯಾಕ್ ಮತ್ತು ವೈಲೆಟ್ ಕೋರಲ್ ಕಲರ್ ಆಯ್ಕೆಗಳಲ್ಲಿ ನೀಡಲಾಗಿರುವ ಹಾನರ್ ಮ್ಯಾಜಿಕ್ Vs 2 ಫೋನಿನ 12GB + 256GB ರೂಪಾಂತರಕ್ಕೆ CNY 6,999 ರಿಂದ ಪ್ರಾರಂಭವಾಗುತ್ತದೆ. ಇದು 16GB + 512GB ಸಂಗ್ರಹಣೆಯ ಆಯ್ಕೆಯಲ್ಲಿಯೂ ಲಭ್ಯವಿದೆ. ಅಕ್ಟೋಬರ್ 17 ರಿಂದ ಈ ಫೋನ್​ನ ಶಿಪ್ಪಿಂಗ್ ಪ್ರಾರಂಭವಾಗುತ್ತದೆ ಎಂದು ಅಧಿಕೃತ ವೆಬ್‌ಸೈಟ್ ಹೇಳಿದೆ.

ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಭಾರತ ಸರ್ಕಾರ, ಏನು ವಿಷಯ?

ಇದನ್ನೂ ಓದಿ
Image
Google ನಲ್ಲಿ ನೀವು ಆ ರೀತಿಯ ವಿಷಯಗಳನ್ನು ಹುಡುಕುತ್ತಿದ್ದೀರಾ?
Image
ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ​ಫೋನ್ ಬಿಡುಗಡೆ ದಿನಾಂಕ ಬಹಿರಂಗ
Image
ಭಾರತದಲ್ಲಿ ಒಪ್ಪೋ ಕಂಪನಿಯ ಎರಡನೇ ಮಡಚುವ ಫೋನ್ ಬಿಡುಗಡೆ
Image
ಮೋಟೋರೊಲಾ ಕಂಪನಿಯ ಫೋನ್ ಬೇಕೇ?: ಫ್ಲಿಪ್​ಕಾರ್ಟ್​ನಲ್ಲಿದೆ ಧಮಾಕ ಆಫರ್

ಹಾನರ್ ಮ್ಯಾಜಿಕ್ Vs 2 ಫೀಚರ್ಸ್

ಹಾನರ್ ಮ್ಯಾಜಿಕ್ Vs 2 ನ ಒಳಗಿನ ಡಿಸ್ ಪ್ಲೇ 7.92-ಇಂಚಿನ OLED ಪ್ಯಾನೆಲ್ ಅನ್ನು 2,344 x 2,156 ಪಿಕ್ಸೆಲ್‌ಗಳ ರೆಸಲ್ಯೂಶನ್, 1,600 nits ನ ಗರಿಷ್ಠ ಬ್ರೈಟ್​ನೆಸ್ ಮಟ್ಟವನ್ನು ಹೊಂದಿದೆ. ಇದು 6.43-ಇಂಚಿನ OLED ಕವರ್ ಡಿಸ್ ಪ್ಲೇ ಹೊಂದಿದ್ದು, ಇದು 2,376 x 1,060 ಪಿಕ್ಸೆಲ್‌ಗಳ ರೆಸಲ್ಯೂಶನ್, 2,500 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್​ನೊಂದಿಗೆ ಬರುತ್ತದೆ.

ಈ ಫೋಲ್ಡಬಲ್ ಸ್ಮಾರ್ಟ್​ಫೋನ್​ನಲ್ಲಿ ಆಕ್ಟಾ-ಕೋರ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8+ Gen 1 SoC ಅನ್ನು Adreno 730 GPU ನೊಂದಿಗೆ ಜೋಡಿಸಲಾಗಿದೆ. 16GB RAM ಮತ್ತು 512GB ವರೆಗೆ ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ. ಹಾನರ್ ಮ್ಯಾಜಿಕ್ Vs 2 ಆಂಡ್ರಾಯ್ಡ್ 13-ಆಧಾರಿತ ಮ್ಯಾಜಿಕ್ ಓಎಸ್ 7.2 ಮೂಲಕ ರನ್ ಆಗುತ್ತದೆ.

ಮ್ಯಾಜಿಕ್ Vs 2 ನ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವು ವೈಡ್-ಆಂಗಲ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಸಂವೇದಕ, ಟೆಲಿಫೋಟೋ ಲೆನ್ಸ್‌ನೊಂದಿಗೆ 20-ಮೆಗಾಪಿಕ್ಸೆಲ್ ಸಂವೇದಕ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 12-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಕ್ಯಾಮೆರಾಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ ಬರುತ್ತವೆ. ಈ ಫೋನ್‌ನ ಮುಂಭಾಗದ ಕ್ಯಾಮೆರಾ 16-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.

ಹಾನರ್ ಮ್ಯಾಜಿಕ್ Vs 2 66W ವೈರ್ಡ್ ಸೂಪರ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 5G, Wi-Fi, GPS, NFC, ಬ್ಲೂಟೂತ್ 5.2 ಮತ್ತು USB ಟೈಪ್-C ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ