Google ನಲ್ಲಿ ಆ ರೀತಿಯ ವಿಷಯಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಎಚ್ಚರಾ, ನೀವು ಗಂಭೀರ ತೊಂದರೆಗೆ ಸಿಲುಕುತ್ತೀರಿ!
Google Search Mistake: ಒಂದಿನಿತೂ ವಿಳಂಬವಿಲ್ಲದೆ, ಸೆಕೆಂಡುಗಳಲ್ಲಿ ನಾವು Google ನಲ್ಲಿ ಹುಡುಕಿದ್ದು ಸಿಕ್ಕಿಬಿಡುತ್ತದೆ. ನಮಗೆ ಬೇಕಾದ ವಿಷಯಗಳ ಬಗ್ಗೆ ನಾವು ತಕ್ಷಣ ತಿಳಿದುಕೊಳ್ಳುತ್ತೇವೆ. ಆದರೆ ಹಾಗೆ ಮಾಡುವ ಎಲ್ಲಾ ಹುಡುಕಾಟಗಳು ಸಮಂಜಸವಲ್ಲ, ಒಳ್ಳೆಯದಲ್ಲ ಎಂಬ ಅರಿವನ್ನು ನಾವು ಬೆಳೆಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ತೊಂದರೆಗಳಿಗೆ ಸಿಲುಕಬೇಕಾದೀತು.
ಯಾವುದಾದರೂ ಗೊತ್ತಿಲ್ಲದ ವಿಷಯ ತಿಳಿಯಬೇಕಾದರೆ ಟೆನ್ಷನ್ ತೆಗೆದುಕೊಳ್ಲುವ ಮಾತೇ ಇಲ್ಲ; ಸೀದಾ ಗೂಗಲ್ ಅಕ್ಕನನ್ನು ಬಾಯ್ಬಿಟ್ಟು ಕೇಳಿದರೆ ಸಾಕು ಎಲ್ಲ ಪ್ರವರ ಹೇಳುತ್ತಾಳೆ ಎಂಬುದು ಇತ್ತೀಚಿಗೆ ಜನ ಮಾಡಿಕೊಂಡಿರುವ ವಾಡಿಕೆ! ಅಂದರೆ ಯಾವುದನ್ನಾದರೂ ತಿಳಿದುಕೊಳ್ಳಲು, ನಾವು ಮೊದಲು Google ಅನ್ನು ನಂಬುತ್ತೇವೆ, ಅದರಂತೆ ಅಲ್ಲಿ ಸರ್ಚ್ ಮಾಡುತ್ತೇವೆ. ಒಂದಿನಿತೂ ವಿಳಂಬವಿಲ್ಲದೆ, ಸೆಕೆಂಡುಗಳಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ನಲ್ಲಿ (Google) ಹುಡುಕಿದ್ದು ಸಿಕ್ಕಿಬಿಡುತ್ತದೆ. ನಮಗೆ ಬೇಕಾದ ವಿಷಯಗಳ ಬಗ್ಗೆ ನಾವು ತಕ್ಷಣ ತಿಳಿದುಕೊಳ್ಳುತ್ತೇವೆ. ಆದರೆ ಹಾಗೆ ಮಾಡುವ ಎಲ್ಲಾ ಹುಡುಕಾಟಗಳು ಸಮಂಜಸವಲ್ಲ, ಒಳ್ಳೆಯದಲ್ಲ ಎಂಬ ಅರಿವನ್ನು ನಾವು ಬೆಳೆಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ತೊಂದರೆಗಳಿಗೆ ಸಿಲುಕಬೇಕಾದೀತು. ಗೂಗಲ್ ನಲ್ಲಿ ಬೈ ಛಾನ್ಸ್ ಏನಾದ್ರೂ ಅಂತಹವುಗಳನ್ನು ಸರ್ಚ್ ಮಾಡಿದರೆ ಪೊಲೀಸರು ಸೀದಾ ನಿಮ್ಮ ಮನೆಗೆ ಬಂದು ಕೇಸ್ ದಾಖಲಿಸುವ ಸಾಧ್ಯತೆಗಳಿವೆ. ಇದು ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. ಅಪರಿಚಿತ ವಿಷಯಗಳನ್ನು ಕಲಿಯಲು ಗೂಗಲ್ ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಫೋನ್‌ನಲ್ಲಿ Google ಅನ್ನು ತೆರೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಹೇಳಿ? ಒಮ್ಮೆ ಒಳಗೆ ಹೋದರೆ ಕ್ಷಣಾರ್ಧದಲ್ಲಿ ಎಲ್ಲವನ್ನೂ ತಿಳಿದುಕೊಳ್ಳುವ ಅವಕಾಶವಿರುತ್ತದೆ.
ಇದನ್ನು ತಿಳಿದ ಅನೇಕ ಜನರು ಪ್ರತಿದಿನ ಪ್ರತಿ ಕ್ಷಣವೂ Google ಅನ್ನು ಲೆಕ್ಕವಿಲ್ಲದಷ್ಟು ಬಾರಿ ಬಳಸುತ್ತಾರೆ. ಆದರೆ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವ ಹಾಗೆ ಕೆಲವನ್ನು ಹುಡುಕಬೇಡಿ. ತಂತ್ರಜ್ಞಾನ ತಜ್ಞರು ಸಲಹೆ ನೀಡುತ್ತಿರುವುದು ಇದನ್ನೇ. ಇಂದಿನಿಂದ ಯಾವುದೇ ಸಣ್ಣ ವಿಚಾರದಲ್ಲಿ ಗೂಗಲ್ ಸಹಾಯ ಪಡೆಯುವ ಮುನ್ನ ಎಚ್ಚರಿಕೆ ವಹಿಸಿ. ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳಲಿದ್ದೇವೆ. ಇದನ್ನು ತಿಳಿದ ನಂತರ, ಮುಂದಿನ ಬಾರಿ Google ಹುಡುಕಾಟವನ್ನು ಪ್ರಯೋಗಿಸುವ ಮೊದಲು ನೀವು ಎರಡು ಬಾರಿ ಯೋಚಿಸಿರಿ. ಸಮಂಜಸವಲ್ಲದ ಶೋಧನೆಗಾಗಿ ನಿಮ್ಮನ್ನು ಜೈಲಿಗೆ ತಳ್ಳುವ ಕೆಲವು ವಿಷಯಗಳಿವೆ.
Google ನಲ್ಲಿ ಈ ವಿಷಯಗಳನ್ನು ಹುಡುಕುವ ತಪ್ಪುಗಳನ್ನು ಮಾಡಬೇಡಿ: ಗೂಗಲ್ ಸರ್ಚ್ ಮೂಲಕ ಬಾಂಬ್ ತಯಾರಿಸುವುದು ಹೇಗೆ ಎಂದು ಅಂತರ್ಜಾಲದಲ್ಲಿ ಹುಡುಕಿದರೆ ತೊಂದರೆಗೆ ಸಿಲುಕಬಹುದು. ನೀವು ಎಂದಾದರೂ ಅಂತಹ ವಿಷಯಗಳನ್ನು ಹುಡುಕಿದರೆ, ಭದ್ರತಾ ಕಾರಣಗಳಿಗಾಗಿ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗುತ್ತದೆ. ನಿಮ್ಮ ವಿರುದ್ಧ ಕಾನೂನು ಕ್ರಮವನ್ನೂ ತೆಗೆದುಕೊಳ್ಳಬಹುದು. ಪೊಲೀಸರು ನಿಮ್ಮ ವಿಳಾಸವನ್ನು ಪತ್ತೆ ಹಚ್ಚಿ ನಿಮ್ಮ ಮನೆಗೆ ಬರುವ ಸಾಧ್ಯತೆಗಳಿವೆ.
ಚಲನಚಿತ್ರ ಪೈರಸಿ ಅಪರಾಧ. ನೀವು ಗೂಗಲ್ ಸರ್ಚ್ ನಲ್ಲಿ ಪೈರಸಿಗೆ ಸಂಬಂಧಿಸಿದ ಯಾವುದನ್ನಾದರೂ ಹುಡುಕಿದರೆ, ನೀವು ತೊಂದರೆಗೆ ಸಿಲುಕಬಹುದು. ಭಾರತದಲ್ಲಿ ಚಲನಚಿತ್ರ ಪೈರಸಿ ಕಾನೂನುಬಾಹಿರವಾಗಿದೆ. ಹಾಗಾಗಿ ಇಂತಹ ವಿಷಯಗಳನ್ನು ಗೂಗಲ್ ನಲ್ಲಿ ಹುಡುಕಿದರೆ ನಿಮಗೆ ಫೈನ್ ಹಾಕಲಾಗುತ್ತದೆ, ಅದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ. ನಿಮಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು.
ಈ ಎರಡು ವಿಷಯಗಳ ಹೊರತಾಗಿ, ನೀವು Google ನಲ್ಲಿ ಹುಡುಕಬಾರದ ಇನ್ನೂ ಅನೇಕ ವಿಷಯಗಳಿವೆ. ಅದರಿಂದ ನೀವು ಜೈಲಿಗೂ ಹೋಗಬಹುದು. ನೀವು ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಅದನ್ನು ಗೂಗಲ್ ಮಾಡಬೇಕು ಎಂದು ನೀವು ಭಾವಿಸಬಹುದು. ಆದರೆ ಇಂತಹ ವಿಷಯಗಳಲ್ಲಿ ಗೂಗಲ್ ಕ್ರಮ ಕೈಗೊಳ್ಳುತ್ತದೆ. ಆದ್ದರಿಂದ, ಅಪರಾಧದ ವಿಷಯಗಳ ಬಗ್ಗೆ Google ನಲ್ಲಿ ಹುಡುಕುವುದು ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.
ಹೆಚ್ಚಿನ ವಿಜ್ಞಾನ ಮತ್ತು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:41 am, Sun, 15 October 23