ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ?: ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ

Mobile Camera cleaning tips: ನೀವು ಕ್ಯಾಮೆರಾದ ಕಾರಣದಿಂದ ನಿಮ್ಮ ಫೋನ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ನಿಮ್ಮ ಫೋನ್‌ನ ಕ್ಯಾಮೆರಾವನ್ನು ನೀವು ಹೇಗೆ ಸರಿಪಡಿಸಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ. ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ನಿಮ್ಮ ಫೋನ್‌ನಿಂದ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು, ಇದಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ.

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ?: ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ
Mobile Camera
Follow us
|

Updated on: Oct 15, 2023 | 1:27 PM

ಇಂದು 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್​ಫೋನ್​ಗಳು (Smartphones) ಮಾರುಕಟ್ಟೆಯಲ್ಲಿದೆ. ಆದರೆ, ಎಷ್ಟೇ ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನಿದ್ದರೂ ಅನೇಕ ಬಾರಿ ಫೋನ್‌ನಲ್ಲಿ ಫೋಟೋ ತೆಗೆದಾಗ ಅದು ಮಸುಕಾಗಿ ಕಾಣಿಸುತ್ತದೆ. ಹೀಗಾದಾಗ ಈ ಫೋನ್ ಬೇಡ, ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಎಂದು ಯೋಚಿಸುತ್ತೀರಿ. ಆದರೆ, ನೀವು ಕ್ಯಾಮೆರಾದ ಕಾರಣದಿಂದ ನಿಮ್ಮ ಫೋನ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ನಿಮ್ಮ ಫೋನ್‌ನ ಕ್ಯಾಮೆರಾವನ್ನು ನೀವು ಹೇಗೆ ಸರಿಪಡಿಸಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ. ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ನಿಮ್ಮ ಫೋನ್‌ನಿಂದ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು, ಇದಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ.

ಫೋನ್ ಲೆನ್ಸ್ ಕ್ಲೀನ್ ಮಾಡಿ

ಅನೇಕರು ಹಲವು ಬಾರಿ ಫೋನಿನ ಲೆನ್ಸ್ ಅನ್ನು ಕ್ಲೀನ್ ಮಾಡುವುದೇ ಇಲ್ಲ. ಇದರಿಂದ ಅದರಲ್ಲಿ ಧೂಳು ಸೇರಿಕೊಳ್ಳುತ್ತದೆ. ಬಹುತೇಕ ಎಲ್ಲಾ ಬಳಕೆದಾರರು ಫೋನ್ ಖರೀದಿಸಿದ ನಂತರ ಅದನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದರಿಂದಾಗಿ ಫೋನ್‌ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಧೂಳಿನ ಶೇಖರಣೆಯಿಂದ ನೀವು ತೆಗೆಯುವ ಫೋಟೋ ಮಸುಕಾಗಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಲೆನ್ಸ್ ಅನ್ನು ಸ್ವಚ್ಚಗೊಳಸಿಬೇಕು. ಲೆನ್ಸ್ ಕೊಳಕಾಗಿದ್ದರೆ ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ.

Flipkart Big Billion Days Sale 2023: ಮೋಟೋರೊಲಾ ಕಂಪನಿಯ ಸ್ಮಾರ್ಟ್​ಫೋನ್ ಬೇಕೇ?: ಫ್ಲಿಪ್​ಕಾರ್ಟ್​ನಲ್ಲಿದೆ ಧಮಾಕ ಆಫರ್

ಇದನ್ನೂ ಓದಿ
Image
ಮಾರುಕಟ್ಟೆಗೆ ಅಪ್ಪಳಿಸಿತು ಹೊಸ ಮಡಚುವ ಫೋನ್: ಹಾನರ್ ಮ್ಯಾಜಿಕ್ Vs 2 ರಿಲೀಸ್
Image
Google ನಲ್ಲಿ ನೀವು ಆ ರೀತಿಯ ವಿಷಯಗಳನ್ನು ಹುಡುಕುತ್ತಿದ್ದೀರಾ?
Image
ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ​ಫೋನ್ ಬಿಡುಗಡೆ ದಿನಾಂಕ ಬಹಿರಂಗ
Image
ಮೋಟೋರೊಲಾ ಕಂಪನಿಯ ಫೋನ್ ಬೇಕೇ?: ಫ್ಲಿಪ್​ಕಾರ್ಟ್​ನಲ್ಲಿದೆ ಧಮಾಕ ಆಫರ್

ಬೆಳಕು ಬಹಳಾ ಮುಖ್ಯ

ನೀವು ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದರೆ, ನಿಮ್ಮ ಫೋನ್‌ನಲ್ಲಿರುವ ಫೋಟೋಗಳು ಮಸುಕಾಗಿ ಬರುತ್ತದೆ. ಅಥವಾ ಉತ್ತಮ ಗುಣಮಟ್ಟದಲ್ಲಿ ಕಾಣಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಫೋಟೋವನ್ನು ಕ್ಲಿಕ್ ಮಾಡಿದಾಗ, ಲೈಟ್ ಉಪಯೋಗಿಸಿ. ಅಂದಹಾಗೆ, ನೀವು ನೈಸರ್ಗಿಕ ಬೆಳಕಿನಲ್ಲಿ ಫೋಟೋವನ್ನು ಕ್ಲಿಕ್ ಮಾಡಿದರೆ ನಿಮ್ಮ ಫೋಟೋ ಚೆನ್ನಾಗಿ ಕಾಣುತ್ತದೆ.

ಕ್ಯಾಮೆರಾ ಸೆಟ್ಟಿಂಗ್‌ಗಳು

ಫೋನ್‌ನ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ, ನೀವು ಕ್ಯಾಮೆರಾ ಅಪ್ಲಿಕೇಶನ್ ಅನ್ನು ತೆರೆದರೆ ಅದರಲ್ಲಿ ಪೋರ್ಟ್ರೇಟ್ ಮೋಡ್, ಲ್ಯಾಂಡ್‌ಸ್ಕೇಪ್, ನೈಟ್ ಮೋಡ್ ಅಥವಾ ಪ್ರೊ ಮೋಡ್‌ನಂತಹ ಹಲವು ಮೋಡ್‌ಗಳನ್ನು ನೋಡಬಹುದು. ಇದನ್ನು ಉಪಯೋಗಿಸಿ ಫೋಟೋ ಕ್ಲಿಕ್ಕಿಸಿದರೆ ಚೆನ್ನಾಗಿ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ