- Kannada News Photo gallery WhatsApp will stop working on certain older Android phones and iPhones from October 24, 2023
ಈ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಬಂದ್: ಇಲ್ಲಿದೆ ಫೋನುಗಳ ಪಟ್ಟಿ
WhatsApp will end support for older Android phones: ವಾಟ್ಸ್ಆ್ಯಪ್ ಹೊಸ ಅಪ್ಡೇಟ್ಗಳೊಂದಿಗೆ ಬಂದಾಗ ಅದು ಕೆಲ ಹಳೆಯ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತದೆ. ಇದೀಗ ವಾಟ್ಸ್ಆ್ಯಪ್ ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್ಫೋನ್ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ಹೇಳಿದೆ.
Updated on: Oct 16, 2023 | 6:55 AM

ಬಳಕೆದಾರರಿಗೆ ಅನುಕೂಲವಾಗುವಂತಹ ಫೀಚರ್, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ.

ವಾಟ್ಸ್ಆ್ಯಪ್ ಹೊಸ ಅಪ್ಡೇಟ್ಗಳೊಂದಿಗೆ ಬಂದಾಗ ಅದು ಕೆಲ ಹಳೆಯ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತದೆ. ಇದೀಗ ವಾಟ್ಸ್ಆ್ಯಪ್ ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್ಫೋನ್ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ಹೇಳಿದೆ.

“ಈಗಲೂ ಕೆಲವು ಜನರು ತಮ್ಮ ಸ್ಮಾರ್ಟ್ಫೋನ್ಗಳನ್ನು ಅಪ್ಡೇಟ್ ಮಾಡದೆ ಅಥವಾ ಹಳೆಯ ಸಾಫ್ಟ್ವೇರ್ ಬಳಸುತ್ತಿರುವುದು ಕಂಡುಬಂದಿದೆ. ಈ ಮೊಬೈಲ್ಗಳು ಇತ್ತೀಚಿನ ಭದ್ರತಾ ನವೀಕರಣಗಳನ್ನು ಹೊಂದಿಲ್ಲದಿರಬಹುದು. ವಾಟ್ಸ್ಆ್ಯಪ್ ಮುಂದಿನ ನೂತನ ಅಪ್ಡೇಟ್ಗಾಗಿ ಕೆಲ ಫೋನುಗಳಲ್ಲಿ ಕಾರ್ಯಚರಣೆ ನಿಲ್ಲಿಸಲಿದೆ,” ಎಂದು ವಾಟ್ಸ್ಆ್ಯಪ್ FAQ ನಲ್ಲಿ ಬರೆದುಕೊಂಡಿದೆ.

ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿರುವ ಫೋನ್ಗಳನ್ನು ನೋಡುವುದಾದರೆ, ನೆಕ್ಸಸ್ 7 (ಆಂಡ್ರಾಯ್ಡ್ 4.2 ಗೆ ಅಪ್ಗ್ರೇಡ್ ಮಾಡಬಹುದು), ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2, ಹೆಚ್ಟಿಸಿ ಒನ್, ಸೋನಿ ಎಕ್ಸ್ಪೀರಿಯಾ Z, ಎಲ್ಜಿ ಆಪ್ಟಿಮಸ್ ಜಿ ಪ್ರೊ, ಸ್ಯಾಮ್ಸಂಗ್ ಗ್ಯಾಲಕ್ಸಿ S2.

ಸ್ಯಾಮ್ಸಂಗ್ ಗ್ಯಾಲಕ್ಸಿ ನೆಕ್ಸಸ್, ಹೆಚ್ಟಿಸಿ ಸೆನ್ಸೇಶನ್, ಮೋಟೋರೊಲ Droid Razr, ಸೋನಿ ಎಕ್ಸ್ಪೀರಿಯಾ S2, ಮೋಟೋರೊಲ Xoom, ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 10.1, ಏಸಸ್ ಫೀ ಪ್ಯಾಡ್ ಟ್ರಾನ್ಸ್ಫಾರ್ಮರ್, ಏಸರ್ ಐಕೋನಿಯಾ ಟ್ಯಾಬ್ A5003, ಸ್ಯಾಮ್ಸಂಗ್ ಗ್ಯಾಲಕ್ಸಿ S, ಹೆಚ್ಟಿಸಿ ಡಿಸೈರ್ HD, ಎಲ್ಜಿ Optimus 2X, ಸೋನಿ ಎರಿಕ್ಸಾನ್ ಎಕ್ಸ್ಪೀರಿಯಾ Arc3.

ನಿಮ್ಮ ಸ್ಮಾರ್ಟ್ಫೋನ್ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಹಳೆಯದರಲ್ಲಿ ಇದೆಯೇ ಅಥವಾ ಇಲ್ಲವೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನಿನಲ್ಲಿನ ಸೆಟ್ಟಿಂಗ್ಗಳ ಮೆನುವನ್ನು ನೀವು ಪರಿಶೀಲಿಸಬಹುದು. ಸೆಟ್ಟಿಂಗ್ಗೆ ತೆರಳಿ ಸಾಫ್ಟ್ವೇರ್ ಆಯ್ಕೆಗೆ ಹೋದರೆ ಅಲ್ಲಿ ಕಾಣಿಸುತ್ತದೆ. ವಾಟ್ಸ್ಆ್ಯಪ್ ಈ ಫೋನುಗಳಲ್ಲಿ ಕಾರ್ಯನಿವರ್ಹಿಸುವುದನ್ನು ನಿಲ್ಲಿಸಿದರೆ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯ ಆಗುವುದಿಲ್ಲ. ಯಾವುದೇ ಇತರ ವಾಟ್ಸ್ಆ್ಯಪ್ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.









