AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇಂದು ಕೊನೇ ದಿನ: ಈ ಆಫರ್ ಮಿಸ್ ಮಾಡ್ಬೇಡಿ

Flipkart Big Billion Days sale 2023: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಇಂದು ಮುಕ್ತಾಯಗೊಳ್ಳಲಿದೆ. ಕೊನೆಯ ದಿನವಾದ ಇಂದು ಅಧಿಕೃತ ವೆಬ್‌ಸೈಟ್‌ನಲ್ಲಿ, ಆಯ್ದ ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಫ್ಲಿಪ್‌ಕಾರ್ಟ್ 10 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ, ಕಂಪನಿಯು Paytm ವ್ಯಾಲೆಟ್ ಮೂಲಕವೂ ಆಫರ್ ಪಡೆಯಬಹುದು.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇಂದು ಕೊನೇ ದಿನ: ಈ ಆಫರ್ ಮಿಸ್ ಮಾಡ್ಬೇಡಿ
Flipkart Big Billion Days sale
Vinay Bhat
|

Updated on: Oct 15, 2023 | 3:00 PM

Share

ಫ್ಲಿಪ್‌ಕಾರ್ಟ್​ನಲ್ಲಿ ಅಕ್ಟೋಬರ್ 8ಕ್ಕೆ ಆರಂಭವಾದ ಬಿಗ್ ಬಿಲಿಯನ್ ಡೇಸ್ 2023 (Flipkart Big Billion Days sale) ಇಂದು ಮುಕ್ತಾಯಗೊಳ್ಳಲಿದೆ. ಕೊನೆಯ ದಿನವಾದ ಇಂದು ಫ್ಲಿಪ್​ಕಾರ್ಟ್​ನಲ್ಲಿ ಬಂಪರ್ ಆಫರ್ ನೀಡಲಾಗಿದ್ದು, ಬ್ಯಾಂಕ್ ಕೊಡುಗೆಗಳು, ವಿನಿಮಯ ಕೊಡುಗೆಗಳು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಐಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಐಫೋನ್ 14, ಐಫೋನ್ 13 ಮತ್ತು ಹೆಚ್ಚಿನವುಗಳು ಭಾರಿ ರಿಯಾಯಿತಿಯಲ್ಲಿ ಮಾರಾಟವಾಗುತ್ತಿವೆ.

ಅಧಿಕೃತ ವೆಬ್‌ಸೈಟ್‌ನಲ್ಲಿ, ಆಯ್ದ ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಫ್ಲಿಪ್‌ಕಾರ್ಟ್ 10 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ, ಕಂಪನಿಯು Paytm ವ್ಯಾಲೆಟ್ ಮೂಲಕವೂ ಆಫರ್ ಪಡೆಯಬಹುದು. ಮೋಟೋರೋಲಾ ಇಂಡಿಯಾ ಕೂಡ ಫ್ಲಿಪ್​ಕಾರ್ಟ್ ಜೊತೆ ಕೈಜೋಡಿಸಿ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುತ್ತಿದೆ. ಮೋಟೋರೊಲಾ ಎಡ್ಜ್, ಮೋಟೋ G ಮತ್ತು ಮೋಟೋ E ಸರಣಿಯ ಫೋನ್‌ಗಳನ್ನು ಆಕರ್ಷಕ ಬೆಲೆಗಳೊಂದಿಗೆ ಪಡೆದುಕೊಳ್ಳಬಹುದು.

ಭಾರತದಲ್ಲಿ ಒಪ್ಪೋ ಕಂಪನಿಯ ಎರಡನೇ ಮಡಚುವ ಫೋನ್ ಬಿಡುಗಡೆ: ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ ಎಷ್ಟು?

ಇದನ್ನೂ ಓದಿ
Image
ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ?
Image
ಮಾರುಕಟ್ಟೆಗೆ ಅಪ್ಪಳಿಸಿತು ಹೊಸ ಮಡಚುವ ಫೋನ್: ಹಾನರ್ ಮ್ಯಾಜಿಕ್ Vs 2 ರಿಲೀಸ್
Image
Google ನಲ್ಲಿ ನೀವು ಆ ರೀತಿಯ ವಿಷಯಗಳನ್ನು ಹುಡುಕುತ್ತಿದ್ದೀರಾ?
Image
ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ​ಫೋನ್ ಬಿಡುಗಡೆ ದಿನಾಂಕ ಬಹಿರಂಗ

ಮೋಟೋರೊಲಾ ಎಡ್ಜ್ 40 ನಿಯೋ 8GB + 256GB ಮಾದರಿಯು ಕೇವಲ 20,999 ರೂ. ಗಳಲ್ಲಿ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7030 5G SoC, 50MP ಮುಖ್ಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಅಂತೆಯೆ ಮೋಟೋ G84 ಸ್ಮಾರ್ಟ್​ಫೋನ್ 12+256GB ರೂಪಾಂತರವು ಆಫರ್‌ಗಳೊಂದಿಗೆ ರೂ. 17,999 ಕ್ಕೆ ಲಭ್ಯವಿರುತ್ತದೆ. ಇದು ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್, 50MP ಪ್ರಾಥಮಿಕ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 30W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಇದೆ. 4K ಸ್ಮಾರ್ಟ್ ಟಿವಿಗಳು ಬ್ಯಾಂಕ್ ರಿಯಾಯಿತಿಯ ನಂತರ ಕೇವಲ 17,000 ರೂ. ಗಳಿಗೆ ಖರೀದಿಸಬಹುದು. ಗೇಮಿಂಗ್ ಮಾನಿಟರ್‌ಗಳನ್ನು 6,569 ರೂ. ಗಳಿಗೆ ನಿಮ್ಮದಾಗಿಸಬಹುದು. ಹೆಡ್‌ಫೋನ್‌ಗಳು/ಸ್ಪೀಕರ್‌ಗಳು 599 ರೂ. ಮತ್ತು ರೂ. 799 ರಿಂದ ಪ್ರಾರಂಭವಾಗುತ್ತವೆ. ನೀವು ಲ್ಯಾಪ್‌ಟಾಪ್‌ಗಳ ಹುಡುಕಾಟದಲ್ಲಿದ್ದರೆ, ಲ್ಯಾಪ್‌ಟಾಪ್‌ಗಳ ಡೀಲ್‌ಗಳು ರೂ. 8,990 ರಿಂದ ಪ್ರಾರಂಭವಾಗುತ್ತವೆ. ಟ್ಯಾಬ್ಲೆಟ್‌ಗಳನ್ನು 7,999 ರೂ. ಗಳಿಗೆ ಖರೀದಿಸಬಹುದು.

ಐಫೋನ್ 13 ಈಗಲೂ ಮಾರಾಟ ಆಗುತ್ತಿರುವ ಬಹುಬೇಡಿಕೆ ಸ್ಮಾರ್ಟ್​ಫೋನ್ ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದು 51,999 ರೂ. ಗೆ ಮಾರಾಟವಾಗುತ್ತಿದೆ. ಇದೇ ಮೊದಲ ಬಾರಿಗೆ ಐಫೋನ್ 14 60,000 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ. ನೀವು ಆಂಡ್ರಾಯ್ಡ್ ಇಷ್ಟಪಡುವವರಾಗಿದ್ದರೆ ಗೂಗಲ್ ಕಂಪನಿಯ ಪಿಕ್ಸೆಲ್ 7a ಖರೀದಿಸಬಹುದು. ಇದರ ಮೂಲ ಬೆಲೆ 43,999 ರೂ. ಆಗಿದೆ. ಆದರೆ, ಇದು ಈಗ ಕೇವಲ 35,999ರೂ. ಗೆ ಸೇಲ್ ಆಗುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ