ಬರೋಬ್ಬರಿ 12 ಅಪ್​ಗ್ರೇಡ್: ಇತಿಹಾಸ ನಿರ್ಮಿಸಲು ಸಜ್ಜಾದ ರಿಯಲ್ ಮಿಯ ಹೊಸ ಫೋನ್

Realme 12+ 5G India Launch: ಡಿಸೈನ್ ಮತ್ತು ಹಾರ್ಡ್‌ವೇರ್ ಬಗ್ಗೆ ಹೆಚ್ಚು ವಿವರ ತಿಳಿಸದೆ, ರಿಯಲ್ ಮಿ ಇಂಡಿಯಾ ಹೊಸ ಫೋನ್‌ನ ಆಗಮನವನ್ನು ಬಹಿರಂಗ ಪಡಿಸಿದೆ. ಮೇಲ್ನೋಟಕ್ಕೆ ಇದು ರಿಯಲ್ ಮಿ 12 ಪ್ರೊ ತರಹದ ಫಿನಿಶಿಂಗ್ ಅನ್ನು ಹೊಂದಿದೆ. ಇದು ರಿಯಲ್ ಮಿ 12+ 5G ಆಗಿರಬಹುದು ಎಂಬುದು ದಟ್ಟಾವಾಗಿದೆ.

ಬರೋಬ್ಬರಿ 12 ಅಪ್​ಗ್ರೇಡ್: ಇತಿಹಾಸ ನಿರ್ಮಿಸಲು ಸಜ್ಜಾದ ರಿಯಲ್ ಮಿಯ ಹೊಸ ಫೋನ್
realme 12+ 5G
Follow us
|

Updated on: Feb 17, 2024 | 1:53 PM

ಮಾರುಕಟ್ಟೆಯಲ್ಲಿ ಏನಾದರು ಹೊಸತನವನ್ನು ಸೃಷ್ಟಿಸುವುದರಲ್ಲಿ ರಿಯಲ್ ಮಿ ಕಂಪನಿ ಎತ್ತಿದ ಕೈ. ಕಳೆದ ತಿಂಗಳು ಈ ಕಂಪನಿ ಭಾರತದಲ್ಲಿ ರಿಯಲ್ ಮಿ 12 ಪ್ರೊ ಸರಣಿಯನ್ನು ಲಾಂಚ್ ಮಾಡಿತ್ತು. ಇದರಲ್ಲಿ ರಿಯಲ್ ಮಿ 12 ಪ್ರೊ ಮತ್ತು ರಿಯಲ್ ಮಿ 12 ಪ್ರೊ+ (Realme 12+ 5G) ಎಂಬ ಎರಡು ಫೋನುಗಳಿದ್ದವು. ಈ ತಿಂಗಳ ಕೊನೆಯಲ್ಲಿ ಮಲೇಷ್ಯಾದಲ್ಲಿ ರಿಯಲ್ ಮಿ 12+ 5G ಬಿಡುಗಡೆ ಕುರಿತು ಕೂಡ ಸುದ್ದಿ ಇದೆ. ಹೀಗಿರುವಾಗ ಇದೀಗ ರಿಯಲ್ ಮಿ ಇಂಡಿಯಾ ಹೊಸ ಫೋನ್‌ನ ಆಗಮನವನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದಕ್ಕೆ “ಒನ್ ಮೋರ್ ಪ್ಲಸ್” ಎಂಬ ಟ್ಯಾಗ್​ಲೈನ್ ಕೂಡ ನೀಡಿದೆ. ಇದು ರಿಯಲ್ ಮಿ 12+ ಆಗಿರಬಹುದು ಎಂಬ ಮಾತು ಟೆಕ್ ವಲಯದಲ್ಲಿದೆ.

ಡಿಸೈನ್ ಮತ್ತು ಹಾರ್ಡ್‌ವೇರ್ ಬಗ್ಗೆ ಹೆಚ್ಚು ವಿವರ ತಿಳಿಸದೆ, ರಿಯಲ್ ಮಿ ಇಂಡಿಯಾ ಹೊಸ ಫೋನ್‌ನ ಆಗಮನವನ್ನು ಬಹಿರಂಗ ಪಡಿಸಿದೆ. ರಿಯಲ್ ಮಿ ವೆಬ್‌ಸೈಟ್‌ನಲ್ಲಿ ಮೀಸಲಾದ ಮೈಕ್ರೋಸೈಟ್ ಇದೆ. ಮೇಲ್ನೋಟಕ್ಕೆ ಇದು ರಿಯಲ್ ಮಿ 12 ಪ್ರೊ ತರಹದ ಫಿನಿಶಿಂಗ್ ಅನ್ನು ಹೊಂದಿದೆ. ಇದು ರಿಯಲ್ ಮಿ 12+ 5G ಆಗಿರಬಹುದು ಎಂಬುದು ದಟ್ಟಾವಾಗಿದೆ.

ಮನೆಯ ಈ ಜಾಗದಲ್ಲಿ ವೈ-ಫೈ ರೂಟರ್ ಇಟ್ಟರೆ ವೇಗ ದುಪ್ಪಟ್ಟಾಗುತ್ತದೆ?

ವಿಶೇಷ ಎಂದರೆ ಸ್ಮಾರ್ಟ್‌ಫೋನ್ ಉದ್ಯಮದ ಇತಿಹಾಸದಲ್ಲಿ ಹಿಂದೆಂದೂ ಕಾಣದ 12 ಅಪ್‌ಗ್ರೇಡ್‌ಗಳನ್ನು ಈ ಫೋನ್ ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಫೆಬ್ರವರಿ 29 ರಂದು ಮಲೇಷ್ಯಾದಲ್ಲಿ ರಿಯಲ್ ಮಿ 12+ ಮತ್ತು ರಿಯಲ್ ಮಿ 12 Pro+ 5G ಲಾಂಚ್ ಆಗಲಿದೆ ಎಂದು ಬ್ರ್ಯಾಂಡ್ ಖಚಿತಪಡಿಸಿದ ನಂತರ ವೆಬ್‌ಸೈಟ್‌ನಲ್ಲಿ ಈ ಟೀಸರ್ ಮತ್ತು ಅಧಿಕೃತ ಪಟ್ಟಿ ಕೊಡಲಾಗಿದೆ.

ರಿಯಲ್ ಮಿ 12+ 5G ನಿರೀಕ್ಷಿತ ಫೀಚರ್ಸ್:

ಡಿಸ್‌ಪ್ಲೇ: ರಿಯಲ್ ಮಿ 12+ 1800 × 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್: ಈ ಸ್ಮಾರ್ಟ್​ಫೋನ್​ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಅಳವಡಿಸಿರಬಹುದು.

RAM ಮತ್ತು ಸಂಗ್ರಹಣೆ: 12GB RAM ಮತ್ತು 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆ.

ಮಧ್ಯಮ ಬೆಲೆಯ ಪೋಕೋ X6 ಸ್ಮಾರ್ಟ್​ಫೋನ್ ಹೇಗಿದೆ?: ಇಲ್ಲಿದೆ ವಿಮರ್ಶೆ

OS: ಈ ಫೋನ್ ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI ಕಸ್ಟಮ್ ಸ್ಕಿನ್ ಅನ್ನು ಬಾಕ್ಸ್‌ನಿಂದ ಬೂಟ್ ಮಾಡುವ ಸಾಧ್ಯತೆಯಿದೆ.

ಕ್ಯಾಮೆರಾಗಳು: OIS ಜೊತೆಗೆ 50MP Sony LYT-600 ಶೂಟರ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮತ್ತು 2MP ಮ್ಯಾಕ್ರೋ ಸೆನ್ಸರ್. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಸ್ನ್ಯಾಪರ್ ಇರಬಹುದು.

ಬ್ಯಾಟರಿ: ರಿಯಲ್ ಮಿ 12+ 5,000mAh ಬ್ಯಾಟರಿ ಮತ್ತು 67W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ