ಒನ್ಪ್ಲಸ್ ಪ್ರಿಯರು ಬಹಳ ದಿನಗಳಿಂದ ಕಾದುಕುಳಿತಿರುವ ಬಹುನಿರೀಕ್ಷಿತ ಒನ್ಪ್ಲಸ್ 12 (OnePlsu 12) ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಒನ್ಪ್ಲಸ್ ಕಂಪನಿ ಇದೇ ಡಿಸೆಂಬರ್ 4 ರಂದು ತನ್ನ 10 ನೇ ವಾರ್ಷಿಕೋತ್ಸವ ಆಚರಿಸಲು ಮುಂದಾಗಿದೆ. ಆ ದಿನದಂದೇ ಒನ್ಪ್ಲಸ್ 12 ಅನಾವರಣಗೊಳ್ಳಲಿದೆ. ಬಿಡುಗಡೆಗೆ ಮುಂಚಿತವಾಗಿ, ಈ ಸ್ಮಾರ್ಟ್ಫೋನ್ನ ಕೆಲ ಫೀಚರ್ಸ್ ಮತ್ತು ಟೀಸರ್‌ಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. ಅಧಿಕೃತ ಫೀಚರ್ಸ್ ತಿಳಿದುಬಂದಿಲ್ಲವಾದರೂ ಕೆಲ ಟಿಪ್ಸ್ಟರ್ಗಳು ಈ ಫೋನಿನ ಮಾಹಿತಿ ಹೊರಹಾಕಿದ್ದಾರೆ.
ಒನ್ಪ್ಲಸ್ 12 ಆರಂಭದಲ್ಲಿ ಚೀನಾದಲ್ಲಿ ಅನಾವರಣಗೊಳ್ಳಲಿದೆ. ಬಳಿಕ 2024 ರ ಜನವರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಚೊಚ್ಚಲ ಪ್ರವೇಶ ಪಡೆಯಲಿದೆ. ಈ ಫೋನಿನ ಹಿಂದಿನ ವರ್ಷನ್ ಒನ್ಪ್ಲಸ್ 11 ಫೆಬ್ರವರಿ 2023 ರಲ್ಲಿ ಭಾರತದಲ್ಲಿ ರಿಲೀಸ್ ಆಗಿತ್ತು. ಭಾರತದಲ್ಲಿ ಒನ್ಪ್ಲಸ್ 12 ಬಿಡುಗಡೆ ದಿನಾಂಕದ ಇನ್ನೂ ಖಚಿತವಾಗಿಲ್ಲದಿದ್ದರೂ, ಇದು ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ- ಪೇಲ್ ಗ್ರೀನ್, ರಾಕ್ ಬ್ಲ್ಯಾಕ್ ಮತ್ತು ವೈಟ್.
ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ, ಒನ್ಪ್ಲಸ್ 12 ನಯವಾದ ವಿನ್ಯಾಸದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಈ ಫೋನ್ ಪೆರಿಸ್ಕೋಪ್ ಜೂಮ್ ಲೆನ್ಸ್ನೊಂದಿಗೆ ಬರುತ್ತದೆ. ಇದು ಒಂದು ರೀತಿಯ ಟೆಲಿಫೋಟೋ ಲೆನ್ಸ್ ಆಗಿದ್ದು ಅತ್ಯುತ್ತಮ ಕ್ವಾಲಿಟಿಯಲ್ಲಿ ಫೋಟೋ ಸೆರೆಯುಡಿಯುತ್ತದೆ. ಮುಖ್ಯವಾಗಿ ದೂರದ ವಸ್ತುವನ್ನು ಉತ್ತಮ ಗುಣಮಟ್ಟದ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಒನ್ಪ್ಲಸ್ ಚೀನಾ ಅಧ್ಯಕ್ಷ ಲಿ ಜೀ ಈ ಹಿಂದೆ ವೈಬೊದಲ್ಲಿ ಒನ್ಪ್ಲಸ್ 12 64-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ ಎಂದು ಬಹಿರಂಗಪಡಿಸಿದ್ದರು.
Tech Tips: ನಿಮ್ಮ ಫೋನ್ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು: ಈ ಸೀಕ್ರೆಟ್ ಕೋಡ್‌ಗಳ ಮೂಲಕ ತಿಳಿಯಿರಿ
ಇದರ ಹೊರತಾಗಿ, ಈ ಫೋನ್ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ Sony LYT-808 ಸಂವೇದಕವನ್ನು ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ Sony IMX581 ಸಂವೇದಕವನ್ನು ಹೊಂದಿರಬಹುದು. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುವ ಸಾಧ್ಯತೆ ಇದೆ.
ಈ ಫೋನ್ ಬಾಗಿದ ಡಿಸ್‌ಪ್ಲೇಯೊಂದಿಗೆ ಬರಲಿದ್ದು, ಸ್ಟೈಲಿಶ್ ಆಗಿದೆಯಂತೆ. 2,600nits ನ ಗರಿಷ್ಠ ಬ್ರೈಟ್ನೆಸ್ ಮಟ್ಟದೊಂದಿಗೆ 2K ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇಯು DisplayMate A+ ರೇಟಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಈ ಫೋನ್ ಅನ್ನು ಹಿಡಿದಿಕೊಳ್ಳುವುದು ತುಂಬಾ ಸುಲಭವಂತೆ. ಒನ್ಪ್ಲಸ್ 12 ನ ಇತರ ನಿರೀಕ್ಷಿತ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ಸ್ನಾಪ್ಡ್ರಾಗನ್ 8 Gen 3 ಪ್ರೊಸೆಸರ್ ಅನ್ನು 16GB RAM ನೊಂದಿಗೆ ಜೋಡಿಸಲಾಗಿದೆ ಮತ್ತು 512GB ವರೆಗಿನ ಸಂಗ್ರಹಣೆಯನ್ನು ಒಳಗೊಂಡಿದೆ. ಈ ಫೋನ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ ಬ್ಯಾಟರಿಯನ್ನು ಸಹ ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Mon, 27 November 23