ಒನ್​ಪ್ಲಸ್​ನ ಚೊಚ್ಚಲ ಮಡುಚುವ ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರ

OnePlus Open Launched in India: ಒನ್​ಪ್ಲಸ್​ ಓಪನ್ ಫೋಲ್ಡಬಲ್ ಸ್ಮಾರ್ಟ್​ಫೋನ್ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಿದೆ. ಇದರ 16GB RAM + 512GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ 1,39,999 ರೂ. ನಿಗದಿ ಮಾಡಲಾಗಿದೆ. ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ನಿಂದ ಚಾಲಿತವಾಗಿದೆ.

ಒನ್​ಪ್ಲಸ್​ನ ಚೊಚ್ಚಲ ಮಡುಚುವ ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರ
OnePlus Open
Follow us
Vinay Bhat
|

Updated on: Oct 20, 2023 | 2:47 PM

ಪ್ರಸಿದ್ಧ ಒನ್​ಪ್ಲಸ್​ ಕಂಪನಿ ತನ್ನ ಮೊಟ್ಟ ಮೊದಲ ಫೋಲ್ಡಬಲ್ ಫೋನ್ ಒನ್​ಪ್ಲಸ್​ ಓಪನ್ (OnePlus Open) ಅನ್ನು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ನಿಂದ ಚಾಲಿತವಾಗಿದೆ. ಈ ಫೋನ್ ಮೂರು Hasselblad-ಬ್ರಾಂಡ್​ನ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಇವುಗಳಲ್ಲಿ ಒಂದು ಸೋನಿಯ ಮುಂದಿನ ಪೀಳಿಗೆಯ LYTIA-T808 “ಪಿಕ್ಸೆಲ್ ಸ್ಟ್ಯಾಕ್ಡ್” CMOS ಸಂವೇದಕವಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಒನ್​ಪ್ಲಸ್​ ಓಪನ್ ಬೆಲೆ, ಲಭ್ಯತೆ:

ಭಾರತದಲ್ಲಿ ಒನ್​ಪ್ಲಸ್​ ಓಪನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 16GB RAM + 512GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ 1,39,999 ರೂ. ನಿಗದಿ ಮಾಡಲಾಗಿದೆ. ಇದು ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ, ಅಧಿಕೃತ ಒನ್​ಪ್ಲಸ್​ ವೆಬ್‌ಸೈಟ್, ಅಮೆಜಾನ್ ಮೂಲಕ ಮತ್ತು ದೇಶದಾದ್ಯಂತದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟ ಕಾಣಲಿದೆ. ಮುಂಗಡ-ಆರ್ಡರ್‌ಗಳು ಪ್ರಾರಂಭವಾಗಿವೆ. ಮತ್ತು ಅಕ್ಟೋಬರ್ 27 ರಿಂದ ಮಾರಾಟ ಶುರುವಾಗಲಿದೆ. ICICI ಬ್ಯಾಂಕ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 5,000 ರೂ. ಗಳ ರಿಯಾಯಿತಿ ಇದೆ.

ಒನ್​ಪ್ಲಸ್​ ಓಪನ್ ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೋ) ಒನ್​ಪ್ಲಸ್​ ಓಪನ್ ಮಡಿಸಬಹುದಾದ ಫೋನ್ ಆಗಿದ್ದು, ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ OxygenOS 13.2 ನಲ್ಲಿ ಕಾರ್ಯನಿರ್ವಹಿಸುತ್ತದೆ. 7.82-ಇಂಚಿನ (2,268×2,440 ಪಿಕ್ಸೆಲ್‌ಗಳು) 2K ಫ್ಲೆಕ್ಸಿ-ಫ್ಲೂಯಿಡ್ LTPO 3.0 AMOLED ಡಿಸ್‌ಪ್ಲೇ ಜೊತೆಗೆ 1-120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ರೆಸ್ಪಾನ್ಸ್ ರೇಟ್ ಮತ್ತು 2,800 nits ವರೆಗಿನ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ.

ಇದನ್ನೂ ಓದಿ
Image
Tech Tips: ಮೊಬೈಲ್ ಬ್ಯಾಟರಿ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಹೇಗೆ?
Image
ಮೊಬೈಲ್‌ನ ಜೀವಿತಾವಧಿ ಎಷ್ಟು?: ಒಂದು ಫೋನ್ ಅನ್ನು ಎಷ್ಟು ವರ್ಷ ಬಳಸಬಹುದು?
Image
ವಾಟ್ಸ್​ಆ್ಯಪ್ ವಾಯ್ಸ್ ನೋಟ್​ನಲ್ಲಿ ಅಚ್ಚರಿ ಆಯ್ಕೆ
Image
ಭಾರತದಲ್ಲಿ ಪಿಕ್ಸೆಲ್ ಸರಣಿಯ ಸ್ಮಾರ್ಟ್​ಫೋನ್ ತಯಾರಿಸಲು ಮುಂದಾದ ಗೂಗಲ್

Google Digikavach: ಇನ್ಮುಂದೆ ನಿಮ್ಮ ಹಣ ಸುರಕ್ಷಿತ: ಗೂಗಲ್​ನಿಂದ ಡಿಜಿಕವಚ್ ಅನಾವರಣ, ಏನಿದು ನೋಡಿ

ಒನ್​ಪ್ಲಸ್​ ಓಪನ್‌ನ ಹೊರಗಿನ ಡಿಸ್ ಪ್ಲೇ 6.31-ಇಂಚಿನ (1,116×2,484 ಪಿಕ್ಸೆಲ್‌ಗಳು) 2K LTPO 3.0 ಸೂಪರ್ ಫ್ಲೂಯಿಡ್ AMOLED ಡಿಸ್‌ಪ್ಲೇ ಜೊತೆಗೆ 10-120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ರೆಸ್ಪಾನ್ಸ್ ರೇಟ್ ಮತ್ತು ಗರಿಷ್ಠ 2,800 ಗರಿಷ್ಠ ಬ್ರೈಟ್‌ನೆಸ್​ನಿಂದ ಕೂಡಿದೆ. ಕಂಪನಿಯ ಪ್ರಕಾರ ಇದು ಸೆರಾಮಿಕ್ ಗಾರ್ಡ್ ರಕ್ಷಣಾತ್ಮಕ ಕವಚವನ್ನು ಹೊಂದಿದೆ.

ಒನ್​ಪ್ಲಸ್​ ಮಡಿಸಬಹುದಾದ ಹ್ಯಾಂಡ್‌ಸೆಟ್ ಅನ್ನು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 Gen 2 ಚಿಪ್ ಜೊತೆಗೆ Adreno 740 GPU 16GB LPDDR5x RAM ನೊಂದಿಗೆ ಜೋಡಿಸಿದೆ. ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಒನ್​ಪ್ಲಸ್​ Hasselblad-ಬ್ರಾಂಡ್​ನ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, 1/1.43-ಇಂಚಿನ ಸೋನಿ LYT-T808 “Pixel Stacked” CMOS ಸೆನ್ಸಾರ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS), 85-ಡಿಗ್ರಿ ಫೀಲ್ಡ್-ಆಫ್-ವ್ಯೂ ಆಯ್ಕೆಯನ್ನು ಹೊಂದಿದೆ.

ಜೊತೆಗೆ 64-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವು 33.4-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.6 ಅಪರ್ಚರ್ ಅನ್ನು ಹೊಂದಿದೆ. ಇದು 3x ಆಪ್ಟಿಕಲ್ ಜೂಮ್, 6x ಇನ್-ಸೆನ್ಸರ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ. 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೋನಿ IMX581 ಸಂವೇದಕದೊಂದಿಗೆ EIS, 114-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.2 ಅಪರ್ಚರ್ ಅನ್ನು ಹೊಂದಿದೆ. ಒನ್​ಪ್ಲಸ್​ ಓಪನ್​ನ ಹೊರ ಡಿಸ್ ಪ್ಲೇಯಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು EIS ಮತ್ತು 88.5-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು f/2.4 ದ್ಯುತಿರಂಧ್ರದೊಂದಿಗೆ ಸೆಲ್ಫಿಗಳು ಮತ್ತು ವಿಡಿಯೊ ಚಾಟ್‌ಗಳಿಗಾಗಿ ಅಳವಡಿಸಲಾಗಿದೆ.

ಈ ಫೋನ್‌ನಲ್ಲಿ ಡ್ಯುಯಲ್-ಸೆಲ್ 4,800mAh ಬ್ಯಾಟರಿ (3,295+1,510mAh) ಅಳವಡಿಸಲಾಗಿದ್ದು ಅದು 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ ಬಾಕ್ಸ್‌ನಲ್ಲಿ 80W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳು 5G, 4G LTE, Wi-Fi 7, ಬ್ಲೂಟೂತ್ 5.3, USB 3.1 ಸಂಪರ್ಕದೊಂದಿಗೆ USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್