Tech Tips: ಮೊಬೈಲ್‌ನ ಜೀವಿತಾವಧಿ ಎಷ್ಟು?: ಒಂದು ಸ್ಮಾರ್ಟ್​ಫೋನ್ ಅನ್ನು ಎಷ್ಟು ವರ್ಷ ಬಳಸಬಹುದು?

How long do Smartphones last: ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತಾ ಇರುತ್ತದೆ. ಈಗಂತು ಕಡಿಮೆ ಬೆಲೆಗೆ ಫೋನ್ ಸಿಗುವುದರಿಂದ ಇವುಗಳ ಮಾರಾಟ ಭರ್ಜರಿ ಆಗಿ ನಡೆಯುತ್ತದೆ. ಆದರೆ, ಒಂದು ಸ್ಮಾರ್ಟ್​ಫೋನನ್ನು ಎಷ್ಟು ಸಮಯ ಉಪಯೋಗಿಸಬಹುದು ಎಂದು ನೀವು ಯೋಚಿಸಿದ್ದೀರಾ?. ಹಾಗಾದರೆ ಸ್ಮಾರ್ಟ್​ಫೋನ್ ಅನ್ನು ಎಷ್ಟು ವರ್ಷಗಳ ಕಾಲ ಬಳಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

Tech Tips: ಮೊಬೈಲ್‌ನ ಜೀವಿತಾವಧಿ ಎಷ್ಟು?: ಒಂದು ಸ್ಮಾರ್ಟ್​ಫೋನ್ ಅನ್ನು ಎಷ್ಟು ವರ್ಷ ಬಳಸಬಹುದು?
Mobile lifespan
Follow us
Vinay Bhat
|

Updated on: Oct 19, 2023 | 3:46 PM

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ನಾವೆಲ್ಲರೂ ಚಿಕ್ಕ-ಪುಟ್ಟ ಕೆಲಸದಿಂದ ಹಿಡಿದು ದೊಡ್ಡ ಕೆಲಸಗಳಿಗೆ ಮೊಬೈಲ್ ಅನ್ನು ಅವಲಂಬಿಸಿದ್ದೇವೆ. ಆದರೆ, ನೀವು ಬಳಸುತ್ತಿರುವ ಮೊಬೈಲ್‌ನ ಜೀವಿತಾವಧಿ ಎಷ್ಟು ಎಂದು ಎಂದಾದರೂ ಯೋಚಿಸಿದ್ದೀರಾ?. ಫೋನ್ ಹಾಳಾಗುವವರೆಗೂ ಕೆಲಸ ಮಾಡುತ್ತಿರುತ್ತದೆ ಎಂಬುದು ನಿಮ್ಮ ಉತ್ತರ ಆಗಿರಬಹುದು. ಆದರೆ, ನಿಮ್ಮ ಯೋಚನೆ ತಪ್ಪು. ಹಾಗಾದರೆ ಸ್ಮಾರ್ಟ್​ಫೋನ್ ಅನ್ನು ಎಷ್ಟು ವರ್ಷಗಳ ಕಾಲ ಬಳಸಬಹುದು?. ಇಲ್ಲಿದೆ ನೋಡಿ ಉತ್ತರ.

ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಹೆಚ್ಚಿನ ಕಂಪನಿಗಳು ಹೊಸ ಫೋನ್‌ನೊಂದಿಗೆ ಮೂರು ವರ್ಷಗಳವರೆಗೆ ಓಎಸ್ (ಆಪರೇಟಿಂಗ್ ಸಿಸ್ಟಮ್) ಅಪ್‌ಗ್ರೇಡ್ ಮಾಡುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತವೆ. ಇಷ್ಟೇ ಅಲ್ಲ, ಓಎಸ್ ಅಪ್‌ಗ್ರೇಡ್‌ಗಳ ಹೊರತಾಗಿ, ಕೆಲವು ಕಂಪನಿಗಳು ಗ್ರಾಹಕರ ಸುರಕ್ಷತೆಗಾಗಿ ಐದು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಕೂಡ ನೀಡುತ್ತಿವೆ.

ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಆಕರ್ಷಕ ಕ್ಯಾಮೆರಾ: ಹಾನರ್​ನಿಂದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ

ಇದನ್ನೂ ಓದಿ
Image
ವಾಟ್ಸ್​ಆ್ಯಪ್ ವಾಯ್ಸ್ ನೋಟ್​ನಲ್ಲಿ ಅಚ್ಚರಿ ಆಯ್ಕೆ
Image
ಭಾರತದಲ್ಲಿ ಪಿಕ್ಸೆಲ್ ಸರಣಿಯ ಸ್ಮಾರ್ಟ್​ಫೋನ್ ತಯಾರಿಸಲು ಮುಂದಾದ ಗೂಗಲ್
Image
ಇನ್ಮುಂದೆ ನಿಮ್ಮ ಹಣ ಸುರಕ್ಷಿತ: ಗೂಗಲ್​ನಿಂದ ಡಿಜಿಕವಚ್ ಅನಾವರಣ
Image
ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಬಿಡುಗಡೆ: ಬೆಲೆ 14,999 ರೂ.

ನಿಮ್ಮ ಫೋನ್‌ಗೆ ನವೀಕರಣಗಳು ಅಂದರೆ ಅಪ್ಡೇಟ್ ಬರುವುದು ನಿಂತಾಗ, ಫೋನ್ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥಮಾಡಿಕೊಳ್ಳಿ. ಕಂಪನಿಗಳು ಅಪ್ಡೇಟ್ ನೀಡುವುದು ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ಗಳಿಗೆ ಯಾವುದೇ ತೊಂದರೆ ಅಥವಾ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ನವೀಕರಣಗಳನ್ನು ನೀಡಲಾಗುತ್ತದೆ. ಈ ಅಪ್ಡೇಟ್ ನೀಡುವುದನ್ನು ಕಂಪನಿ ನಿಲ್ಲಿಸಿದಾಗ ಫೋನ್ ಬದಲಾವಣೆ ಮಾಡುವುದು ಉತ್ತಮ.

ಇದರಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್ ಅಥವಾ ದುಬಾರಿ ಬೆಲೆಯ ಫೋನ್ ಎಂಬ ಬೇಧಭಾವ ಬರುವುದಿಲ್ಲ. ಯಾವುದೇ ಫೋನಾಗಿದ್ದರೂ ಸಾಫ್ಟ್‌ವೇರ್ ಅಪ್ಡೇಟ್ ನೀಡುವುದು ನಿಲ್ಲಿಸಿದರೆ ಅದರ ಆಯುಷ್ಯ ಮುಗಿಯಿತು ಎಂದರ್ಥ. 10,000 ರೂ. ಮೌಲ್ಯದ ಅಗ್ಗದ ಬಜೆಟ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಕಂಪನಿಗಳು ಸಾಮಾನ್ಯವಾಗಿ ಹೆಚ್ಚು ಸಮಯ ಗ್ರಾಹಕರಿಗೆ ಓಎಸ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಒದಗಿಸುವ ಭರವಸೆ ನೀಡುವುದಿಲ್ಲ.

ಆದರೆ ಮತ್ತೊಂದೆಡೆ, ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳೊಂದಿಗೆ ಬರುವ ದುಬಾರಿ ಮೊಬೈಲ್‌ಗಳ ಕಂಪನಿಗಳು ಗ್ರಾಹಕರಿಗೆ OS ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಹೆಚ್ಚು ಸಮಯ ನೀಡುತ್ತವೆ. ಇದರಿಂದಾಗಿ ಈ ಮಾದರಿಗಳು ಸುರಕ್ಷಿತವಾಗಿ ಉಳಿಯುತ್ತವೆ ಮತ್ತು ದೀರ್ಘಾವಧಿಯ ವರೆಗೆ ಉಪಯೋಗಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್