ಭಾರತದಲ್ಲಿ ಪಿಕ್ಸೆಲ್ ಸರಣಿಯ ಸ್ಮಾರ್ಟ್‌ಫೋನ್ ತಯಾರಿಸಲು ಮುಂದಾದ ಗೂಗಲ್
Google Manufacture Pixel Phones in India: ತನ್ನ ಮೊದಲ ಪಿಕ್ಸೆಲ್-ಬ್ರಾಂಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾದ ಏಳು ವರ್ಷಗಳ ನಂತರ, ಕಂಪನಿಯು ತನ್ನ ಗೂಗಲ್ ಫಾರ್ ಇಂಡಿಯಾ 2023 ಈವೆಂಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಮುಂದಾಗಿದೆ.
ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವುದಾಗಿ ಗೂಗಲ್ (Google) ಗುರುವಾರ ಪ್ರಕಟಿಸಿದೆ. ಸರ್ಚ್ ಇಂಜಿನ್ ದೈತ್ಯ ಭಾರತದಲ್ಲಿ ಪಿಕ್ಸೆಲ್ 8 ಅನ್ನು ಉತ್ಪಾದಿಸುತ್ತದೆ ಮತ್ತು ಮೊದಲ ಫೋನ್ 2024 ರಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿ ಆಗಿದೆ. ಪಿಕ್ಸೆಲ್ 8 ಅನ್ನು ಕಂಪನಿಯು ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಪಿಕ್ಸೆಲ್ 8 ಪ್ರೊ ನೊಂದಿಗೆ ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಕಸ್ಟಮ್ ಗೂಗಲ್ ಟೆನ್ಸರ್ ಜಿ3 ಚಿಪ್ ಮತ್ತು ಟೈಟಾನ್ ಎಂ2 ಸೆಕ್ಯುರಿಟಿ ಚಿಪ್‌ನಿಂದ ಚಾಲಿತವಾಗಿದೆ.
ತನ್ನ ಮೊದಲ ಪಿಕ್ಸೆಲ್-ಬ್ರಾಂಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾದ ಏಳು ವರ್ಷಗಳ ನಂತರ, ಕಂಪನಿಯು ಗೂಗಲ್ ಫಾರ್ ಇಂಡಿಯಾ 2023 ಈವೆಂಟ್‌ನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಮುಂದಾಗಿದೆ. ”ಕಂಪನಿಯು ಭಾರತದಲ್ಲಿ ಪಿಕ್ಸೆಲ್ 8 ಅನ್ನು ತಯಾರಿಸುತ್ತದೆ ಮತ್ತು ಇದು ಸ್ಥಳೀಯ ಮತ್ತು ವಿದೇಶಿ ತಯಾರಕರೊಂದಿಗೆ ಕೆಲಸ ಮಾಡುತ್ತದೆ,” ಎಂದು ಹೇಳಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಮಾಡಿರುವ ಟ್ವೀಟ್:
We shared plans at #GoogleforIndia to manufacture Pixel smartphones locally and expect the first devices to roll out in 2024. We’re committed to being a trusted partner in India’s digital growth- appreciate the support for Make In India @PMOIndia + MEIT Minister @AshwiniVaishnaw.
— Sundar Pichai (@sundarpichai) October 19, 2023
ಈಗಾಗಲೇ ಭಾರತದಲ್ಲಿ ಸ್ಯಾಮ್‌ಸಂಗ್ ಮತ್ತು ಆ್ಯಪಲ್ ಸಹ ತಮ್ಮ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡಲು ಶುರುಮಾಡಿದೆ. ಇದೀಗ ದೇಶದಲ್ಲಿ ಗೂಗಲ್ ಕೂಡ ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾಗಿದೆ. ಆದರೆ, ಗೂಗಲ್‌ನ ಪಿಕ್ಸೆಲ್ ಹ್ಯಾಂಡ್‌ಸೆಟ್‌ಗಳ ಬೆಲೆ ಕಡಿಮೆ ಆಗುತ್ತಾ ಎಂಬುದು ಪ್ರಸ್ತುತ ಅಸ್ಪಷ್ಟವಾಗಿದೆ.
ಏತನ್ಮಧ್ಯೆ, ಗೂಗಲ್ ತನ್ನ ಸೇವಾ ನೆಟ್‌ವರ್ಕ್‌ನ ವ್ಯಾಪ್ತಿಯನ್ನು ದೇಶಾದ್ಯಂತ ಹೆಚ್ಚಿನ ನಗರಗಳಿಗೆ ವಿಸ್ತರಿಸಲು ಯೋಜಿಸಿದೆ ಎಂದು ಘೋಷಿಸಿತು. ಕಂಪನಿಯು ಪ್ರಸ್ತುತ 27 ನಗರಗಳಲ್ಲಿ 28 ಸೇವಾ ಕೇಂದ್ರಗಳ್ನು ಹೊಂದಿದೆ. “ಇದು ನಮ್ಮ ಸ್ಮಾರ್ಟ್‌ಫೋನ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಮತ್ತು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುವ ಆರಂಭಿಕ ಹಂತವಾಗಿದೆ” ಎಂದು ಸಾಧನಗಳು ಮತ್ತು ಸೇವೆಗಳ ಹಿರಿಯ ವಿಪಿ ರಿಕ್ ಓಸ್ಟರ್‌ಲೋ ಹೇಳಿದ್ದಾರೆ.
ಡಿಜಿಕವಚ್ ಅನಾವರಣ
ಇನ್ನು ಗೂಗಲ್ ತನ್ನ ಡಿಜಿಕವಚ್- DigiKavach ಉಪಕ್ರಮವನ್ನು ಪರಿಚಯಿಸಿದೆ. ಇದು ಸೈಬರ್ ಕ್ರೈಮ್ನಂತಹ ಪ್ರಕರಣಗಳಿಂದ ಮುಕ್ತಿ ನೀಡುತ್ತಿದೆ. ಆರ್ಥಿಕ ವಂಚನೆಯನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ವಂಚಕರ ಸ್ಟ್ರಾಟರ್ಜಿಯನ್ನು ಬಿಚ್ಚಿಡಲು ಡಿಜಿಕವಚ್ನ ತಂಡಗಳು ಕೆಲಸ ಮಾಡುತ್ತವೆ. ಮೋಸ ಮಾಡುವಂತಹ ಬೆದರಿಕೆಗಳನ್ನು ಪತ್ತೆಹಚ್ಚಲು ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಬೆದರಿಕೆಗಳನ್ನು ಮೊದಲೇ ಗುರುತಿಸುವ ಮೂಲಕ, ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಣಕಾಸಿನ ನಷ್ಟವನ್ನು ತಡೆಗಟ್ಟುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Thu, 19 October 23