AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

OnePlus Open Launch Today in India: ಇಂದು ಸಂಜೆ 7.30PM ಕ್ಕೆ ಮುಂಬೈನಲ್ಲಿ ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್​ಪ್ಲಸ್​ ಓಪನ್ ಬಿಡುಗಡೆಯಾಗಲಿದೆ. ಟಿಪ್‌ಸ್ಟರ್ ಪ್ರಕಾರ, ಒನ್​ಪ್ಲಸ್​ ಓಪನ್ ಬೆಲೆ 1.2 ಲಕ್ಷ ಆಸುಪಾಸಿನಲ್ಲಿ ಇರಲಿದೆಯಂತೆ. ಇದು ಇತ್ತೀಚೆಗಷ್ಟೆ ಬಿಡುಗಡೆ ಆದ ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಗೆ ಕಠಿಣ ಪೈಪೋಟಿ ನೀಡಲಿದೆ.

Vinay Bhat
|

Updated on: Oct 19, 2023 | 6:55 AM

Share
ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್​ಪ್ಲಸ್​ ಓಪನ್ ಇಂದು ಬಿಡುಗಡೆ ಆಗಲಿದೆ. ಈ ಸ್ಮಾರ್ಟ್​ಫೋನ್ ಅಕ್ಟೋಬರ್ 19 ಇಂದು ಸಂಜೆ 7.30PM IST ಕ್ಕೆ ಮುಂಬೈನಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ, ಒನ್​ಪ್ಲಸ್ ಕಂಪನಿ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳ ಜಗತ್ತಿಗೆ ಚೊಚ್ಚಲ ಪ್ರವೇಶ ಮಾಡಲಿದೆ.

1 / 6
ಒನ್​ಪ್ಲಸ್ ಒಪನ್ ಬೆಲೆಯ ಬಗ್ಗೆ ಮಾಹಿತಿಯನ್ನು ಸೋರಿಕೆ ಆಗುದೆ. ಟಿಪ್‌ಸ್ಟರ್ ಪ್ರಕಾರ, ಒನ್​ಪ್ಲಸ್​ ಓಪನ್ ಬೆಲೆ 1.2 ಲಕ್ಷ ಆಸುಪಾಸಿನಲ್ಲಿ ಇರಲಿದೆಯಂತೆ. ಇದು ಇತ್ತೀಚೆಗಷ್ಟೆ ಬಿಡುಗಡೆ ಆದ ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಗೆ ಕಠಿಣ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಗ್ಯಾಲಕ್ಸಿ Z Fold 5 ಬೆಲೆ 1,54,999 ರೂ. ಆಗಿದೆ.

2 / 6
ಸದ್ಯ ಮಾರುಕಟ್ಟೆಯಲ್ಲಿರುವ ಒನ್​ಪ್ಲಸ್​ ಕಂಪನಿಯ ಅತ್ಯಂತ ದುಬಾರಿ ಫೋನ್ ಎಂದರೆ ಅದು ಒನ್​ಪ್ಲಸ್ 10 ಪ್ರೊ. ಇದರ ಬೆಲೆ 71,999 ರೂ. ಆಗಿದೆ. ಅಂತೆಯೆ ಒನ್​ಪ್ಲಸ್​ 9 ಪ್ರೊ 256GB ಸ್ಟೋರೇಜ್​ಗೆ 69,999 ರೂ. ಇದೆ. ಆದರೀಗ ಒನ್​ಪ್ಲಸ್ ಒಪನ್ ಬೆಲೆ ಲಕ್ಷದಲ್ಲಿದೆ.

3 / 6
ಒನ್​ಪ್ಲಸ್​ ಓಪನ್ ಫೀಚರ್ಸ್ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದರಲ್ಲಿ ಸ್ನಾಪ್​ಡ್ರಾಗನ್ 8+ Gen 2 SoC, 2K 120Hz AMOLED (LTPO) ಡಿಸ್ ಪ್ಲೇ ಮತ್ತು 100W SuperVOOC ಚಾರ್ಜಿಂಗ್​ನೊಂದಿಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು. ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇರುವ ಸಾಧ್ಯತೆ ಇದೆ.

4 / 6
ಹಾಗೆಯೆ ಒನ್​ಪ್ಲಸ್ ಓಪನ್‌ನ ಒಳಗಿನ ಡಿಸ್ ಪ್ಲೇ 7.82-ಇಂಚಿನ OLED ಆಗಿರಲಿದೆ ಎಂಬ ಮಾತಿದೆ. ಇದು 120Hz ರಿಫ್ರೆಶ್ ದರ ಮತ್ತು 2,268 x 2,440 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಕೂಡಿದೆ. ಆದರೆ ಹೊರಗಿನ ಡಿಸ್ ಪ್ಲೇ 6.31 ಅನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 1,116 x 2,484 ಪಿಕ್ಸೆಲ್‌ಗಳ ರೆಸಲ್ಯೂಶನ್​ನಿಂದ ಕೂಡಿದೆ.

5 / 6
ಈ ಫೋನಿನ ಹಿಂಭಾಗವು ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಮೂರು ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ (IMX 890) ಇರಲಿದೆ. ಜೊತೆಗೆ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿರಬಹುದು. ಡಿಸ್ ಪ್ಲೇಯ ಹೋಲ್-ಪಂಚ್ ಕಟೌಟ್ ಒಳಗೆ 32-ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿರಬಹುದು.

6 / 6
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ

RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ