ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೋನ್ ಬಿಡುಗಡೆ: ಬೆಲೆ ಕೇವಲ 14,999 ರೂ.

Samsung Galaxy A05s Launched in India: ಸ್ಯಾಮ್‌ಸಂಗ್ ಇದೀಗ ದೇಶದಲ್ಲಿ ಗ್ಯಾಲಕ್ಸಿ A05s ಫೋನನ್ನು ಅನಾವರಣ ಮಾಡಿದೆ. ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 6GB RAM + 128GB ಸ್ಟೋರೇಜ್ ಕಾನ್ಫಿಗರೇಶನ್​ಗೆ 14,999 ರೂ. ನಿಗದಿ ಮಾಡಲಾಗಿದೆ.

ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೋನ್ ಬಿಡುಗಡೆ: ಬೆಲೆ ಕೇವಲ 14,999 ರೂ.
Samsung Galaxy A05s
Follow us
|

Updated on:Oct 19, 2023 | 12:56 PM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್​ನೊಂದಿಗೆ ಭಾರತಕ್ಕೆ ಲಗ್ಗೆಯಿಟ್ಟಿದೆ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುವ ಸ್ಯಾಮ್‌ಸಂಗ್ ಇದೀಗ ದೇಶದಲ್ಲಿ ಗ್ಯಾಲಕ್ಸಿ A05s ಫೋನನ್ನು ತನ್ನ A-ಸರಣಿಯ ಅಡಿಯಲ್ಲಿ ಅನಾವರಣ ಮಾಡಿದೆ. ಕಡಿಮೆ ಬೆಲೆ ಆಗಿದ್ದರೂ ಈ ಫೋನ್​ನಲ್ಲಿ ಬಲಿಷ್ಠವಾದ ಕ್ವಾಲ್ಕಂ ಸ್ನಾಪ್​ಡ್ರಾಗನ್ ಪ್ರೊಸೆಸರ್ ಇದೆ. 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ಕೂಡ ದೊಡ್ಡದಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಬೆಲೆ, ಲಭ್ಯತೆ:

ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 6GB RAM + 128GB ಸ್ಟೋರೇಜ್ ಕಾನ್ಫಿಗರೇಶನ್​ಗೆ 14,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಕಪ್ಪು, ತಿಳಿ ಹಸಿರು ಮತ್ತು ತಿಳಿ ನೇರಳೆ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಲ್ಲಿನ ಪಟ್ಟಿಯ ಪ್ರಕಾರ, SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಈ ಫೋನಿನಗೆ 1,000 ತ್ವರಿತ ರಿಯಾಯಿತಿ ಇದೆ.

iPhone 15 Discounts: ಕೊನೆಗೂ ಹೊಸ ಐಫೋನ್ 15 ಫೋನಿಗೆ ಬಂತು ಡಿಸ್ಕೌಂಟ್: ಆ್ಯಪಲ್​ನಿಂದ ದೀಪಾವಳಿ ಸೇಲ್ ಘೋಷಣೆ

ಇದನ್ನೂ ಓದಿ
Image
ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ: ಹಾನರ್​ನಿಂದ ಬಂತು ಅದ್ಭುತ ಫೋನ್
Image
ಇಂದು ಒನ್​ಪ್ಲಸ್​ನ ಮೊಟ್ಟ ಮೊದಲ ಮಡಚುವ ಫೋನ್ ರಿಲೀಸ್: ಬೆಲೆ ಎಷ್ಟು ಗೊತ್ತೇ?
Image
ಮಾಲ್ವೇರ್ ದಾಳಿಯಿಂದ ಡಿಜಿಟಲ್ ಸಾಧನಗಳ ರಕ್ಷಣೆಗೆ ಸಿಎಸ್​ಕೆ ಸ್ಥಾಪನೆ
Image
ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಹೊಸ ಫೋನ್: ಯಾವುದು?

ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೋ) ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೋನ್ ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ರನ್ ಆಗುತ್ತದೆ. 6.7-ಇಂಚಿನ ಪೂರ್ಣ-HD+ (1,080×2,4000 ಪಿಕ್ಸೆಲ್‌ಗಳು) PLS LCD ಡಿಸ್​ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದೆ ಮತ್ತು 6GB RAM ಅನ್ನು ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು f/1.8 ದ್ಯುತಿರಂಧ್ರದೊಂದಿಗೆ ನೀಡಲಾಗಿದೆ. 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು f/2.4 ದ್ಯುತಿರಂಧ್ರದೊಂದಿಗೆ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ f/2.4 ಅಪರ್ಚರ್‌ನಲ್ಲಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ f/2.0 ದ್ಯುತಿರಂಧ್ರದೊಂದಿಗೆ 13-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್​ಫೋನ್ 25W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.1, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹ್ಯಾಂಡ್ಸೆಟ್ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಹೊಂದಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Thu, 19 October 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ