iPhone 15 Discounts: ಕೊನೆಗೂ ಹೊಸ ಐಫೋನ್ 15 ಫೋನಿಗೆ ಬಂತು ಡಿಸ್ಕೌಂಟ್: ಆ್ಯಪಲ್​ನಿಂದ ದೀಪಾವಳಿ ಸೇಲ್ ಘೋಷಣೆ

Apple announces Diwali sale: ಆ್ಯಪಲ್ ಕಂಪನಿ ದೀಪಾವಳಿ ಮಾರಾಟದ ಕೊಡುಗೆಗಳನ್ನು ಘೋಷಿಸಿದೆ. ಸ್ಮಾರ್ಟ್​ಫೋನ್ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಐಫೋನ್ 15 ಸರಣಿಗೆ ಕೂಡ ಡಿಸ್ಕೌಂಟ್ ಘೋಷಿಸಲಾಗಿದೆ. ಈ ದೀಪಾವಳಿ ಸೇಲ್​ನಲ್ಲಿ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್​ಗೆ ರೂ. 6,000 ವರೆಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಕೊಡುಗೆ ಲಭ್ಯವಿದೆ.

iPhone 15 Discounts: ಕೊನೆಗೂ ಹೊಸ ಐಫೋನ್ 15 ಫೋನಿಗೆ ಬಂತು ಡಿಸ್ಕೌಂಟ್: ಆ್ಯಪಲ್​ನಿಂದ ದೀಪಾವಳಿ ಸೇಲ್ ಘೋಷಣೆ
Apple Diwali Sale 2023
Follow us
Vinay Bhat
|

Updated on: Oct 17, 2023 | 2:45 PM

ಪ್ರಸಿದ್ಧ ಆ್ಯಪಲ್ ಕಂಪನಿ ದೀಪಾವಳಿ ಮಾರಾಟದ (Apple Diwali Sale) ಕೊಡುಗೆಗಳನ್ನು ಘೋಷಿಸಿದೆ. ಈ ಸೇಲ್​ನಲ್ಲಿ ಹೊಚ್ಚ ಹೊಸ ಐಫೋನ್ 15 ಸರಣಿ, ಮ್ಯಾಕ್‌ಬುಕ್ ಏರ್, ಐಪ್ಯಾಡ್‌ಗಳು ಮತ್ತು ಇತರ ಸಾಧನಗಳಲ್ಲಿ ದೊಡ್ಡ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಕಂಪನಿಯು ತನ್ನ ಆ್ಯಪಲ್ ಸ್ಟೋರ್‌ನಲ್ಲಿ ಎಲ್ಲಾ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಆನ್‌ಲೈನ್ ಸ್ಟೋರ್ ಜೊತೆಗೆ ದೀಪಾವಳಿ ಮಾರಾಟದ ಈವೆಂಟ್ ಈಗಾಗಲೇ ಆ್ಯಪಲ್ BKC ಮತ್ತು ಆ್ಯಪಲ್ Saket ರಿಟೇಲ್ ಸ್ಟೋರ್‌ಗಳಲ್ಲಿ ಲೈವ್ ಆಗಿದೆ. ಆ್ಯಪಲ್ ಉತ್ಪನ್ನಗಳ ಮೇಲೆ ರೂ. 10,000 ವರೆಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಕೊಡುಗೆ ಕೂಡ ಇದೆ.

ಸ್ಮಾರ್ಟ್​ಫೋನ್ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಐಫೋನ್ 15 ಸರಣಿಗೆ ಕೂಡ ಡಿಸ್ಕೌಂಟ್ ಘೋಷಿಸಲಾಗಿದೆ. ಈ ದೀಪಾವಳಿ ಸೇಲ್​ನಲ್ಲಿ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್​ಗೆ ರೂ. 6,000 ವರೆಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಕೊಡುಗೆ ಲಭ್ಯವಿದೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಮೇಲೆ ರೂ. 5,000 ಕ್ಯಾಶ್‌ಬ್ಯಾಕ್ ಕೊಡುಗೆಯೊಂದಿಗೆ ಮಾರಾಟವಾಗುತ್ತಿದೆ. ಅದೇ ರೀತಿ, ಆ್ಯಪಲ್ ತನ್ನ ದೀಪಾವಳಿ ಮಾರಾಟದ ಕೊಡುಗೆಯ ಭಾಗವಾಗಿ ಐಫೋನ್ 14 ಮತ್ತು ಐಫೋನ್ 14 ಪ್ಲಸ್​ನಲ್ಲಿ 4,000 ರೂ. ಗಳ ರಿಯಾಯಿತಿ, ಐಫೋನ್ 13 ನಲ್ಲಿ 3,000 ರೂ. ರಿಯಾಯಿತಿ ಮತ್ತು ಐಫೋನ್ SE ಮೇಲೆ 2,000 ರೂ. ರಿಯಾಯಿತಿ ನೀಡಿದೆ.

ಎರಡೇ ದಿನ ಬಾಕಿ: ಸ್ಯಾಮ್​ಸಂಗ್​ನಿಂದ ಬರುತ್ತಿದೆ ಆಕರ್ಷಕ ಬಜೆಟ್ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ಭಾರತದದಲ್ಲಿ ಸದ್ಯದಲ್ಲೇ ದುಬಾರಿಯಾಗಲಿದೆ ಇಂಟರ್ನೆಟ್?: ಕಾರಣ ಇಲ್ಲಿದೆ
Image
ವಿವೋ ಪ್ರಿಯರಿಗೆ ಭರ್ಜರಿ ಸುದ್ದಿ: ಇಂದಿನಿಂದ ವಿವೋ V29 ಫೋನ್ ಮಾರಾಟ ಆರಂಭ
Image
ತಯಾರಾಗಿ: ಧೂಳೆಬ್ಬಿಸಲು ಬರುತ್ತಿದೆ ವಿವೋ ಕಂಪನಿಯ Y200 ಸ್ಮಾರ್ಟ್​ಫೋನ್
Image
ಸ್ಯಾಮ್​ಸಂಗ್​ನಿಂದ ವಿಭಿನ್ನ ಪ್ರಯತ್ನ: ಬರುತ್ತದೆ 200MP ಕ್ಯಾಮೆರಾದ ಫೋನ್

ಐಫೋನ್ 15 ಆರಂಭಿಕ ಬೆಲೆ 79,900 ರೂ. ಗಳೊಂದಿಗೆ ಶುರುವಾಗುತ್ತದೆ. ಪ್ಲಸ್ ಮಾಡೆಲ್ ಅನ್ನು 89,900 ರೂ. ಗಳಿಗೆ ಬಿಡುಗಡೆ ಮಾಡಲಾಗಿತ್ತು. ಐಫೋನ್ 15 ಪ್ರೊ ಬೆಲೆ 1,34,900 ರೂ, ಮತ್ತು ಆ್ಯಪಲ್​ನ ಅತ್ಯಂತ ಪ್ರೀಮಿಯಂ ಐಫೋನ್ ಆಗಿರುವ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ 1,59,900 ರೂ. ಆಗಿದೆ. ಐಫೋನ್ 13 ಬೆಲೆ ಈಗ 59,900 ರೂ. ಇದೆ.

ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮ್ಯಾಕ್‌ಬುಕ್ ಏರ್ ಎಂ2 ರೂ. 10,000 ಕ್ಯಾಶ್‌ಬ್ಯಾಕ್ ಕೊಡುಗೆಯೊಂದಿಗೆ ಲಭ್ಯವಿದೆ. ಆದರೆ, ಆಫರ್ 13-ಇಂಚಿನ ಮತ್ತು 15-ಇಂಚಿನ ಮಾದರಿಗಳಲ್ಲಿ ಮಾತ್ರ ಅನ್ವಯಿಸುತ್ತದೆ. 13-ಇಂಚಿನ ಮ್ಯಾಕ್‌ಬುಕ್ ಏರ್ M2 ಮಾದರಿಯನ್ನು ಭಾರತದಲ್ಲಿ ರೂ. 1,14,900 ಆರಂಭಿಕ ಬೆಲೆಯೊಂದಿಗೆ ಬಿಡಲಾಗಿತ್ತು.

ಮ್ಯಾಕ್‌ಬುಕ್ ಏರ್ ಎಂ1 ಅನ್ನು ಖರೀದಿಸಲು ಯೋಚಿಸುತ್ತಿರುವ ಅಧಿಕೃತ ಆ್ಯಪಲ್ ಸ್ಟೋರ್ ಪುಟದ ಪ್ರಕಾರ ರೂ. 8,000 ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಮಾದರಿಯ ಮೂಲ ಬೆಲೆ 99,900 ರೂ. ಆದಾಗ್ಯೂ, ಅಮೆಜಾನ್ ಈ ಮ್ಯಾಕ್‌ಬುಕ್ ಅನ್ನು ರೂ. 69,990 ಕ್ಕೆ ಮಾರಾಟ ಮಾಡುತ್ತಿದೆ. ಹೆಚ್ಚುವರಿಯಾಗಿ, 24-ಇಂಚಿನ ಐಮ್ಯಾನ್ ಮತ್ತು ಮ್ಯಾಕ್ ಮಿನಿ ರೂ. 5,000 ಕ್ಯಾಶ್‌ಬ್ಯಾಕ್ ಕೊಡುಗೆಯೊಂದಿಗೆ ಲಭ್ಯವಿದೆ.

ಆ್ಯಪಲ್ ತನ್ನ ಎಲ್ಲಾ ಉತ್ಪನ್ನಗಳ ವಿಭಾಗಗಳಲ್ಲಿ ರಿಯಾಯಿತಿಗಳನ್ನು ನೀಡುತ್ತಿರುವುದರಿಂದ, ಗ್ರಾಹಕರು ಟ್ಯಾಬ್ಲೆಟ್‌ಗಳಲ್ಲಿ ಸಹ ಕೊಡುಗೆಗಳನ್ನು ಪಡೆಯಬಹುದು. 11-ಇಂಚಿನ/12.9-ಇಂಚಿನ ಐಪ್ಯಾಡ್ ಪ್ರೊ ಮಾದರಿಗಳು ಮತ್ತು ಐಪ್ಯಾಡ್ ಏರ್ ಮೇಲೆ 5,000 ರೂ. 10 ನೇ ತಲೆಮಾರಿನ ಮತ್ತು 9 ನೇ ತಲೆಮಾರಿನ ಐಪ್ಯಾಡ್ ಕ್ರಮವಾಗಿ ರೂ. 4,000 ಮತ್ತು ರೂ. 3,000 ಕ್ಯಾಶ್‌ಬ್ಯಾಕ್ ಕೊಡುಗೆಗಳೊಂದಿಗೆ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ