AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಯಾರಾಗಿ: ಧೂಳೆಬ್ಬಿಸಲು ಬರುತ್ತಿದೆ ವಿವೋ ಕಂಪನಿಯ Y200 ಸ್ಮಾರ್ಟ್​ಫೋನ್

Vivo Y200 launch date revealed: ಭಾರತೀಯ ಮಾರುಕಟ್ಟೆಯಲ್ಲಿ ವಿವೋ Y200 ಫೋನ್ ಇದೇ ಅಕ್ಟೋಬರ್ 23 ರಂದು ಅನಾವರಣಗೊಳ್ಳಲಿದೆ. ಈ ಫೋನ್ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು ಗೋಲ್ಡ್ ಕಲರ್ ಆಯ್ಕೆಯನ್ನು ಹೊಂದಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಸ್ಮಾರ್ಟ್​ಫೋನ್ ಫೀಚರ್ಸ್ ಕುರಿತ ಕೆಲ ಮಾಹಿತಿ ಕೂಡ ಸೋರಿಕೆ ಆಗಿದೆ.

ತಯಾರಾಗಿ: ಧೂಳೆಬ್ಬಿಸಲು ಬರುತ್ತಿದೆ ವಿವೋ ಕಂಪನಿಯ Y200 ಸ್ಮಾರ್ಟ್​ಫೋನ್
Vivo Y200
Vinay Bhat
|

Updated on: Oct 16, 2023 | 3:12 PM

Share

ಕಳೆದ ಕೆಲವು ವಾರಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿರುವ ಫೋನ್ ಎಂದರೆ ಅದು ವಿವೋ ಕಂಪನಿಯ ವಿವೋ Y200 (Vivo Y200). ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸ್ಮಾರ್ಟ್​ಫೋನ್​ನ ಬಿಡುಗಡೆ ದಿನಾಂಕವನ್ನು ಇದೀಗ ವಿವೋ ಕಂಪನಿ ಬಹಿರಂಗ ಪಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿವೋ Y200 ಫೋನ್ ಇದೇ ಅಕ್ಟೋಬರ್ 23 ರಂದು ಅನಾವರಣಗೊಳ್ಳಲಿದೆ. ಈ ಫೋನ್ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು ಗೋಲ್ಡ್ ಕಲರ್ ಆಯ್ಕೆಯನ್ನು ಹೊಂದಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಸ್ಮಾರ್ಟ್​ಫೋನ್ ಫೀಚರ್ಸ್ ಕುರಿತ ಕೆಲ ಮಾಹಿತಿ ಕೂಡ ಸೋರಿಕೆ ಆಗಿದೆ.

ವಿವೋ Y200 ಭಾರತದ ಬಿಡುಗಡೆ ದಿನಾಂಕ ವಿವರ

ವಿವೋ Y200 ಭಾರತದಲ್ಲಿ ಅಕ್ಟೋಬರ್ 23 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಇದು ಅಮೆಜಾನ್ ಅಥವಾ ಫ್ಲಿಪ್​ಕಾರ್ಟ್​ನಲ್ಲಿ ಸೇಲ್ ಕಾಣುತ್ತದೆ. ಈ ಫೋನ್ ಡೆಸರ್ಟ್ ಗೋಲ್ಡ್ ಮತ್ತು ಜಂಗಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸಂವೇದಕಗಳನ್ನು ಹೊಂದಿರುತ್ತದೆ. ಇದರಲ್ಲಿರುವ ಕ್ಯಾಮೆರಾ ಕಡಿಮೆ-ಬೆಳಕಿನಲ್ಲಿ ಕೂಡ ಅತ್ಯುತ್ತಮ ಫೋಟೋ ಸೆರೆ ಹಿಡಿಯುತ್ತದೆ. ಇದಕ್ಕಾಗಿ ಸ್ಮಾರ್ಟ್ ಔರಾ ಲೈಟ್ ಅನ್ನು ಅಳವಡಿಸಲಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇಂದು ಕೊನೇ ದಿನ: ಈ ಆಫರ್ ಮಿಸ್ ಮಾಡ್ಬೇಡಿ

ಇದನ್ನೂ ಓದಿ
Image
ಸ್ಯಾಮ್​ಸಂಗ್​ನಿಂದ ವಿಭಿನ್ನ ಪ್ರಯತ್ನ: ಬರುತ್ತದೆ 200MP ಕ್ಯಾಮೆರಾದ ಫೋನ್
Image
ಎರಡೇ ದಿನ ಬಾಕಿ: ಸ್ಯಾಮ್​ಸಂಗ್​ನಿಂದ ಬರುತ್ತಿದೆ ಆಕರ್ಷಕ ಬಜೆಟ್ ​ಫೋನ್
Image
I'm not a robot: ವೆಬ್‌ಸೈಟ್‌ಗಳನ್ನು ತೆರೆದಾಗ ಹೀಗೆ ಕಾಣುವುದು ಏಕೆ?
Image
ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್

ವಿವೋ Y200 5G ನಿರೀಕ್ಷಿತ ಫೀಚರ್ಸ್:

ಡಿಸ್‌ಪ್ಲೇ: ವಿವೋ Y200 ಸ್ಮಾರ್ಟ್​ಫೋನ್ 6.67-ಇಂಚಿನ FHD+ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ಪ್ರೊಸೆಸರ್: ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 1 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.

RAM ಮತ್ತು ಸಂಗ್ರಹಣೆ: ಈ ಚಿಪ್‌ಸೆಟ್ ಅನ್ನು 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಬಹುದು. ಜೊತೆಗೆ ಮತ್ತಷ್ಟು ವಿಸ್ತರಿಸಬಹುದು ಆಯ್ಕೆ ಇರುತ್ತದೆ.

OS: ಈ ಫೋನ್ ಆಂಡ್ರಾಯ್ಡ್ 13-ಆಧಾರಿತ FunTouchOS 13 ಮೂಲಕ ರನ್ ಆಗುತ್ತದೆ.

ಕ್ಯಾಮೆರಾಗಳು: ವಿವೋ Y200 OIS ಜೊತೆಗೆ 64MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಆಯ್ಕೆ ಇರಲಿದೆ.

ಬ್ಯಾಟರಿ: ವಿವೋ Y200 ಸ್ಮಾರ್ಟ್​ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,800mAh ಬ್ಯಾಟರಿಯನ್ನು ಹೊಂದಿರಬಹುದು. ಈ ಫೋಣ್ 5ಜಿ ಸಪೋರ್ಟ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ