I’m not a robot: ನೀವು ವೆಬ್‌ಸೈಟ್‌ಗಳನ್ನು ತೆರೆದಾಗ ಹೀಗೆ ಕಾಣುವುದು ಏಕೆ ಗೊತ್ತಾ?: ನಿಜವಾದ ಕಾರಣ ಇಲ್ಲಿದೆ

Why do websites say I am not a robot?: ಹೆಚ್ಚಿನ ವೆಬ್‌ಸೈಟ್ ತೆರೆಯುವ ಸಮಯದಲ್ಲಿ 'I'm not a robot' ಎಂಬ ಕ್ಯಾಪ್ಚಾ ಕಾಣಿಸಿಕೊಳ್ಳುತ್ತದೆ. ಹೀಗೆ ಬಂದಾಗ, ನೀವು ಚಿತ್ರಗಳ ಮೇಲೆ ಸರಿಯಾಗಿ ಕ್ಲಿಕ್ ಮಾಡಿದರೆ, ತಕ್ಷಣವೇ ವೆಬ್‌ಸೈಟ್ ತೆರೆಯುತ್ತದೆ. ಆದರೆ ವೆಬ್‌ಸೈಟ್ ತೆರೆಯುವಾಗ 'ನಾನು ರೋಬೋಟ್ ಅಲ್ಲ' ಏಕೆ ಕಾಣಿಸಿಕೊಳ್ಳುತ್ತದೆ?. ಇದರ ಹಿಂದಿನ ನಿಜವಾದ ಕಾರಣವೇನು?.

I'm not a robot: ನೀವು ವೆಬ್‌ಸೈಟ್‌ಗಳನ್ನು ತೆರೆದಾಗ ಹೀಗೆ ಕಾಣುವುದು ಏಕೆ ಗೊತ್ತಾ?: ನಿಜವಾದ ಕಾರಣ ಇಲ್ಲಿದೆ
i'm not a robot
Follow us
|

Updated on: Oct 16, 2023 | 12:48 PM

ಪ್ರಸ್ತುತ ಜಗತ್ತಿನಲ್ಲಿ ಅಂತರ್ಜಾಲದ (Internet) ಬಳಕೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಎಲ್ಲರೂ ಇಂಟರ್ನೆಟ್ ಬಳಸುವವರಾಗಿದ್ದಾರೆ. ಅತಿ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ಗಳ ಆಗಮನ ಮತ್ತು ಇಂಟರ್ನೆಟ್ ಶುಲ್ಕದಲ್ಲಿ ಭಾರೀ ಕಡಿತ ಇರುವ ಕಾರಣ ನೆಟ್ ಬಳಕೆ ಹೆಚ್ಚಾಗಿದೆ. ಅಂತರ್ಜಾಲದಲ್ಲಿ ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತಿಳಿಯಬಹುದು. ಈ ಮಧ್ಯೆ ಇಂಟರ್‌ನೆಟ್‌ ಬ್ರೌಸ್‌ ಮಾಡುವಾಗ ‘I’m not a robot’ ಎಂಬ ಕ್ಯಾಪ್ಚಾ ಹೆಚ್ಚಿನವರು ನೋಡಿರುತ್ತೀರಿ. ಇದು ಏಕೆ ಕಾಣುವುದು ಗೊತ್ತೇ?.

ಹೆಚ್ಚಿನ ವೆಬ್‌ಸೈಟ್ ತೆರೆಯುವ ಸಮಯದಲ್ಲಿ ಈ ರೀತಿಯ ಕ್ಯಾಪ್ಚಾ ಕಾಣಿಸಿಕೊಳ್ಳುತ್ತದೆ. ಹೀಗೆ ಬಂದಾಗ, ಅದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಟಿಕ್ ಮಾಡಿದರೆ ಕೆಲವು ಗ್ರಾಫಿಕ್ ಅಂಕಿಗಳನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಕಾರು ಆಟಿಕೆಗಳು, ಸೇತುವೆಗಳು, ಬೈಸಿಕಲ್​ಗಳಂತಹ ಆಟಿಕೆಗಳನ್ನು ಗುರುತಿಸುವ ಪ್ರಶ್ನೆ ಇರುತ್ತದೆ. ನೀವು ಚಿತ್ರಗಳ ಮೇಲೆ ಸರಿಯಾಗಿ ಕ್ಲಿಕ್ ಮಾಡಿದರೆ, ತಕ್ಷಣವೇ ವೆಬ್‌ಸೈಟ್ ತೆರೆಯುತ್ತದೆ. ಆದರೆ ವೆಬ್‌ಸೈಟ್ ತೆರೆಯುವಾಗ ‘ನಾನು ರೋಬೋಟ್ ಅಲ್ಲ’ ಏಕೆ ಕಾಣಿಸಿಕೊಳ್ಳುತ್ತದೆ?. ಇದರ ಹಿಂದಿನ ನಿಜವಾದ ಕಾರಣವೇನು?.

Google ನಲ್ಲಿ ಆ ರೀತಿಯ ವಿಷಯಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಎಚ್ಚರಾ, ನೀವು ಗಂಭೀರ ತೊಂದರೆಗೆ ಸಿಲುಕುತ್ತೀರಿ!

ಇದನ್ನೂ ಓದಿ
Image
ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್
Image
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇಂದು ಕೊನೇ ದಿನ: ಆಫರ್ ಮಿಸ್ ಮಾಡ್ಬೇಡಿ
Image
ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ?
Image
ಮಾರುಕಟ್ಟೆಗೆ ಅಪ್ಪಳಿಸಿತು ಹೊಸ ಮಡಚುವ ಫೋನ್: ಹಾನರ್ ಮ್ಯಾಜಿಕ್ Vs 2 ರಿಲೀಸ್

ಗ್ರಾಹಕರ ಮಾಹಿತಿಯ ಭದ್ರತೆ ಮತ್ತು ವೆಬ್‌ಸೈಟ್‌ಗಳ ರಕ್ಷಣೆಗಾಗಿ ಈ ಕ್ಯಾಪ್ಚಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇವುಗಳನ್ನು 2000ನೇ ಇಸವಿಯಲ್ಲಿ ಗೂಗಲ್ ಪರಿಚಯಿಸಿತು. ಪ್ರಸ್ತುತ ಎಲ್ಲ ವೆಬ್‌ಸೈಟ್‌ಗಳು ಈ ವಿಧಾನವನ್ನು ಅನುಸರಿಸುತ್ತವೆ. ರೋಬೋಟ್‌ಗಳ ಸಹಾಯದಿಂದ ವೆಬ್‌ಸೈಟ್‌ಗಳನ್ನು ತೆರೆಯುವುದನ್ನು ತಡೆಯಲು ಈ ನಿಯಮವನ್ನು ಅಳವಡಿಸಲಾಗಿದೆ.

ವೆಬ್‌ಸೈಟ್‌ಗಳನ್ನು ಏಕಕಾಲದಲ್ಲಿ ತೆರೆದಾಗ, ವೆಬ್‌ಸೈಟ್‌ಗಳ ಮೇಲಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕ್ರ್ಯಾಶ್ ಆಗುವ ಸಾಧ್ಯತೆ ಇರುತ್ತದೆ. ಸರ್ವರ್‌ಗಳು ಡೌನ್ ಆಗುತ್ತವೆ ಮತ್ತು ವೈರಸ್ ದಾಳಿಗಳು ಕೂಡ ನಡೆಯಬಹುದು. ಇದನ್ನು ತಡೆಯಲು ಗೂಗಲ್ ರೂಪಿಸಿಕೊಂಡ ನಿಯಮವಿದು.

ಕ್ಯಾಪ್ಚಾ ರೋಬೋಟ್‌ಗಳು ವೆಬ್​ಸೈಟ್​ಗೆ ವೈರಸ್​ನಿಂದ ಅಥವಾ ಇತರೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡುತ್ತದೆ. ಈ ವೆಬ್​ಸೈಟ್ ಅನ್ನು ತೆರೆಯುತ್ತಿರುವುದು ಮಾನವರೊ ಅಥವಾ ಇಲ್ಲವೇ? ಎಂಬುದನ್ನು ‘ನಾನು ರೋಬೋಟ್ ಅಲ್ಲ’ ಕ್ಯಾಪ್ಚಾ ಕಂಡುಹಿಡಿಯುತ್ತದೆ.

ಇಂಟರ್ನೆಟ್ ಬಳಕೆದಾರರು ಬಳಸುವ ಕಂಪ್ಯೂಟರ್ ಅಥವಾ ಸ್ಮಾರ್ಟ್​ಫೋನ್​ಗಳಲ್ಲಿ ಸಂಗ್ರಹಿಸಲಾದ ಕುಕೀಗಳನ್ನು ಹೊರತುಪಡಿಸಿ, ಈ ಕ್ಯಾಪ್ಚಾ ಎಲ್ಲ ಸರ್ಚ್ ಹಿಸ್ಟರಿಯನ್ನು ಟ್ರ್ಯಾಕ್ ಮಾಡುತ್ತದೆ. ಇದೆಲ್ಲವನ್ನೂ ಟ್ರ್ಯಾಕ್ ಮಾಡುವ ಮೂಲಕ, ವೆಬ್​ಸೈಟ್ ಅನ್ನು ಒಬ್ಬ ವ್ಯಕ್ತಿ ಉಪಯೋಗಿಸುತ್ತಿದ್ದಾನೊ ಅಥವಾ ರೋಬೋಟ್ ತೆರೆಯುತ್ತಿದೆಯೊ ಎಂದು ಕಂಡುಹಿಡಿಯುತ್ತದೆ. ಇದು ಸೈಬರ್ ದಾಳಿ ಮತ್ತು ಹಾನಿಕಾರಕ ಮಾಲ್‌ವೇರ್‌ಗಳಿಂದ ರಕ್ಷಣೆ ನೀಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ