Tech Tips: ಸಿಮ್ ಕಾರ್ಡ್ ಅನ್ನು ಜಸ್ಟ್ ಹೀಗೆ ಮಾಡಿ: ನಿಮ್ಮ ಇಂಟರ್ನೆಟ್ ಹೈ-ಸ್ಪೀಡ್ ಆಗುತ್ತದೆ

Internet Speed: ಈಗ ದೇಶದಲ್ಲಿ 3G, 4G ಕಳಿದು ಅತಿ ವೇಗದ ಇಂಟರ್ನೆಟ್ ನೀಡುವ 5G ಕೂಡ ಆರಂಭವಾಗಿದೆ. ಆದರೆ, ಏನೇ ಬಂದರೂ ಕೆಲವರಿಗೆ ಇಂಟರ್ನೆಟ್ ಸಮಸ್ಯೆ ಮಾತ್ರ ಬೆನ್ನು ಬಿಡದೆ ಕಾಡುತ್ತಿರುತ್ತದೆ. ಇದಕ್ಕೆ ಅನೇಕ ಥರ್ಡ್ ಪಾರ್ಟಿ ಆ್ಯಪ್ ಬಳಸಿಕೊಂಡರೂ ಪ್ರಯೋಜನ ಆಗುವುದಿಲ್ಲ.

Tech Tips: ಸಿಮ್ ಕಾರ್ಡ್ ಅನ್ನು ಜಸ್ಟ್ ಹೀಗೆ ಮಾಡಿ: ನಿಮ್ಮ ಇಂಟರ್ನೆಟ್ ಹೈ-ಸ್ಪೀಡ್ ಆಗುತ್ತದೆ
Smartphone Sim Card
Follow us
Vinay Bhat
|

Updated on: Jun 17, 2023 | 6:05 PM

ಇಂದಿನ ವೇಗದ ಜಗತ್ತಿನಲ್ಲಿ ಇಂಟರ್ನೆಟ್ ಬಹಳ ಮುಖ್ಯ. ಹೆಚ್ಚಿನ ಕೆಲಸಗಳು ಆನ್​ಲೈನ್ ಮೂಲಕವೇ ನಡೆಯುವುದರಿಂದ ಇಂಟರ್ನೆಟ್ ಅತ್ಯಗತ್ಯ. ಈಗ ದೇಶದಲ್ಲಿ 3G, 4G ಕಳಿದು ಅತಿ ವೇಗದ ಇಂಟರ್ನೆಟ್ ನೀಡುವ 5G ಕೂಡ ಆರಂಭವಾಗಿದೆ. ಆದರೆ, ಏನೇ ಬಂದರೂ ಕೆಲವರಿಗೆ ಇಂಟರ್ನೆಟ್ ಸಮಸ್ಯೆ ಮಾತ್ರ ಬೆನ್ನು ಬಿಡದೆ ಕಾಡುತ್ತಿರುತ್ತದೆ. ಇದಕ್ಕೆ ಅನೇಕ ಥರ್ಡ್ ಪಾರ್ಟಿ ಆ್ಯಪ್ ಬಳಸಿಕೊಂಡರೂ ಪ್ರಯೋಜನ ಆಗುವುದಿಲ್ಲ. ಹೀಗೆ ಇಂಟರ್ನೆಟ್ ವೇಗ ಕಡಿಮೆಯಾದಾಗ ತಲೆ ಕಡೆಸಿಕೊಳ್ಳುವವರೇ ಜಾಸ್ತಿ. ಆದರೆ ಸಿಮ್ ಕಾರ್ಡ್​ನ (Sim Card) ಸಹಾಯದಿಂದ ತಮ್ಮ ಫೋನಿನ ಇಂಟರ್ನೆಟ್ ವೇಗವನ್ನು (Internet Speed) ಹೆಚ್ಚಿಸಬಹುದಾದ ಆಯ್ಕೆಯೊಂದಿದೆ. ನೀವು ಸರಿಯಾದ ಸಿಮ್ ಬಳಕೆಯ ವಿಧಾನವನ್ನು ಅಳವಡಿಸಿಕೊಂಡರೆ ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೇವಲ ಇಂಟರ್ನೆಟ್ ಸಮಸ್ಯೆ ಮಾತ್ರವಲ್ಲ ನೆಟ್​ವರ್ಕ್​ ತೊಂದರೆ ಅನುಭವಿಸುತ್ತಿದ್ದರೂ ಈ ಟ್ರಿಕ್ ಸಹಾಯ ಮಾಡಲಿದೆ. ಇದಕ್ಕೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕಾಗುತ್ತದೆ. ಸ್ಮಾರ್ಟ್​ಫೋನ್ ಉಪಯೋಗಿಸುವ ಎಲ್ಲರಿಗೂ ಮೊದಲನೇ ಸಿಮ್ ಮತ್ತು ಎರಡನೇ ಸಿಮ್ ಎಂಬ ಒಂದು ಟ್ರೇ ಇರುವುದು ನೋಡಿರುತ್ತೀರಿ. ಈಗ ನೀವು ಮೊದಲನೇ ಸಿಮ್ ಟ್ರೇ ನಲ್ಲಿ ಯಾವ ಸಿಮ್ ಕಾರ್ಡ್ ಇದೆ ಮತ್ತು ಎರಡನೇ ಟ್ರೇನಲ್ಲಿ ಯಾವ ಸಿಮ್ ಕಾರ್ಡ್ ಇದೆ ಎಂಬುದನ್ನು ಪರಿಶೀಲಿಸಬೇಕು.

ನೀವು ಮೊದಲನೇ ಸಿಮ್ ಟ್ರೇನಲ್ಲಿ ಇಟ್ಟಿರುವ ಸಿಮ್ ಕೇವಲ ಕಾಲ್​ಗಳಿಗೆ ಮಾತ್ರ ಮತ್ತು ಎರಡನೇ ಸಿಮ್ ಟ್ರೇನಲ್ಲಿ ಇರುವ ಸಿಮ್ ಇಂಟರ್ನೆಟ್​ಗಾಗಿ ಮಾತ್ರ ಎಂದು ಉಪಯೋಗಿಸುತ್ತಿದ್ದರೆ ಅದು ದೊಡ್ಡ ತಪ್ಪು. ನಿಮ್ಮ ಸ್ಮಾರ್ಟ್​ಫೋನ್​ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಬಯಸಿದರೆ ಮೊದಲಿಗೆ ನೀವು ನಿಮ್ಮ ಸಿಮ್ ಕಾರ್ಡ್​ಗಳನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಹೇಗೆಂದರೆ, ಇಂಟರ್ನೆಟ್ ಬಳಕೆಯ ಸಿಮ್ ಕಾರ್ಡ್ ಅನ್ನು ಮೊದಲನೇ ಸಿಮ್ ಟ್ರೇನಲ್ಲಿ ಮತ್ತು ಇನ್ನೊಂದು ಸಿಮ್ ಕಾರ್ಡ್ ಎರಡನೇ ಟ್ರೇನಲ್ಲಿ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.

ಇದನ್ನೂ ಓದಿ
Image
Realme 11 Pro+ 5G: 60,000 ಮೊಬೈಲ್​ಗಳು ಸೇಲ್: ಮೊದಲ ದಿನವೇ ದಾಖಲೆ ಬರೆದ 200MP ಕ್ಯಾಮೆರಾದ ರಿಯಲ್ ಮಿ 11 ಪ್ರೊ+ ಸ್ಮಾರ್ಟ್​ಫೋನ್
Image
Best Smartphones: ಮಾರುಕಟ್ಟೆಯಲ್ಲಿ 10,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
Galaxy M34 5G: ಬಿಡುಗಡೆಗೆ ಸಿದ್ದವಾದ ಸ್ಯಾಮ್​ಸಂಗ್​ನ 6,000mAh ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್
Image
Nothing Phone 2: ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಲು ಬರುತ್ತಿದೆ ನಥಿಂಗ್‌ ಫೋನ್‌ (2)

Oppo Reno 9A: ರೆನೋ ಸರಣಿಯಲ್ಲಿ ಬಂತು ಮತ್ತೊಂದು ಸೂಪರ್ ಫೋನ್

ತಜ್ಞರು ಹೇಳುವ ಪ್ರಕಾರ, ಸಿಮ್ ಟ್ರೇ ಒಂದರಲ್ಲಿ ಡೇಟಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕರೆ ಸಿಮ್ ಟ್ರೇ ಒಂದರಲ್ಲಿ ಮತ್ತು ಡೇಟಾ ಸಿಮ್ ಟ್ರೇ ಎರಡರಲ್ಲಿ ಇದ್ದರೆ, ನೀವು ಅದನ್ನು ಡೇಟಾ ಸಿಮ್ ಟ್ರೇ ಒಂದಕ್ಕೆ ಬದಲಾಯಿಸಬೇಕು. ಈ ರೀತಿ ಮಡುವುದರಿಂದ ನಿಮ್ಮ ಫೋನ್​ನಲ್ಲಿ ಇಂಟರ್ನೆಟ್ ವೇಗವು ಅಧಿಕವಾಗುತ್ತದೆ. ಅಂತೆಯೆ ಇಂಟರ್‌ನೆಟ್ ಬಳಸುವ ಸಿಮ್ ನೆಟ್‌ವರ್ಕ್ APN ಅನ್ನು ಬದಲಾಯಿಸಿ ಕೂಡ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಇನ್ನು ಕೆಲ ಸಿಂಪಲ್ ಟ್ರಿಕ್ ಮೂಲಕವೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು. ಇದಕ್ಕಾಗಿ ವಿವಿಧ ಅ್ಯಪ್​ಗಳಲ್ಲಿನ ಸ್ಟೋರೆಜ್​ಗಳನ್ನು (Clear Cache) ತೆಗೆದುಹಾಕಿ, ಆದಷ್ಟು ತಮ್ಮ ಮೊಬೈಲ್ ಫೋನ್​ನಲ್ಲಿ ಸ್ಟೋರೆಜ್ ಖಾಲಿ ಇರುವಂತೆ ನೋಡಿಕೊಳ್ಳಿ. ಆಗ ಮೊಬೈಲ್ ಜೊತೆಗೆ ಇಂಟರ್ನೆಟ್ ಕೂಡ ವೇಗವಾಗುತ್ತದೆ. ಉಪಯೋಗವಿಲ್ಲದ ಆ್ಯಪ್​ಗಳನ್ನು ತೆಗೆದುಹಾಕಿ, ಇದರಿಂದ ನಿಮ್ಮ ಮೊಬೈಲ್​ನಲ್ಲಿ ಸಾಕಷ್ಟು ಸ್ಟೋರೆಜ್ ಲಭ್ಯವಾಗಲಿದೆ. ಮುಖ್ಯವಗಿ ನಿಮ್ಮ ನೆಟ್‌ವರ್ಕ್ ಸಂಪರ್ಕ LTE ನಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್