AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ 15 ಬೇಕಿದ್ದರೆ ಜಿಯೋ, ರಿಲಯನ್ಸ್ ಡಿಜಿಟಲ್​ನಲ್ಲಿ ಖರೀದಿಸಿ: ಇಂತಹ ಆಫರ್ ಎಲ್ಲೂ ಇಲ್ಲ

iPhone 15 offers at Reliance Digital: ರಿಲಯನ್ಸ್ ಡಿಜಿಟಲ್, ಜಿಯೋಮಾರ್ಟ್ ಅಥವಾ ರಿಲಯನ್ಸ್ ರಿಟೇಲ್ ಸ್ಟೋರ್‌ಗಳಿಂದ ಐಫೋನ್ 15 ಅನ್ನು ಖರೀದಿಸಿದಿರೆ ಬಳಕೆದಾರರು ವಿಶೇಷ ಕೊಡುಗೆಯನ್ನು ಪಡೆಯಬಹುದು. ಅರ್ಹ ಐಫೋನ್ 15 ಬಳಕೆದಾರರಿಗೆ ತಿಂಗಳಿಗೆ 399 ರೂ. ಹೊಸ ಪೂರಕ ಯೋಜನೆ ನೀಡಲಾಗಿದ್ದು, ಚಂದಾದಾರರು ಪ್ರತಿದಿನ 3GB ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ.

ಐಫೋನ್ 15 ಬೇಕಿದ್ದರೆ ಜಿಯೋ, ರಿಲಯನ್ಸ್ ಡಿಜಿಟಲ್​ನಲ್ಲಿ ಖರೀದಿಸಿ: ಇಂತಹ ಆಫರ್ ಎಲ್ಲೂ ಇಲ್ಲ
iPhone 15 Jio Offer
Vinay Bhat
|

Updated on: Sep 23, 2023 | 1:20 PM

Share

ಬಹುನಿರೀಕ್ಷಿತ ಆ್ಯಪಲ್ ಐಫೋನ್ 15 ಸರಣಿಯ (iPhone 15 Series) ಸ್ಮಾರ್ಟ್​ಫೋನ್​ಗಳು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಪ್ರಾರಂಭಿಸಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಫೋನುಗಳು ಭರ್ಜರಿ ಸೇಲ್ ಆಗುತ್ತಿದೆ. ಇದರ ನಡುವೆ ರಿಲಯನ್ಸ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಬಂಪರ್ ಆಫರ್ ಘೋಷಿಸಿದೆ. ರಿಲಯನ್ಸ್ ಡಿಜಿಟಲ್, ಜಿಯೋಮಾರ್ಟ್ ಅಥವಾ ರಿಲಯನ್ಸ್ ರಿಟೇಲ್ ಸ್ಟೋರ್‌ಗಳಿಂದ ಐಫೋನ್ 15 ಅನ್ನು ಖರೀದಿಸಿದಿರೆ ಬಳಕೆದಾರರು ವಿಶೇಷ ಕೊಡುಗೆಯನ್ನು ಪಡೆಯಬಹುದು.

ಅರ್ಹ ಐಫೋನ್ 15 ಬಳಕೆದಾರರಿಗೆ ತಿಂಗಳಿಗೆ 399 ರೂ. ಹೊಸ ಪೂರಕ ಯೋಜನೆ ನೀಡಲಾಗುತ್ತಿದ್ದು, ಚಂದಾದಾರರು ಪ್ರತಿದಿನ 3GB ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ಈ ಯೋಜನೆಯು ಮೊದಲ ಆರು ತಿಂಗಳ ಬಳಕೆಗೆ ಮಾತ್ರ ಲಭ್ಯವಿರುತ್ತದೆ, ಇದರ ಒಟ್ಟು ಲಾಭ 2,394 ರೂ.. ಇದಲ್ಲದೆ, ಕನಿಷ್ಠ 149 ರೂ. ಗಳ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿರುವ ಅಥವಾ ಹೊಸ ಬಳಕೆದಾರರಿಗೆ ಕೂಡ ಈ ಆಫರ್ ಅನ್ವಯಿಸುತ್ತದೆ. ರಿಲಯನ್ಸ್ ಡಿಜಿಟಲ್, ಜಿಯೋಮಾರ್ಟ್ ಅಥವಾ ರಿಲಯನ್ಸ್ ರಿಟೇಲ್ ಸ್ಟೋರ್‌ಗಳಿಂದ ಖರೀದಿಸಿದ ಐಫೋನ್ 15 ಫೋನುಗಳಿಗೆ ಮಾತ್ರ ಈ ಆಫರ್ ಲಭ್ಯವಿದೆ.

ಭಾರತದಲ್ಲಿ ವಿವೋ T2 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಏನಿದೆ ನೋಡಿ

ಇದನ್ನೂ ಓದಿ
Image
ನಿಯೋ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಟೆಕ್ ಮಾರುಕಟ್ಟೆ ಅಲ್ಲೋಲ-ಕಲ್ಲೋಲ
Image
ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ
Image
ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತ ಬೆಂಗಳೂರಿಗರು
Image
ಭಾರತದಲ್ಲಿ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಬಿಡುಗಡೆ: ಇದು ಕಡಿಮೆ ಬೆಲೆಯ ಮಡ

ಹೊಸ ಐಫೋನ್ 15 ಗೆ ಜಿಯೋ ಸಿಮ್ ಹಾಕಿದ 72 ಗಂಟೆಗಳ ಒಳಗೆ ಈ ಆಫರ್ ಸಿಗಲಿದ್ದು, ಅರ್ಹ ಗ್ರಾಹಕರಿಗೆ SMS/ಇ-ಮೇಲ್ ಮೂಲಕ ಸೂಚಿಸಲಾಗುತ್ತದೆ. ಜಿಯೋ ತನ್ನ ಈ ಕೊಡುಗೆಯನ್ನು ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನಂತಹ ಇತರ ಮಾದರಿಗಳಿಗೆ ನೀಡಿಲ್ಲ.

ಐಫೋನ್ 15 ಸರಣಿಯ ಬೆಲೆ:

ಐಫೋನ್ 15- 128GB- 79,900 ರೂ., ಐಫೋನ್ 15- 256GB- 89,900 ರೂ., ಐಫೋನ್ 15- 512GB- 1,09,900 ರೂ., ಐಫೋನ್ 15 ಪ್ಲಸ್- 128GB – 89,900 ರೂ., ಐಫೋನ್ 15 ಪ್ಲಸ್- 256GB – 99,900 ರೂ. ನಿಗದಿ ಮಾಡಲಾಗಿದೆ.

ಇನ್ನು ಐಫೋನ್ 15 ಪ್ರೊ 128GB ಸ್ಟೋರೇಜ್ ಮಾಡೆಲ್‌ಗೆ 1,34,900 ರೂ., 256GB ಗೆ 1,44,900 ರೂ., 512GB ಗೆ 164,900 ರೂ. ಮತ್ತು 1TB ಮಾದರಿಗೆ 1,84,900 ರೂ. ಇದೆ. ಐಫೋನ್ 15 ಪ್ರೊ ಮ್ಯಾಕ್ಸ್ ಬೇಸ್ 256GB ಸ್ಟೋರೇಜ್ ಮಾಡೆಲ್‌ಗೆ 1,59,900 ರೂ., 512GB ಗೆ 1,79,900 ರೂ. ಮತ್ತು 1TB ಆವೃತ್ತಿಗೆ 1,99,900 ರೂ. ನಿಗದಿ ಮಾಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ