ಇಂದಿನಿಂದ ಐಫೋನ್ 15 ಸರಣಿ ಮಾರಾಟ ಆರಂಭ: ಯಾವುದರಲ್ಲಿ ಖರೀದಿಸಬಹುದು?
Apple iPhone 15 Series First Sale Today: ಇಂದಿನಿಂದ ಭಾರತದ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್, ಅಮೆಜಾನ್, ಆ್ಯಪಲ್ನ ಅಧಿಕೃತ ವೆಬ್ಸೈಟ್ನಲ್ಲಿ ಐಫೋನ್ 15 ಸರಣಿಗಳು ಖರೀದಿಗೆ ಸಿಗುತ್ತಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ನ ಬೆಲೆ ಎಷ್ಟು, ಇದರಲ್ಲಿ ಏನೆಲ್ಲ ಫೀಚರ್ಸ್ ನೀಡಲಾಗಿದೆ ಎಂಬುದನ್ನು ನೋಡೋಣ.
ಆ್ಯಪಲ್ ಕಂಪನಿ ಇತ್ತೀಚೆಗಷ್ಟೆ ತನ್ನ ವಂಡರ್‌ಲಸ್ಟ್ ಈವೆಂಟ್ನಲ್ಲಿ ಬಹುನಿರೀಕ್ಷಿತ ಐಫೋನ್ 15 ಸರಣಿಯನ್ನು (iPhone 15 Series) ಅನಾವರಣ ಮಾಡಿತ್ತು. ಇದರಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಇದೆ. ಇದೀಗ ಇಂದಿನಿಂದ ಭಾರತದ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್, ಅಮೆಜಾನ್, ಆ್ಯಪಲ್ನ ಅಧಿಕೃತ ವೆಬ್ಸೈಟ್ನಲ್ಲಿ ಐಫೋನ್ 15 ಸರಣಿಗಳು ಖರೀದಿಗೆ ಸಿಗುತ್ತಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ನ ಬೆಲೆ ಎಷ್ಟು, ಇದರಲ್ಲಿ ಏನೆಲ್ಲ ಫೀಚರ್ಸ್ ನೀಡಲಾಗಿದೆ ಎಂಬುದನ್ನು ನೋಡೋಣ.
ಐಫೋನ್ 15- 128GB- 79,900 ರೂ., ಐಫೋನ್ 15- 256GB- 89,900 ರೂ., ಐಫೋನ್ 15- 512GB- 1,09,900 ರೂ., ಐಫೋನ್ 15 ಪ್ಲಸ್- 128GB – 89,900 ರೂ., ಐಫೋನ್ 15 ಪ್ಲಸ್- 256GB – 99,900 ರೂ. ನಿಗದಿ ಮಾಡಲಾಗಿದೆ.
ಇನ್ನು ಐಫೋನ್ 15 ಪ್ರೊ 128GB ಸ್ಟೋರೇಜ್ ಮಾಡೆಲ್‌ಗೆ 1,34,900 ರೂ., 256GB ಗೆ 1,44,900 ರೂ., 512GB ಗೆ 164,900 ರೂ. ಮತ್ತು 1TB ಮಾದರಿಗೆ 1,84,900 ರೂ. ಇದೆ. ಐಫೋನ್ 15 ಪ್ರೊ ಮ್ಯಾಕ್ಸ್ ಬೇಸ್ 256GB ಸ್ಟೋರೇಜ್ ಮಾಡೆಲ್‌ಗೆ 1,59,900 ರೂ., 512GB ಗೆ 1,79,900 ರೂ. ಮತ್ತು 1TB ಆವೃತ್ತಿಗೆ 1,99,900 ರೂ. ನಿಗದಿ ಮಾಡಲಾಗಿದೆ.
Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್ಗಳ ಬೆಲೆ
ಐಫೋನ್ 15 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ ಪ್ಲೇಯನ್ನು ಹೊಂದಿದೆ, ಆದರೆ ಪ್ಲಸ್ ಮಾದರಿಯು 6.7-ಇಂಚಿನ ದೊಡ್ಡ ಡಿಸ್ ಪ್ಲೇ, 2000 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಆದಾಗ್ಯೂ, ಆಪಲ್ 120Hz ಡಿಸ್ ಪ್ಲೇಗಳನ್ನು ಪ್ರೊ ಮಾದರಿಗಳಿಗೆ ನೀಡಿದ್ದು, ಐಫೋನ್ 15 ಮತ್ತು ಐಫೋನ್ 15 ಪ್ಲಸ್ನಲ್ಲಿ 60Hz ಅನ್ನು ಇರಿಸಿದೆ.
ಐಫೋನ್ 15 ಮತ್ತು ಐಫೋನ್ 15 ಪ್ಲಸ್, ಐಫೋನ್ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್ನಲ್ಲಿ ಇರುವ A16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. 48MP ಪ್ರಾಥಮಿಕ ಸಂವೇದಕ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಐಫೋನ್ 15 ಸರಣಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ, 12MP ಮುಂಭಾಗದ ಕ್ಯಾಮೆರಾ ಇದೆ. ಐಫೋನ್ 15 ಇಡೀ ದಿನದ ಬ್ಯಾಟರಿ ಅವಧಿಯೊಂದಿಗೆ ಬರುತ್ತದೆ ಎಂದು ಆ್ಯಪಲ್ ಹೇಳಿದೆ, ಆದರೆ ಐಫೋನ್ 15 ಪ್ಲಸ್ನಲ್ಲಿ ದೊಡ್ಡ ಬ್ಯಾಟರಿ ನೀಡಲಾಗಿದೆ. ನಿಖರವಾದ ಬ್ಯಾಟರಿ ಸಾಮರ್ಥ್ಯವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಲೈಟ್ನಿಂಗ್ ಪೋರ್ಟ್ ಬದಲಿಗೆ ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಐಫೋನ್‌ಗಳು MagSafe ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.
ಐಫೋನ್ 15 ಪ್ರೊ 2,556 × 1,179 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಪ್ರೊಮೋಷನ್, HDR, ಟ್ರೂ ಟೋನ್, ಡೈನಾಮಿಕ್ ಐಲ್ಯಾಂಡ್, ಯಾವಾಗಲೂ ಆನ್ ಡಿಸ್ ಪ್ಲೇ ಮತ್ತು ಸೆರಾಮಿಕ್ ಶೀಲ್ಡ್ ರಕ್ಷಣೆಯೊಂದಿಗೆ 6.1-ಇಂಚಿನ OLED ಸೂಪರ್ ರೆಟಿನಾ XDR ಡಿಸ್ ಪ್ಲೇಯನ್ನು ಹೊಂದಿದೆ. ಪ್ರೊ ಮ್ಯಾಕ್ಸ್ 6.7-ಇಂಚಿನ OLED ಸೂಪರ್ ರೆಟಿನಾ XDR ಡಿಸ್ ಪ್ಲೇಯನ್ನು 2,796 × 1,290 ಪಿಕ್ಸೆಲ್‌ಗಳು, HDR, ಟ್ರೂ ಟೋನ್, ಡೈನಾಮಿಕ್ ಐಲ್ಯಾಂಡ್, ಆಲ್ವೇಸ್-ಆನ್ ಡಿಸ್ ಪ್ಲೇ, 120Hz ಪ್ರೊಮೋಷನ್ ತಂತ್ರಜ್ಞಾನ ಮತ್ತು ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ಹೊಂದಿದೆ. ಆ್ಯಪಲ್ A17 Pro 3nm ಚಿಪ್ಸೆಟ್, 6-ಕೋರ್ GPU.
ಪ್ರೊ ಮತ್ತು ಪ್ರೊ ಮ್ಯಾಕ್ಸ್ ಐಫೋನ್‌ಗಳ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸಂವೇದಕವಿದೆ. OIS ಜೊತೆಗೆ 48MP ವೈಡ್-ಆಂಗಲ್ ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12MP ಟೆಲಿಫೋಟೋ ಲೆನ್ಸ್, ಪ್ರೊನಲ್ಲಿ 3X, ಪ್ರೊ ಮ್ಯಾಕ್ಸ್ನಲ್ಲಿ 5X ಆಪ್ಟಿಕಲ್ ಜೂಮ್ ಆಯ್ಕೆ ಇದೆ. ಇದು ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತವೆ ಮತ್ತು 15W ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ. ಇವುಗಳಲ್ಲಿ ವಾಚ್ ಮತ್ತು ಏರ್‌ಪಾಡ್‌ಗಳಂತಹ ಇತರ ಆ್ಯಪಲ್ ಸಾಧನಗಳನ್ನು ಟೈಪ್ ಸಿ ಮೂಲಕ ಚಾರ್ಜ್ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ