- Kannada News Photo gallery Motorola New smartphone Moto Edge 40 Neo launch Today in India check price and specs
ರೋಚಕತೆ ಸೃಷ್ಟಿಸಿರುವ ಮೋಟೋ ಎಡ್ಜ್ 40 ನಿಯೋ ಇಂದು ದೇಶದಲ್ಲಿ ಬಿಡುಗಡೆ: ಏನಿದೆ ಫೀಚರ್ಸ್?
Moto Edge 40 Neo launch Today in India: ಇಂದು ಅನಾವರಣಗೊಳ್ಳಲಿರುವ ಮೋಟೋ ಎಡ್ಜ್ 40 ನಿಯೋ ಬೆಲೆ ದೇಶದಲ್ಲಿ 25,000 ರೂ. ಆಗಿದೆ ಎನ್ನಲಾಗಿದೆ. ಯುರೋಪ್‌ನಲ್ಲಿ EUR 399 ಆರಂಭಿಕ ಬೆಲೆಯಲ್ಲಿ ಈ ಫೋನನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ದೇಶದಲ್ಲಿ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಕಾಣಲಿದೆ.
Updated on: Sep 21, 2023 | 6:55 AM

ಮೋಟೋರೊಲಾ ಕಂಪನಿ ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಇಂದು ತನ್ನ ಎಡ್ಜ್ ಸರಣಿಯಲ್ಲಿ ಹೊಸ ಮೋಟೋ ಎಡ್ಜ್ 40 ನಿಯೋ (Moto Edge 40 Neo 5G) ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಇದು ಮೋಟೋ ಎಡ್ಜ್ 30 ನಿಯೋ ಫೋನಿನ ಮುಂದಿನ ಆವೃತ್ತಿಯಾಗಿದೆ. ಬಿಡುಗಡೆಗೂ ಮುನ್ನ ಈ ಫೋನಿನ ಬೆಲೆ ಆನ್ಲೈನ್ನಲ್ಲಿ ಸೋರಿಕೆ ಆಗಿತ್ತು.

ಟಿಪ್‌ಸ್ಟರ್ ಮುಕುಲ್ ಶರ್ಮಾ ಪ್ರಕಾರ, ಇಂದು ಅನಾವರಣಗೊಳ್ಳಲಿರುವ ಮೋಟೋ ಎಡ್ಜ್ 40 ನಿಯೋ ಬೆಲೆ ದೇಶದಲ್ಲಿ 25,000 ರೂ. ಆಗಿದೆ ಎನ್ನಲಾಗಿದೆ. ಯುರೋಪ್‌ನಲ್ಲಿ EUR 399 ಆರಂಭಿಕ ಬೆಲೆಯಲ್ಲಿ ಈ ಫೋನನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಮೋಟೋ ಎಡ್ಜ್ 40 ನಿಯೋವನ್ನು ಭಾರತದಲ್ಲಿ ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು ಎಂದು ಟಿಪ್‌ಸ್ಟರ್ ಉಲ್ಲೇಖಿಸಿದ್ದಾರೆ. ಈ ಫೋನ್ ದೇಶದಲ್ಲಿ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಕಾಣಲಿದೆ.

ಮೋಟೋ ಎಡ್ಜ್ 40 ನಿಯೋ ಫೋನ್ ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ ಮತ್ತು ಎಲ್ಇಡಿ ಫ್ಲ್ಯಾಷ್ ಇರುವುದು ಖಚಿತವಾಗಿದೆ. ಸ್ಪೀಕರ್ ಗ್ರಿಲ್, ಟೈಪ್-ಸಿ ಪೋರ್ಟ್, ಪ್ರಾಥಮಿಕ ಮೈಕ್ರೊಫೋನ್ ಮತ್ತು ಸಿಮ್ ಟ್ರೇ ವಿಭಾಗವು ಕೆಳಭಾಗದಲ್ಲಿದೆ. ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈಗಾಗೇ ಸೋರಿಕೆ ಆಗಿರುವ ರೆಂಡರ್‌ಗಳನ್ನು ಇದು ಹೋಲುತ್ತದೆ.

ಡಿಸ್‌ಪ್ಲೇ-ಪ್ರೊಸೆಸರ್: ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ಫೋನ್ 6.55-ಇಂಚಿನ FHD+ ಪೋಲೆಡ್ ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್, ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1050 SoC ನಿಂದ ರನ್ ಆಗುತ್ತದೆ. 12GB RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಓಎಸ್-ಕ್ಯಾಮೆರಾಗಳು: ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಮೂಲಕ ಬರುವ ಸಾಧ್ಯತೆಯಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಮೋಟೋ ಎಡ್ಜ್ 40 ನಿಯೋ ಫೋನ್ 50MP ಪ್ರಾಥಮಿಕ ಸಂವೇದಕ ಮತ್ತು 13MP ಸೆಕೆಂಡರಿ ಸಂವೇದಕವನ್ನು ಹೊಂದಿದೆ ಎಂದು ಹೇಳಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಅಳವಡಿಸಲಾಗಿದೆ.

ಬ್ಯಾಟರಿ: 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇರಬಹುದು. ಇದು 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS, NFC, ಮತ್ತು USB ಟೈಪ್-C ಪೋರ್ಟ್. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಮತ್ತು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ನೀಡಲಾಗಿದೆ.



















