ಸೆಪ್ಟೆಂಬರ್​ನಲ್ಲಿ 15,000 ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ ನೋಡಿ

Best Smartphones Under Rs. 15,000 in India: ಭಾರತದಲ್ಲಿ ಕಡಿಮೆ ಬೆಲೆಗೆ ಬಲಿಷ್ಠ ಸ್ಮಾರ್ಟ್​ಫೋನ್​ಗಳನ್ನು ಆಯ್ಕೆ ಮಾಡಲು ವಿವಿಧ ಬ್ರ್ಯಾಂಡ್​ಗಳಿವೆ. ಇವುಗಳಲ್ಲಿ, ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G ಯಿಂದ ಹಿಡಿದು ಐಕ್ಯೂ Z6 ಲೈಟ್ 5G ವರೆಗೆ ಇದೆ. ಹಾಗಾದರೆ, ಸದ್ಯ ಅಮೆಜಾನ್‌ನಲ್ಲಿ 15,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದನ್ನು ನೋಡೋಣ.

ಸೆಪ್ಟೆಂಬರ್​ನಲ್ಲಿ 15,000 ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ ನೋಡಿ
Smartphones
Follow us
|

Updated on: Sep 21, 2023 | 1:01 PM

ಇಂದಿನ ಮಾರುಕಟ್ಟೆಯಲ್ಲಿ 15,000 ರೂ. ಗಿಂತ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ನೀವು ಕಾಣಬಹುದು. ಈ ಫೋನುಗಳು ಆಕರ್ಷಕವಾದ ಡಿಸ್ ಪ್ಲೇ, ಬಲಿಷ್ಠ ಪ್ರೊಸೆಸರ್‌ಗಳು ಮತ್ತು ಕನಿಷ್ಠ 4GB RAM ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತದಲ್ಲಿ ಈರೀತಿಯ ಸ್ಮಾರ್ಟ್​ಫೋನ್​ಗಳನ್ನು ಆಯ್ಕೆ ಮಾಡಲು ವಿವಿಧ ಬ್ರ್ಯಾಂಡ್​ಗಳಿವೆ. ಇವುಗಳಲ್ಲಿ, ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G ಯಿಂದ ಹಿಡಿದು ಐಕ್ಯೂ Z6 ಲೈಟ್ 5G ವರೆಗೆ ಇದೆ. ಹಾಗಾದರೆ, ಸದ್ಯ ಅಮೆಜಾನ್‌ನಲ್ಲಿ (Amazon) 15,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದನ್ನು ನೋಡೋಣ.

ರೆಡ್ಮಿ 12 5G (6GB RAM 128GB)

ರೆಡ್ಮಿ 12 5G (6GB 128GB) ಪ್ರಸ್ತುತ ಅಮೆಜಾನ್​ನಲ್ಲಿ 13,499ರೂ. ಗೆ ಸೇಲ್ ಆಗುತ್ತಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಸ್ನಾಪ್​ಡ್ರಾಗನ್ 4 Gen 2 ಚಿಪ್‌ಸೆಟ್ ಅನ್ನು ಹೊಂದಿದೆ. 6.71-ಇಂಚಿನ FHD+ ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ದರ ಇದೆ. ಜೊತೆಗೆ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ, ನೀವು ಎಷ್ಟೇ ಉಪಯೋಗಿಸಿದರೂ ಈ ಫೋನ್ ಪೂರ್ಣ ದಿನ ಬ್ಯಾಟರಿ ಪವರ್ ನೀಡುತ್ತದೆ. ಕ್ಯಾಮೆರಾ ಸಾಮರ್ಥ್ಯಗಳ ವಿಷಯದಲ್ಲಿ, ರೆಡ್ಮಿ 12 5G ಹಿಂಭಾಗ ಡ್ಯುಯಲ್-ಕ್ಯಾಮೆರಾ ಸೆಟಪ್‌ ಇದ್ದು 50MP ಪ್ರಾಥಮಿಕ ಸಂವೇದಕದೊಂದಿಗೆ ಬರುತ್ತದೆ.

ವಿವೋದಿಂದ ಬಲಿಷ್ಠ ಸ್ಮಾರ್ಟ್​ಫೋನ್ ಬಿಡುಗಡೆಗೆ ತಯಾರಿ: ಪ್ರೊಸೆಸರ್, ಕ್ಯಾಮೆರಾ ಯಾವುದು ನೋಡಿ

ಇದನ್ನೂ ಓದಿ
Image
ಶೀಘ್ರದಲ್ಲೇ ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಲಿದೆ ಹೊಸ ಮೇಳ
Image
ರೋಚಕತೆ ಸೃಷ್ಟಿಸಿರುವ ಮೋಟೋ ಎಡ್ಜ್ 40 ನಿಯೋ ಇಂದು ದೇಶದಲ್ಲಿ ಬಿಡುಗಡೆ
Image
ಬೆಂಗಳೂರು ಮೊದಲಾದೆಡೆ ಜಿಯೋ ಏರ್​ಫೈಬರ್ ಶುರು; ಇದರ ಬೆಲೆ ಎಷ್ಟು?
Image
ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್ ಚಾನಲ್ ಆರಂಭ; ಇಲ್ಲಿದೆ ಲಿಂಕ್

ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G (4GB RAM, 128GB ಸಂಗ್ರಹಣೆ)

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ 14,990 ರೂ. ಗೆ ಲಭ್ಯವಿದೆ. ಇದು ಎಕ್ಸಿನೊಸ್ 1330 SoC ನಿಂದ ನಡೆಸಲ್ಪಡುತ್ತದೆ ಮತ್ತು 4GB ಯ RAM ಮತ್ತು 128GB ಸಂಗ್ರಹಣೆಯ ಆಯ್ಕೆಯೊಂದಿಗೆ ಬರುತ್ತದೆ. ಇದರ ಡಿಸ್ ಪ್ಲೇ 6.6-ಇಂಚಿನ FHD+ ಪ್ಯಾನೆಲ್ ಆಗಿದ್ದು 90Hz ರಿಫ್ರೆಶ್ ದರವನ್ನು ಹೊಂದಿದೆ. 6,000mAh ಬ್ಯಾಟರಿಯನ್ನು ಸಹ ಹೊಂದಿದೆ, 25W ನಲ್ಲಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ 2MP ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳ ಜೊತೆಗೆ 50MP ಪ್ರಾಥಮಿಕ ಸಂವೇದಕವನ್ನು ಹೊಂದಿದೆ.

ವಿವೋ T2x 5G (4GB RAM, 128GB GBS ಸಂಗ್ರಹಣೆ)

ವಿವೋ T2x 5G ಅನ್ನು ಅಮೆಜಾನ್​ನಲ್ಲಿ ನೀವು 14,990 ರೂ. ಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ನಿಂದ ಚಾಲಿತವಾಗಿದೆ. FHD+ ರೆಸಲ್ಯೂಶನ್‌ನೊಂದಿಗೆ 6.58-ಇಂಚಿನ FHD+ IPS LCD ಡಿಸ್ ಪ್ಲೇ ಹೊಂದಿದೆ. ಮುಂಭಾಗದಲ್ಲಿ ಇದು 50MP ಪ್ರಾಥಮಿಕ ಸಂವೇದಕ ಮತ್ತು 2MP ಬೊಕೆ ಸೆಕೆಂಡರಿ ಸಂವೇದಕವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರಿಯಲ್ ಮಿ 9i (4GB RAM, 128GB ಸಂಗ್ರಹಣೆ)

ರಿಯಲ್ ಮಿ 9i ಸ್ಮಾರ್ಟ್​ಫೋನ್ ಬೆಲೆ 12,399 ರೂ ಆಗಿದೆ. ಈ ಫೋನ್ 90Hz IPS LCD ಡಿಸ್ ಪ್ಲೇ ಹೊಂದಿದ್ದು, 5,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 680 ಪ್ರೊಸೆಸರ್, 50MP ಪ್ರಾಥಮಿಕ ಕ್ಯಾಮೆರಾ ಆಯ್ಕೆ ಅಳವಡಿಸಲಾಗಿದೆ.

ಐಕ್ಯೂ Z6 ಲೈಟ್ 5G (6GB RAM, 128GB ಸಂಗ್ರಹಣೆ)

ಈ ಸ್ಮಾರ್ಟ್‌ಫೋನ್ ಬೆಲೆ 13,999 ರೂ. ಇದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆ 5G-ಸಾಮರ್ಥ್ಯದ ಮೊಬೈಲ್​ನಲ್ಲಿ ಒಂದಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹಾಗೂ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4-ಸರಣಿ SoC ಪ್ರೊಸೆಸರ್‌ ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು