ಭಾರತದಲ್ಲಿ ಬಹುನಿರೀಕ್ಷಿತ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಬಿಡುಗಡೆ
Moto Edge 40 Neo Launched in India: ಭಾರತದಲ್ಲಿ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 23,999 ರೂ. ಇದೆ. ಅಂತೆಯೆ 12GB RAM ಮತ್ತು 256GB ಸ್ಟೋರೇಜ್‌ನ ಬೆಲೆ 25,999 ರೂ. ಆಗಿದೆ. ವಿಶೇಷ ಆಫರ್ ಘೋಷಣೆ ಮಾಡಲಾಗಿದ್ದು, ಈ ಫೋನುಗಳು ಕ್ರಮವಾಗಿ 20,999 ಮತ್ತು 22,999 ರೂ. ಗೆ ಸೀಮಿತ ಅವಧಿಗೆ ನೀಡಲಾತ್ತದೆ.
ಪ್ರಸಿದ್ಧ ಮೋಟೋರೊಲಾ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ತಿಂಗಳಿಗೆ ಒಂದು ಫೋನನ್ನು ದೇಶದಲ್ಲಿ ಅನಾವರಣ ಮಾಡುತ್ತಿದೆ. ಇದೀಗ ಇಂದು ಭಾರತದಲ್ಲಿ ಮೋಟೋರೊಲಾ ಕಂಪನಿ ತನ್ನ ಎಡ್ಜ್ ಸರಣಿ ಅಡಿಯಲ್ಲಿ ಹೊಸ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಫೋನಿನ ಹಿಂದಿನ ವರ್ಷನ್ ಎಡ್ಜ್ 40 ರಿಲೀಸ್ ಆಗಿತ್ತು. ಮೋಟೋ ಎಡ್ಜ್ 40 ನಿಯೋ ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮೋಟೋ ಎಡ್ಜ್ 40 ನಿಯೋ ಬೆಲೆ, ಮಾರಾಟ
ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 23,999 ರೂ. ಇದೆ. ಅಂತೆಯೆ 12GB RAM ಮತ್ತು 256GB ಸ್ಟೋರೇಜ್‌ನ ಬೆಲೆ 25,999 ರೂ. ಆಗಿದೆ. ವಿಶೇಷ ಆಫರ್ ಘೋಷಣೆ ಮಾಡಲಾಗಿದ್ದು, ಈ ಫೋನುಗಳು ಕ್ರಮವಾಗಿ 20,999 ಮತ್ತು 22,999 ರೂ. ಗೆ ಸೀಮಿತ ಅವಧಿಗೆ ನೀಡಲಾತ್ತದೆ.
ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 28 ರಂದು ಸಂಜೆ 7 ಗಂಟೆಗೆ ಫ್ಲಿಪ್‌ಕಾರ್ಟ್, ಮೋಟೋರೋಲಾ ಡಾಟ್ ಇನ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು 1,000 ರೂಪಾಯಿಗಳ ವಿನಿಮಯ ಬೋನಸ್ ಕೊಡುಗೆಯೊಂದಿಗೆ, 1,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದೆ.
ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?
ಮೋಟೋ ಎಡ್ಜ್ 40 ನಿಯೋ ಫೀಚರ್ಸ್:
ಡಿಸ್‌ಪ್ಲೇ: ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.55-ಇಂಚಿನ pOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1300 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು HDR10+ ಡಿಸ್‌ಪ್ಲೇ ಆಗಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7030 ಪ್ರೊಸೆಸರ್ನಿಂದ ಚಾಲಿತವಾಗಿದೆ. ಈ ಚಿಪ್‌ಸೆಟ್‌ನೊಂದಿಗೆ ಪ್ರಾರಂಭಿಸಿದ ಮೊದಲ ಮೋಟೋ ಫೋನ್ ಇದಾಗಿದೆ.
RAM ಮತ್ತು ಸಂಗ್ರಹಣೆ: ಈ ಫೋನ್ 8GB RAM + 128GB ಸಂಗ್ರಹಣೆ ಮತ್ತು 12GB RAM + 256GB ಸಂಗ್ರಹಣೆಯ ಎರಡು ರೂಪಾಂತರಗಳಲ್ಲಿ ಬರುತ್ತದೆ.
ಕ್ಯಾಮೆರಾಗಳು: ಇದು OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಮ್ಯಾಕ್ರೋ ವಿಷನ್ ಜೊತೆಗೆ 13MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿ ಮುಂಭಾಗ 32MP ಕ್ಯಾಮೆರಾ ಅಳವಡಿಸಲಾಗಿದೆ.
ಬ್ಯಾಟರಿ, ಚಾರ್ಜಿಂಗ್: ಈ ಫೋನ್ 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.
ಸಾಫ್ಟ್‌ವೇರ್-ಸಂಪರ್ಕ: ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ. ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ IP68, 5G, USB ಟೈಪ್-C ಪೋರ್ಟ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ನೋಮಸ್, NFC, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು Wi-Fi 6E ಜೊತೆಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ