ನಿಯೋ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಟೆಕ್ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

Nio Phone Launched: ಯಾವುದೇ ಮಾಹಿತಿ ನೀಡದೆ, ಸದ್ದಿಲ್ಲದೆ ಹೊಸ ನಿಯೋ ಕಂಪನಿ ತನ್ನ ಮೊಟ್ಟ ಮೊದಲ ನಿಯೋ ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ಭಾರತಕ್ಕಿನ್ನೂ ಬಂದಿಲ್ಲ. ಈ ಫೋನ್​ನ ಇತರೆ ಆವೃತ್ತಿ ದೇಶದಲ್ಲಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದರೆ ಜಿಯೋ ಫೋನ್​ಗೆ ಪೈಪೋಟಿ ನೀಡುವುದು ಖಚಿತ.

ನಿಯೋ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಟೆಕ್ ಮಾರುಕಟ್ಟೆ ಅಲ್ಲೋಲ-ಕಲ್ಲೋಲ
NIO Phone
Follow us
Vinay Bhat
|

Updated on: Sep 23, 2023 | 12:19 PM

ರಿಲಯನ್ಸ್ ಒಡೆತನದ ಜಿಯೋ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಬಿಡುಗಡೆ ಆಗಿ ಯಶಸ್ಸು ಸಾಧಿಸುತ್ತಿದೆ. ಹೀಗಿರುವಾಗ ಟೆಕ್ ಮಾರುಕಟ್ಟೆಗೆ ನಿಯೋ (Nio Phone) ಎಂಬ ಹೊಸ ಸ್ಮಾರ್ಟ್​ಫೋನ್ ಲಗ್ಗೆಯಿಟ್ಟಿದೆ. ಯಾವುದೇ ಮಾಹಿತಿ ನೀಡದೆ, ಸದ್ದಿಲ್ಲದೆ ಹೊಸ ನಿಯೋ ಕಂಪನಿ ತನ್ನ ಮೊಟ್ಟ ಮೊದಲ ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ಭಾರತಕ್ಕಿನ್ನೂ ಬಂದಿಲ್ಲ. ಈ ಫೋನ್​ನ ಇತರೆ ಆವೃತ್ತಿ ದೇಶದಲ್ಲಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದರೆ ಜಿಯೋ ಫೋನ್​ಗೆ ಪೈಪೋಟಿ ನೀಡುವುದು ಖಚಿತ. ಸದ್ಯ ಅನಾವರಣಗೊಂಡಿರುವ ಹೊಸ ನಿಯೋ ಫೋನ್ ಹೇಗಿದೆ?, ಇದರ ಬೆಲೆ ಎಷ್ಟು ಎಂಬುದನ್ನು ನೋಡೋಣ.

ನಿಯೋ ಫೋನ್ ಬೆಲೆ, ಲಭ್ಯತೆ:

ನೂತನ ನಿಯೋ ಫೋನ್ ಒಟ್ಟು ಮೂರು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. 12GB RAM + 512GB ಸ್ಟೋರೇಜ್ ಮಾದರಿ, 12GB RAM + 1TB ಸ್ಟೋಯೇಜ್ ರೂಪಾಂತರ ಮತ್ತು 16GB RAM + 1TB ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇವುಗಳ ಬೆಲೆ ಕ್ರಮವಾಗಿ CNY 6,499 (ಭಾರತದಲ್ಲಿ ಸರಿಸುಮಾರು 73,800 ರೂ.), CNY 996 (ಸುಮಾರು 78,350 ರೂ.) ಮತ್ತು CNY 7,499 (ಸುಮಾರು ರೂ. 85,200).

200MP ಕ್ಯಾಮೆರಾ, 120W ಚಾರ್ಜರ್: ಬಹುನಿರೀಕ್ಷಿತ ರೆಡ್ಮಿ ನೋಟ್ 13 ಸರಣಿ ಬಿಡುಗಡೆ: ಬೆಲೆ?

ಇದನ್ನೂ ಓದಿ
Image
ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ
Image
ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತ ಬೆಂಗಳೂರಿಗರು
Image
ಭಾರತದಲ್ಲಿ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಬಿಡುಗಡೆ: ಇದು ಕಡಿಮೆ ಬೆಲೆಯ ಮಡ
Image
ಭಾರತದಲ್ಲಿ ವಿವೋ T2 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಏನಿದೆ ನೋಡಿ

ಈ ಹ್ಯಾಂಡ್‌ಸೆಟ್ ಏಳು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ – ಎಡೆಲ್‌ವೀಸ್ ವೈಟ್, ಯುವಾನ್ ಶಾನ್ ಡೈ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ), ಸ್ಟಾರ್ ಗ್ರೀನ್, ಮಿರರ್ ಎಂಪ್ಟಿ ಪೌಡರ್, ಹೆಮೋಸ್ಫಿಯರ್ ಬ್ಲೂ, ಸ್ಟಾರ್ ಗ್ರೇ ಮತ್ತು ಇಂಕ್ ಬ್ಲೂ ಬಣ್ಣದ ವಿಶೇಷ ಎಪಿಡಿಷನ್​ನಲ್ಲಿ ಲಭ್ಯವಿದೆ. ನಿಯೋ ಫೋನ್ ಚೀನಾ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲೈವ್ ಆಗಿದೆ.

ನಿಯೋ ಫೋನ್ ಫೀಚರ್ಸ್:

ಡ್ಯುಯಲ್-ಸಿಮ್ ಆಯ್ಕೆ ಹೊಂದಿರುವ ನಿಯೋ ಫೋನ್ ಕಂಪನಿಯ ಕಸ್ಟಮ್ ಸ್ಕಿನ್ ಸ್ಕೈಯುಐ ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.81-ಇಂಚಿನ LTPO OLED ಡಿಸ್ ಪ್ಲೇ ಜೊತೆಗೆ 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 1800 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್ ಅನ್ನು ನೀಡುತ್ತದೆ. HDR10+ ಪ್ರಮಾಣೀಕರಣದೊಂದಿಗೆ ಬರುತ್ತದೆ. ಡಿಸ್‌ಪ್ಲೇಯು ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಟಾಪ್-ಸೆಂಟರ್‌ನಲ್ಲಿ ಪಂಚ್ ಹೋಲ್-ಕಟೌಟ್ ಅನ್ನು ಹೊಂದಿದೆ.

ನಿಯೋ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ನಿಂದ ಚಾಲಿತವಾಗಿದೆ. ಇದು 16GB RAM ಮತ್ತು 1TB ವರೆಗೆ ಸಂಗ್ರಹಣೆಯೊಂದಿಗೆ ಬರುತ್ತದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ, ನಿಯೋ ಫೋನ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 50-ಮೆಗಾಪಿಕ್ಸೆಲ್ ಸೋನಿ IMX707 ಪ್ರಾಥಮಿಕ ಕ್ಯಾಮೆರಾ ಸಂವೇದಕದಿಂದ ಕೂಡಿದೆ. ಇತರ ಎರಡು ಹಿಂಬದಿಯ ಕ್ಯಾಮೆರಾಗಳು 50-ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದೆ. ಅವುಗಳಲ್ಲಿ ಒಂದು OIS ಬೆಂಬಲವನ್ನು ಹೊಂದಿದೆ ಮತ್ತು ಇನ್ನೊಂದು 2.8x ಆಪ್ಟಿಕಲ್ ಜೂಮ್ ಆಯ್ಕೆ ನೀಡುತ್ತದೆ.

ಹೆಚ್ಚುವರಿಯಾಗಿ, ಈ ಫೋನ್ 66W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫ್ಲ್ಯಾಷ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,200mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ. ಇವುಗಳನ್ನು ಹೊರತುಪಡಿಸಿ, ನಿಯೋ ಫೋನ್ ತನ್ನ ಕಾರ್ ಕಂಟ್ರೋಲ್ ಕೀಯನ್ನು ಫೋನ್‌ನ ಎಡಭಾಗದಲ್ಲಿ ಇರಿಸಲಾಗುತ್ತದೆ. ಕಾರನ್ನು ರಿಮೋಟ್ ಮೂಲಕ ನಿಯಂತ್ರಿಸಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದು ಬ್ಲೂಟೂತ್ ಲೋ ಎನರ್ಜಿ ಮತ್ತು ಅಲ್ಟ್ರಾ-ವೈಡ್‌ಬ್ಯಾಂಡ್ ತಂತ್ರಜ್ಞಾನಗಳ ಸಂಯೋಜನೆಯಿಂದ ಚಾಲಿತವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್