200MP ಕ್ಯಾಮೆರಾ, 120W ಚಾರ್ಜರ್: ಬಹುನಿರೀಕ್ಷಿತ ರೆಡ್ಮಿ ನೋಟ್ 13 ಸರಣಿ ಬಿಡುಗಡೆ: ಬೆಲೆ?
Redmi Note 13, Note 13 Pro, Note 13 Pro+ Launched: ರೆಡ್ಮಿ ನೋಟ್ 13, ರೆಡ್ಮಿ ನೋಟ್ 13 ಪ್ರೊ ಮತ್ತು ರೆಡ್ಮಿ ನೋಟ್ 13 ಪ್ರೊ+ ನಾದ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇದರಲ್ಲಿ 13 ಪ್ರೊ ಮತ್ತು 13 ಪ್ರೊ+ ಫೋನ್‌ಗಳು OIS ಜೊತೆಗೆ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಸ್ಯಾಮ್ಸಂಗ್ ISOCELL HP3 ಸೆನ್ಸಾರ್ ಹೊಂದಿದೆ. 120W ವರೆಗೆ ವೇಗದ ಚಾರ್ಜಿಂಗ್ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ.
ಬಿಡುಗಡೆಗೂ ಮುನ್ನ ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಶವೋಮಿ ಒಡೆತನದ ರೆಡ್ಮಿ ನೋಟ್ 13 ಸರಣಿಯು (Redmi Note 13 Series) ಚೀನಾದ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಈ ಫೋನಿನಲ್ಲಿ ಒಟ್ಟು ಮೂರು ಮಾದರಿಗಳಿದ್ದು, ರೆಡ್ಮಿ ನೋಟ್ 13, ರೆಡ್ಮಿ ನೋಟ್ 13 ಪ್ರೊ ಮತ್ತು ರೆಡ್ಮಿ ನೋಟ್ 13 ಪ್ರೊ+ ಆಗಿದೆ. ರೆಡ್ಮಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳು 120Hz ಡಿಸ್‌ಪ್ಲೇ, IP68 ರೇಟಿಂಗ್, 120W ವರೆಗೆ ವೇಗದ ಚಾರ್ಜಿಂಗ್ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಹಾಗಾದರೆ, ಈ ಫೋನನುಗಳ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಚೀನಾದಲ್ಲಿ ರೆಡ್ಮಿ ನೋಟ್ 13 ಸರಣಿಯ ಬೆಲೆ:
ರೆಡ್ಮಿ ನೋಟ್ 13 ಬೆಲೆ
- 6GB + 128GB CNY 1,199 (13,900 ರೂ. ಅಂದಾಜು)
- 8GB + 128GB CNY 1,299 (15,100 ರೂ. ಅಂದಾಜು)
- 8GB + 256GB CNY 1,499 (17,400 ರೂ. ಅಂದಾಜು)
- 12GB + 256GB CNY 1,699 (19,700 ರೂ. ಅಂದಾಜು)
ರೆಡ್ಮಿ ನೋಟ್ 13 ಪ್ರೊ ಬೆಲೆ
- 8GB + 128GB CNY 1,499 (17,400 ರೂ. ಅಂದಾಜು)
- 8GB + 256GB CNY 1,699 (19,700 ರೂ. ಅಂದಾಜು)
- 12GB + 256GB CNY 1,899 (22,000 ರೂ. ಅಂದಾಜು)
- 12GB + 512GB CNY 1,999 (23,100 ರೂ. ಅಂದಾಜು)
- 16GB + 512GB CNY 2,099 (24,300 ರೂ. ಅಂದಾಜು)
ರೆಡ್ಮಿ ನೋಟ್ 13 ಪ್ರೊ+ ಬೆಲೆ
- 12GB + 256GB CNY 1,999 (22,800 ರೂ. ಅಂದಾಜು)
- 12GB + 512GB CNY 2,199 (25,100 ರೂ. ಅಂದಾಜು)
- 16GB + 512GB CNY 2,299 (26,200 ರೂ. ಅಂದಾಜು)
ರೆಡ್ಮಿ ನೋಟ್ 13 ಪ್ರೊ+, ರೆಡ್ಮಿ ನೋಟ್ 13 ಪ್ರೊ ಫೀಚರ್ಸ್
ಡಿಸ್‌ಪ್ಲೇ: ರೆಡ್ಮಿ ನೋಟ್ 13 ಪ್ರೊ+ ಮತ್ತು ರೆಡ್ಮಿ ನೋಟ್ 13 ಪ್ರೊಗಳು 6.67-ಇಂಚಿನ 1.5K FHD+ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಒಳಗೊಂಡಿವೆ.
ಸೆಪ್ಟೆಂಬರ್ನಲ್ಲಿ 15,000 ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ ನೋಡಿ
ಪ್ರೊಸೆಸರ್: ರೆಡ್ಮಿ ನೋಟ್ 13 ಪ್ರೊ+ ಮೀಡಿಯಾಟೆಕ್ ಡೈಮೆನ್ಸಿಟಿ 7200 ಆಲ್ಟ್ರಾ SoC ಹೊಂದಿದೆ, ರೆಡ್ಮಿ ನೋಟ್ 13 ಪ್ರೊಗೆ ಸ್ನಾಪ್ಡ್ರಾಗನ್ 7s Gen 2 SoC ಅಳವಡಿಸಲಾಗಿದೆ.
ಕ್ಯಾಮೆರಾಗಳು: ಛಾಯಾಗ್ರಹಣ ವಿಭಾಗದಲ್ಲಿ, ಎರಡೂ ಫೋನ್‌ಗಳು OIS ಜೊತೆಗೆ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಸ್ಯಾಮ್ಸಂಗ್ ISOCELL HP3 ಸೆನ್ಸಾರ್ ಹೊಂದಿದೆ. ಜೊತೆಗೆ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕವನ್ನು ನೀಡಲಾಗಿದೆ. ಸೆಲ್ಫಿಗಾಗಿ, 16MP ಮುಂಭಾಗದ ಕ್ಯಾಮೆರಾ ಇದೆ.
ಬ್ಯಾಟರಿ, ಚಾರ್ಜಿಂಗ್: ರೆಡ್ಮಿ ನೋಟ್ 13 ಪ್ರೊ+ ನಲ್ಲಿ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಅದೇ ಪ್ರೊನಲ್ಲಿ ದೊಡ್ಡ 5,100mAh ಬ್ಯಾಟರಿಯನ್ನು ನೀಡಲಾಗಿದ್ದು, 67W ವೇಗದ ಚಾರ್ಜಿಂಗ್ ಹೊಂದಿದೆ.
ಸಾಫ್ಟ್‌ವೇರ್: ಎರಡೂ ಫೋನ್‌ಗಳು ಆಂಡ್ರಾಯ್ಡ್ 13-ಆಧಾರಿತ MIUI 14 ಔಟ್-ಆಫ್-ದಿ-ಬಾಕ್ಸ್ ಮೂಲಕ ರನ್ ಆಗುತ್ತದೆ.
ಬಣ್ಣ ಆಯ್ಕೆಗಳು: ರೆಡ್ಮಿ ನೋಟ್ 13 ಪ್ರೊ+ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಬಿಳಿ, ಕಪ್ಪು ಮತ್ತು ಬೆಳ್ಳಿ. ನೀವು ರೆಡ್ಮಿ ನೋಟ್ 13 ಪ್ರೊ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಪಡೆಯಬಹುದು: ಕಪ್ಪು, ನೀಲಿ, ಬಿಳಿ ಮತ್ತು ಬೆಳ್ಳಿ.
ರೆಡ್ಮಿ ನೋಟ್ 13 ಫೀಚರ್ಸ್:
ಡಿಸ್ ಪ್ಲೇ: ರೆಡ್ಮಿ ನೋಟ್ 13 ಫೋನ್ 6.67-ಇಂಚಿನ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ.
ಪ್ರೊಸೆಸರ್: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ಮೂಲಕ ರನ್ ಮಾಡುತ್ತದೆ.
ಕ್ಯಾಮೆರಾಗಳು: ಇದು 100MP ಪ್ರಾಥಮಿಕ ಸಂವೇದಕ ಮತ್ತು 2MP ಡೆಪ್ತ್ ಸಂವೇದಕದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 16MP ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
ಬ್ಯಾಟರಿ, ಚಾರ್ಜಿಂಗ್: ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲವಿದೆ.
ಸಾಫ್ಟ್‌ವೇರ್: ಇದು ಆಂಡ್ರಾಯ್ಡ್ 13-ಆಧಾರಿತ MIUI 14 ಔಟ್-ಆಫ್-ದಿ-ಬಾಕ್ಸ್ ಮೂಲಕ ರನ್ ಆಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ