ಸೆಕಂಡ್ ಹ್ಯಾಂಡ್ ಮೊಬೈಲ್ ಖರೀದಿಸುತ್ತಿದ್ದೀರಾ? ಗವರ್ನ್ಮೆಂಟ್ ಡಾಟಾಬೇಸ್​ನಲ್ಲಿ ಐಎಂಇಐ ನಂಬರ್ ಪರಿಶೀಲಿಸಿ

Things To Remember Before Buying second Hand Phone: ಫೋನ್ ಕದ್ದಿರುವುದೋ, ನಿಜ ಮಾಲೀಕರಿಂದ ನೀಡಲ್ಪಟ್ಟಿರುವುದೋ ನಿಮಗೆ ಗೊತ್ತಿರುವುದಿಲ್ಲ. ಆ ಫೋನ್​ನಲ್ಲಿ ಉದ್ದೇಶಪೂರ್ವಕವಾಗಿ ಯಾರಾದರೂ ಮಾಲ್ವೇರ್ ಹಾಕಿರಲಿಕ್ಕೂ ಸಾಕು. ಹಾಗಾದರೆ, ಸೆಕಂಡ್ ಹ್ಯಾಂಡ್ ಫೋನ್ ಖರೀದಿಸುವಾಗ ಏನೇನು ಎಚ್ಚರ ವಹಿಸಬೇಕು? ಬೇರೆಯವರು ಬಳಸಿದ ಫೋನನ್ನು ನೀವು ಖರೀದಿಸಿ ಉಪಯೋಗಿಸಲು ಮುಂದಾಗಿದ್ದರೆ ಮೊದಲು ಅದರ ಐಎಂಇಐ ನಂಬರ್ ಪರಿಶೀಲಿಸಿ. ಅ ಮೊಬೈಲ್ ಕಳುವಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಇದು ಅಗತ್ಯ.

ಸೆಕಂಡ್ ಹ್ಯಾಂಡ್ ಮೊಬೈಲ್ ಖರೀದಿಸುತ್ತಿದ್ದೀರಾ? ಗವರ್ನ್ಮೆಂಟ್ ಡಾಟಾಬೇಸ್​ನಲ್ಲಿ ಐಎಂಇಐ ನಂಬರ್ ಪರಿಶೀಲಿಸಿ
ಮೊಬೈಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2023 | 4:32 PM

ಕೆಲ ಪ್ರತಿಷ್ಠಿತ ದುಬಾರಿ ಫೋನ್​ಗಳನ್ನು ಖರೀದಿಸಲು ಆಗಿದ್ದಾಗ ಕಡೇಪಕ್ಷ ಸೆಕಂಡ್ ಹ್ಯಾಂಡ್ (second hand phone) ಫೋನನ್ನಾದರೂ ಪಡೆಯಲು ಮುಂದಾಗುತ್ತೇವೆ. ಬಹಳ ಕಡಿಮೆಗೆ ಫೋನ್ ಸಿಕ್ಕುವುದರಿಂದ ದೊಡ್ಡ ಬ್ರ್ಯಾಂಡ್​ಗಳ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವವರು ಬಹಳ ಮಂದಿ ಇದ್ದಾರೆ. ಆದರೆ, ಖರೀದಿಸುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಫೋನ್ ಕದ್ದಿರುವುದೋ, ನಿಜ ಮಾಲೀಕರಿಂದ ನೀಡಲ್ಪಟ್ಟಿರುವುದೋ ನಿಮಗೆ ಗೊತ್ತಿರುವುದಿಲ್ಲ. ಆ ಫೋನ್​ನಲ್ಲಿ ಉದ್ದೇಶಪೂರ್ವಕವಾಗಿ ಯಾರಾದರೂ ಮಾಲ್ವೇರ್ (malware) ಹಾಕಿರಲಿಕ್ಕೂ ಸಾಕು. ಹಾಗಾದರೆ, ಸೆಕಂಡ್ ಹ್ಯಾಂಡ್ ಫೋನ್ ಖರೀದಿಸುವಾಗ ಏನೇನು ಎಚ್ಚರ ವಹಿಸಬೇಕು?

ಐಎಂಇಐ ನಂಬರ್ ಪರಿಶೀಲಿಸಿ

ಬೇರೆಯವರು ಬಳಸಿದ ಫೋನನ್ನು ನೀವು ಖರೀದಿಸಿ ಉಪಯೋಗಿಸಲು ಮುಂದಾಗಿದ್ದರೆ ಮೊದಲು ಅದರ ಐಎಂಇಐ ನಂಬರ್ ಪರಿಶೀಲಿಸಿ. ಅ ಮೊಬೈಲ್ ಕಳುವಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಇದು ಅಗತ್ಯ.

ಸರ್ಕಾರದ ಡಾಟಾಬೇಸ್​ನಲ್ಲಿ ಮೊಬೈಲ್​ನ ಐಎಂಇಐ ನಂಬರ್ ಅನ್ನು ಹಾಕಿ ಪರಿಶೀಲಿಸಬಹುದು. ಕಳುವಾಗಿದ್ದಾಗಿದ್ದರೆ ಅದರ ಮಾಹಿತಿ ತಿಳಿಯುತ್ತದೆ.

ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ವೆಬ್​ಸೈಟ್​ನಲ್ಲಿ ಇದರ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಕರ್ನಾಟಕ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ಐಎಂಇಐ ನಂಬರ್ ನೋಡುವುದು ಹೇಗೆ?

ನಿಮ್ಮ ಮೊಬೈಲ್​ನ ಐಎಂಇಐ ನಂಬರ್ ಅನ್ನು ನೋಡಲು ಹಲವು ಮಾರ್ಗಗಳಿವೆ. ಎರಡು ಸಿಮ್​ಗಳಿರುವ ಮೊಬೈಲ್​ಗಳಿಗೆ ಎರಡು ಐಎಂಇಐ ಸಂಖ್ಯೆಗಳಿರುತ್ತವೆ.

ಫೋನ್​ನ ಸೆಟಿಂಗ್ಸ್​ಗೆ ಹೋಗಿ ಎಬೌಟ್ ಫೋನ್ ಅನ್ನು ಒತ್ತಿದರೆ ಐಎಂಇಐ ನಂಬರ್ ಸಿಗುತ್ತದೆ.

ನಿಮ್ಮ ಮೊಬೈಲ್​ನ ಡಯಲ್ ಕೀಪ್ಯಾಡ್​ನಲ್ಲಿ *#06# ಅನ್ನು ಡಬಲ್ ಮಾಡಿದರೆ ಐಎಂಇಐ ನಂಬರ್ ಪ್ರತ್ಯಕ್ಷವಾಗುತ್ತದೆ.

ಐಎಂಇಐ ನಂಬರ್ ಸಕ್ರಿಯವಾಗಿದೆಯಾ ಪರಿಶೀಲಿಸಿ

ಐಎಂಇಐ ನಂಬರ್ ಎನ್ನುವುದು ಮೊಬೈಲ್​ನ ಗುರುತಾಗಿರುತ್ತದೆ. ಇದು ಸಕ್ರಿಯವಾಗಿದೆಯಾ ಎಂದು ಪರಿಶೀಲಿಸಬಹುದು.

ಮೊಬೈಲ್ ಫೋನ್​ನಿಂದ ‘KYM’ ಎಂದು ಟೈಪಿಸಿ, 14422 ನಂಬರ್​ಗೆ ಕಳುಹಿಸಬೇಕು. ಆಗ ಮೊಬೈಲ್ ಹೆಸರು ಇತ್ಯಾದಿ ವಿವರ ಇರುವ ಎಸ್ಸೆಮ್ಮೆಸ್ ಮರಳಿಬರುತ್ತದೆ. ಐಎಂಇಐ ಸಿಂಧುವಾ, ಅಸಿಂಧುವಾ, ಬ್ಲಾಕ್ ಅಗಿದೆಯಾ ಎಂಬ ವಿವರವೂ ಒಳಗೊಂಡಿರುತ್ತದೆ.

ಇನ್ನು, ಸಿಇಐಆರ್ ವೆಬ್​ಸೈಟ್ ಮೂಲಕವೂ ನೀವು ಐಎಂಇಐ ನಂಬರ್ ಪರಿಶೀಲಿಸಬಹುದು.

www.ceir.gov.in ವೆಬ್​ಸೈಟ್​ಗೆ ಹೋಗಿ ನೋ ಯುವರ್ ಮೊಬೈಲ್ (KYM) ಬಾಕ್ಸ್​ನಲ್ಲಿರುವ ಮೂರು ಆಯ್ಕೆಗಳಲ್ಲಿ ವೆಬ್ ಪೋರ್ಟಲ್ ಅನ್ನು ಅರಿಸಿ ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ, ಬರುವ ಒಟಿಪಿಯನ್ನು ನಮೂದಿಸಿ. ಬಳಿಕ ಐಎಂಇಐ ನಂಬರ್ ಅನ್ನು ನಮೂದಿಸಿ ಎಂಟರ್ ಕೊಡಿ. ಆಗ ಐಎಂಇಐ ಸ್ಟೇಟಸ್ ವರದಿ ಬರುತ್ತದೆ.

ಇದನ್ನೂ ಓದಿ: Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್​ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್​ಗಳ ಬೆಲೆ

ಐಎಂಇಐ ನಂಬರ್ ಪರಿಶೀಲಿಸುವುದು ಯಾಕೆ?

ಮೊಬೈಲ್ ಕಳುವಾದಾಗ ನಾವು ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ದೂರು ಕೊಡುತ್ತೇವೆ, ಅಥವಾ ಮೊಬೈಲ್ ಬ್ಲಾಕ್ ಮಾಡಿಸುತ್ತೇವೆ. ಆಗ ಮೊಬೈಲ್​ನ ಐಎಂಇಐ ನಂಬರ್ ಅನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗಿರುತ್ತದೆ. ಐಎಂಇಐ ನಂಬರ್ ಪರಿಶೀಲನೆಯಿಂದ ಇಂಥ ಮೊಬೈಲ್​ಗಳನ್ನು ಗುರುತುಹಚ್ಚಬಹುದು.

ಕಳುವಾದ ಮೊಬೈಲ್ ಬ್ಲಾಕ್ ಆಗದಿರುವ ಸಾಧ್ಯತೆಯೂ ಇದೆ…

ಮೊಬೈಲ್ ಕಳುವಾದಾಗ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೇವೆ. ಪೊಲೀಸರು ಮೊಬೈಲ್ ಅನ್ನು ಟ್ರ್ಯಾಕ್ ಮಾಡುವ ಸಲುವಾಗಿ ಐಎಂಇಐ ನಂಬರ್ ಅನ್ನು ಬ್ಲಾಕ್ ಮಾಡಿಸಿರುವುದಿಲ್ಲ.

ಇದನ್ನೂ ಓದಿ: ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?

ಮಾಲ್ವೇರ್ ಹಾಕಿದ್ದಾರು ಹುಷಾರ್..!

ದುಷ್ಕರ್ಮಿಗಳು ಕಡಿಮೆ ಬೆಲೆಗೆ ಮೊಬೈಲ್ ಕೊಡುತ್ತೇವೆಂದು ಹೇಳಿ ಹ್ಯಾಂಡ್​ಸೆಟ್​ನಲ್ಲಿ ಮಾಲ್ವೇರ್ ಹಾಕಿ ಕೊಟ್ಟಿರುತ್ತಾರೆ. ನೀವು ಈ ಮೊಬೈಲ್ ಬಳಸಿದರೆ ನಿಮ್ಮ ವೈಯಕ್ತಿಕ ವಿವರಗಳನ್ನು ದುಷ್ಕರ್ಮಿಗಳು ಕದಿಯಬಹುದು.

ಆದ್ದರಿಂದ ಹಳೆಯ ಮೊಬೈಲ್ ಖರೀದಿಸಿದ ಬಳಿಕ ಮೊದಲು ಆ ಮೊಬೈಲ್​ನ ತಂತ್ರಾಂಶವನ್ನು ಅಪ್​ಡೇಟ್ ಮಾಡಿ. ಒಳ್ಳೆಯ ಸೆಕ್ಯೂರಿಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ