ಭಾರತದಲ್ಲಿ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಬಿಡುಗಡೆ: ಇದು ಕಡಿಮೆ ಬೆಲೆಯ ಮಡಚುವ ಫೋನ್

Tecno Phantom V Flip 5G Launched in India: ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಅನ್ನು ಐಕಾನಿಕ್ ಬ್ಲ್ಯಾಕ್ ಮತ್ತು ಮಿಸ್ಟಿಕ್ ಡಾನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಹ್ಯಾಂಡ್‌ಸೆಟ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಶೇಖರಣಾ ಆಯ್ಕೆಗೆ ಭಾರತದಲ್ಲಿ 49,999 ರೂ. ನಿಗದಿ ಮಾಡಲಾಗಿದೆ.

ಭಾರತದಲ್ಲಿ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಬಿಡುಗಡೆ: ಇದು ಕಡಿಮೆ ಬೆಲೆಯ ಮಡಚುವ ಫೋನ್
tecno phantom v flip 5g
Follow us
Vinay Bhat
|

Updated on: Sep 22, 2023 | 3:23 PM

ಕಳೆದ ಕೆಲವು ವಾರಗಳಿಂದ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಟೆಕ್ನೋ ಕಂಪನಿಯ ನೂತನ ಮಡಚುವ ಫೋನ್ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5 ಜಿ (Tecno Phantom V Flip 5G) ಇದೀಗ ಭಾರತದಲ್ಲಿ ಅನಾವರಣಗೊಂಡಿದೆ. ಇದು ಕಂಪನಿಯ ಎರಡನೇ ಮಡಚಬಹುದಾದ ಸ್ಮಾರ್ಟ್‌ಫೋನ್ ಆಗಿದೆ. ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಬಿಡುಗಡೆ ಮಾಡಲಾಗಿತ್ತು. ಹೊಸ ಫ್ಯಾಂಟಮ್ ವಿ ಫ್ಲಿಪ್ ವೃತ್ತಾಕಾರದ ಹೊರ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಮತ್ತು ಹಿಂಬದಿಯ ಕ್ಯಾಮೆರಾ ಘಟಕವು ಇದನ್ನು ಸುತ್ತುವರಿದಿದೆ. ಈ ಫೋನಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಬೆಲೆ, ಲಭ್ಯತೆ:

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಅನ್ನು ಐಕಾನಿಕ್ ಬ್ಲ್ಯಾಕ್ ಮತ್ತು ಮಿಸ್ಟಿಕ್ ಡಾನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಹ್ಯಾಂಡ್‌ಸೆಟ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಶೇಖರಣಾ ಆಯ್ಕೆಗೆ ಭಾರತದಲ್ಲಿ 49,999 ರೂ. ನಿಗದಿ ಮಾಡಲಾಗಿದೆ. ಈ ಫೋಲ್ಡಬಲ್ ಫೋನ್ ಅಮೆಜಾನ್‌ನಲ್ಲಿ ಅಕ್ಟೋಬರ್ 1 ರಿಂದ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ.

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಫೀಚರ್ಸ್:

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಸ್ಮಾರ್ಟ್​ಫೋನ್ 6.9-ಇಂಚಿನ ಪೂರ್ಣ-HD+ (2400 x 1080 ಪಿಕ್ಸೆಲ್‌ಗಳು) AMOLED ಒಳಗಿನ ಡಿಸ್‌ಪ್ಲೇಯನ್ನು ಹೊಂದಿದೆ. 1000nits ನ ಬ್ರೈಟ್‌ನೆಸ್ ಮಟ್ಟದೊಂದಿಗೆ ಬರುತ್ತದೆ. ಆನ್ ಡಿಸ್ ಪ್ಲೇ ವೈಶಿಷ್ಟ್ಯದೊಂದಿಗೆ ವೃತ್ತಾಕಾರದ AMOLED ಕವರ್ ಪ್ಯಾನೆಲ್ 1.32 ಇಂಚುಗಳಿಂದ ಕೂಡಿದೆ. ಕವರ್ ಪರದೆಯಿಂದ ಬಳಕೆದಾರರು ನೋಟಿಫಿಕೇಷನ್​ಗೆ ಪ್ರತ್ಯುತ್ತರಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ
Image
ಭಾರತದಲ್ಲಿ ವಿವೋ T2 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಏನಿದೆ ನೋಡಿ
Image
200MP ಕ್ಯಾಮೆರಾ, 120W ಚಾರ್ಜರ್: ರೆಡ್ಮಿ ನೋಟ್ 13 ಸರಣಿ ಬಿಡುಗಡೆ: ಬೆಲೆ?
Image
ಇಂದಿನಿಂದ ಐಫೋನ್ 15 ಸರಣಿ ಮಾರಾಟ ಆರಂಭ: ಯಾವುದರಲ್ಲಿ ಖರೀದಿಸಬಹುದು?
Image
ಹಳೆಯ ಫೋನ್ ಖರೀದಿಸಿದಾಗ ಏನೇನು ಪರಿಶೀಲಿಸಬೇಕು? ಈ ಮಾಹಿತಿ ತಿಳಿದಿರಿ

ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಕರ್ನಾಟಕ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಯಿಂದ Arm Mali-G77 GPU ನೊಂದಿಗೆ ಜೋಡಿಸಲಾಗಿದೆ, 8GB ಯ LPDDR4X RAM ಅನ್ನು 16GB ವರೆಗೆ ವರ್ಚುವಲ್ ಆಗಿ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 13.5 ನೊಂದಿಗೆ ರನ್ ಆಗುತ್ತದೆ ಮತ್ತು ಎರಡು ವರ್ಷಗಳ OS ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುತ್ತದೆ.

ಫ್ಯಾಂಟಮ್ ವಿ ಫ್ಲಿಪ್‌ನ ಹಿಂಬದಿಯ ಕ್ಯಾಮೆರಾ ಘಟಕವು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ವೈಡ್-ಆಂಗಲ್ ಲೆನ್ಸ್‌ನೊಂದಿಗೆ 13-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿದೆ. ಇದು ಕ್ವಾಡ್ ಫ್ಲ್ಯಾಶ್‌ಲೈಟ್ ಘಟಕದೊಂದಿಗೆ ಇರುತ್ತದೆ. ಮುಂಭಾಗದ ಕ್ಯಾಮೆರಾವನ್ನು ಪ್ರಾಥಮಿಕ ಡಿಸ್ ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ಜೋಡಿಸಲಾಗಿದೆ ಮತ್ತು 32-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಈ ಫೋನ್ 4,000mAh ಬ್ಯಾಟರಿಯನ್ನು ಹೊಂದಿದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಆಗಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G, Wi-Fi 6, NFC ಮತ್ತು ಬ್ಲೂಟೂತ್ 5.1 ಸಂಪರ್ಕದ ಜೊತೆಗೆ ಎಲ್ಲಾ GPT 3.0 ಅನ್ನು ಸಹ ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ