ಭಾರತಕ್ಕೆ ಬರುತ್ತಿದೆ ಹೊಸ ಫ್ಲಿಪ್ ಫೋನ್: ಸೋರಿಕೆ ಆಯಿತು ರೋಚಕ ವಿಷಯ

Tecno Phantom V Flip 5G India Launch: ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಸ್ಮಾರ್ಟ್​ಫೋನ್ ಮೈಕ್ರೋಸೈಟ್ ಈಗ ಅಮೆಜಾನ್​ನಲ್ಲಿ ಶುರುವಾಗಿದೆ. ಈ ಮೂಲಕ ಪ್ರಸಿದ್ಧ ಇ ಕಾಮರ್ಸ್ ತಾಣದಲ್ಲಿ ಸೇಲ್ ಕಾಣುವುದು ಖಚಿತವಾಗಿದೆ. ಆದರೆ, ಕಂಪನಿಯು ಭಾರತದಲ್ಲಿ ಫೋನ್‌ನ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ಭಾರತಕ್ಕೆ ಬರುತ್ತಿದೆ ಹೊಸ ಫ್ಲಿಪ್ ಫೋನ್: ಸೋರಿಕೆ ಆಯಿತು ರೋಚಕ ವಿಷಯ
Tecno Phantom V Flip 5G
Follow us
Vinay Bhat
|

Updated on: Sep 18, 2023 | 1:56 PM

ಭಾರತದಲ್ಲಿ ಫ್ಲಿಪ್, ಫೋಲ್ಡೆಬಲ್ ಸ್ಮಾರ್ಟ್​ಫೋನ್​ಗಳ ಹಾವಳಿ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಸ್ಯಾಮ್​ಸಂಗ್ ಕಂಪನಿ ಕೂಡ ಫ್ಲಿಪ್ ಮತ್ತು ಫೊಲ್ಡೆಬಲ್ ಫೋನನ್ನು ಅನಾವರಣ ಮಾಡಿತ್ತು. ಒನ್​ಪ್ಲಸ್​ನ ಚೊಚ್ಚಲ ಮಡಚುವ ಫೋನ್ ತಯಾರಾಗುತ್ತಿದೆ. ಇದರ ನಡುವೆ ಪ್ರಸಿದ್ಧ ಟೆಕ್ನೋ ಕಂಪನಿ ತನ್ನ ಹೊಸ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G (Tecno Phantom V Flip 5G) ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸೆಪ್ಟೆಂಬರ್ 22 ರಂದು ಸಿಂಗಾಪುರದಲ್ಲಿ ಈ ಫೋನ್ ಬಿಡುಗಡೆ ಆಗಲಿದೆ. ಇದಾದ ಕೆಲವೇ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆ ಆಗಲಿದೆ.

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಭಾರತ ಬಿಡುಗಡೆ, ಲಭ್ಯತೆ:

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಸ್ಮಾರ್ಟ್​ಫೋನಿನ ಮೈಕ್ರೋಸೈಟ್ ಈಗ ಅಮೆಜಾನ್​ನಲ್ಲಿ ಶುರುವಾಗಿದೆ. ಈ ಮೂಲಕ ಪ್ರಸಿದ್ಧ ಇ ಕಾಮರ್ಸ್ ತಾಣದಲ್ಲಿ ಸೇಲ್ ಕಾಣುವುದು ಖಚಿತವಾಗಿದೆ. ಆದರೆ, ಕಂಪನಿಯು ಭಾರತದಲ್ಲಿ ಫೋನ್‌ನ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಫೀಚರ್ಸ್:

X ನಲ್ಲಿ (ಟ್ವಿಟ್ಟರ್), ಟಿಪ್‌ಸ್ಟರ್ ಪಾರಸ್ ಗುಗ್ಲಾನಿ ಅವರು AD11 ಮಾದರಿ ಸಂಖ್ಯೆಯನ್ನು ಹೊಂದಿರುವ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಯ ಕೆಲ ಫೀಚರ್​ಗಳನ್ನು ಹಂಚಿಕೊಂಡಿದ್ದಾರೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಚಿಪ್‌ಸೆಟ್ ಅನ್ನು ಹೊಂದಿದ್ದು, ಗೂಗಲ್ ಪ್ಲೇ ಕನ್ಸೋಲ್ ಪಟ್ಟಿಯ ಮೂಲಕ ಹೈಲೈಟ್ ಮಾಡಬಲಾಗಿದೆ. ಚಾರ್ಜಿಂಗ್ ವಿವರಗಳಿಗೆ ಸಂಬಂಧಿಸಿದಂತೆ, ಇದು 66W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡುತ್ತದೆ.

ಇದನ್ನೂ ಓದಿ
Image
ಜಿಯೋ ಬಂಪರ್ ಪ್ಲಾನ್: ಕೇವಲ 123 ರೂ. ರಿಚಾರ್ಜ್ ಮಾಡಿದ್ರೆ 14GB ಡೇಟಾ
Image
ಐಫೋನ್ 15 ಅಥವಾ ಐಫೋನ್ 14? ಯಾವುದು ಬೆಸ್ಟ್?
Image
ಭಾರತದಲ್ಲಿ ಇಂದಿನಿಂದ ಖರೀದಿಸಬಹುದು 200MP ಕ್ಯಾಮೆರಾದ ಹಾನರ್ 90 ಫೋನ್
Image
ಬಿಡುಗಡೆಗೆ ಸಿದ್ಧವಾದ ಶವೋಮಿ ಕಂಪನಿಯ ಅತ್ಯಂತ ದುಬಾರಿ ಸ್ಮಾರ್ಟ್​ಫೋನ್

ಏರ್‌ಟೆಲ್​ನಿಂದ ಧಮಾಕ ಪ್ರಿಪೇಯ್ಡ್ ಪ್ಲಾನ್: ಪ್ರತಿದಿನ 2GB ಡೇಟಾ ಆನಂದಿಸಿ

ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಎರಡು ಕ್ಯಾಮೆರಾಗಳು ಮತ್ತು ಎಲ್‌ಇಡಿ ಫ್ಲ್ಯಾಷ್ ಹೊಂದಿರುವ ವೃತ್ತಾಕಾರದ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಇದು ಆಟೋಫೋಕಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 13-ಮೆಗಾಪಿಕ್ಸೆಲ್ ಸಂವೇದಕದಿಂದ ಕೂಡಿದೆ. ಮುಂಭಾಗದ ಕ್ಯಾಮೆರಾ 32-ಮೆಗಾಪಿಕ್ಸೆಲ್ ಇರಬಹುದು.

2640 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 466 x 466 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 1.32-ಇಂಚಿನ AMOLED ಕವರ್ ಡಿಸ್ ಪ್ಲೇಯೊಂದಿಗೆ 6.9-ಇಂಚಿನ AMOLED ಒಳಗಿನ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಎರಡೂ ಡಿಸ್ಪ್ಲೇಗಳು 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಇತ್ತೀಚಿನ ವರದಿಯ ಪ್ರಕಾರ ಈ ಫೋನಿನ ಬೆಲೆ ಭಾರತದಲ್ಲಿ ಸುಮಾರಿ 50,000 ರೂ. ಇರಬಹುದು ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ