ಜಿಯೋ ಬಂಪರ್ ಪ್ಲಾನ್: ಕೇವಲ 123 ರೂ. ರಿಚಾರ್ಜ್ ಮಾಡಿದ್ರೆ 14GB ಡೇಟಾ, 1 ತಿಂಗಳು ಉಚಿತ ಕರೆ

Jio Prepaid Plans: ಜಿಯೋ ತನ್ನ ಬಳಕೆದಾರರಿಗೆ ಕೇವಲ 123 ರೂ. ಗಳ ಅತ್ಯುತ್ತಮ ಯೋಜನೆಯನ್ನು ತಂದಿದೆ. ಕಡಿಮೆ ವೆಚ್ಚದಲ್ಲಿ ಸ್ವಲ್ಪ ಹೆಚ್ಚು ಮಾನ್ಯತೆಗಾಗಿ ನೋಡುತ್ತಿರುವವರಿಗೆ ಈ ರಿಚಾರ್ಜ್ ಯೋಜನೆ ಉತ್ತಮವಾಗಿದೆ. ಜಿಯೋ ಬಳಕೆದಾರರು 123 ರೂ. ಯೋಜನೆಯಲ್ಲಿ 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಆಫರ್‌ನಲ್ಲಿ ಇನ್ನೇನು ಇದೆ ಎಂಬುದನ್ನು ಪರಿಶೀಲಿಸಿ.

ಜಿಯೋ ಬಂಪರ್ ಪ್ಲಾನ್: ಕೇವಲ 123 ರೂ. ರಿಚಾರ್ಜ್ ಮಾಡಿದ್ರೆ 14GB ಡೇಟಾ, 1 ತಿಂಗಳು ಉಚಿತ ಕರೆ
ಜಿಯೋ
Follow us
|

Updated on: Sep 18, 2023 | 12:22 PM

ಟೆಲಿಕಾಂ ವಲಯದಲ್ಲಿ ಅಗ್ಗದ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡಿದರೆ, ರಿಲಯನ್ಸ್ ಜಿಯೋ (Reliance Jio) ಮೊದಲು ಸ್ಥಾನದಲ್ಲಿ ನಿಲ್ಲುತ್ತದೆ. ಜಿಯೋ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಅನೇಕ ರಿಚಾರ್ಜ್ ಪ್ಯಾಕ್‌ಗಳನ್ನು ಹೊಂದಿದೆ. ಆದಾಗ್ಯೂ, ಜಿಯೋ ಕಂಪನಿಯ ಅಗ್ಗದ ಪ್ರಿಪೇಯ್ಡ್ ಯೋಜನೆಗಳು ದೇಶದಲ್ಲಿ ಬಹಳ ಜನಪ್ರಿಯವಾಗಿವೆ. ಅಲ್ಲದೆ, ಜಿಯೋದ ವಾರ್ಷಿಕ ಯೋಜನೆಗಳ ಮಾಸಿಕ ವೆಚ್ಚದ ಲೆಕ್ಕಾಚಾರವನ್ನು ನೀವು ನೋಡಿದರೆ, ವೆಚ್ಚವು ತುಂಬಾ ಕಡಿಮೆಯಾಗುತ್ತದೆ.

ಜಿಯೋ ತನ್ನ ಬಳಕೆದಾರರಿಗೆ ಕೇವಲ 123 ರೂ. ಗಳ ಅತ್ಯುತ್ತಮ ಯೋಜನೆಯನ್ನು ತಂದಿದೆ. ಕಡಿಮೆ ವೆಚ್ಚದಲ್ಲಿ ಸ್ವಲ್ಪ ಹೆಚ್ಚು ಮಾನ್ಯತೆಗಾಗಿ ನೋಡುತ್ತಿರುವವರಿಗೆ ಈ ರಿಚಾರ್ಜ್ ಯೋಜನೆ ಉತ್ತಮವಾಗಿದೆ. ಈ ಆಫರ್ ಸದ್ಯಕ್ಕೆ ಜಿಯೋ ಭಾರತ್ ಫೋನ್​ನಲ್ಲಿ ಮಾತ್ರ ಲಭ್ಯವಿದೆ. ಜಿಯೋ ಬಳಕೆದಾರರು 123 ರೂ. ಯೋಜನೆಯಲ್ಲಿ 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಆಫರ್‌ನಲ್ಲಿ ಇನ್ನೇನು ಇದೆ ಎಂಬುದನ್ನು ಪರಿಶೀಲಿಸಿ.

ಸುಮಾರು ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ, ಜಿಯೋದ ಈ 123 ರೂ. ಅಗ್ಗದ ಯೋಜನೆ ಉಚಿತ ಕರೆ ಜೊತೆಗೆ ಉತ್ತಮ ಪ್ರಮಾಣದ ಡೇಟಾವನ್ನು ಹುಡುಕುತ್ತಿರುವವರಿಗಾಗಿ ತರಲಾಗಿದೆ. ಜಿಯೋ ಬಳಕೆದಾರರು ದಿನಕ್ಕೆ 500MB ಡೇಟಾವನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ 14GB ಡೇಟಾವನ್ನು ನೀಡಲಾಗಿದೆ.

ಇದನ್ನೂ ಓದಿ

ಪೋಕೋ M6 ಪ್ರೊ 5G ಭರ್ಜರಿ ಮಾರಾಟ: ದಿಢೀರ್ ಆಗಿ ಹೊಸ ರೂಪಾಂತರ ಬಿಡುಗಡೆ

28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯೊಂದಿಗೆ, ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಉಚಿತ SMS ಕೊಡುಗೆಯನ್ನು ಸಹ ಪಡೆಯುತ್ತಾರೆ. ಕಡಿಮೆ ವೆಚ್ಚದಲ್ಲಿ 28 ದಿನಗಳವರೆಗೆ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಲು 123 ರೂಪಾಯಿಗಳ ಪ್ಲಾನ್ ಉತ್ತಮ ಆಯ್ಕೆ ಆಗಿದೆ.

ಇನ್ನು ಜಿಯೋ 1234 ರೂಪಾಯಿಗಳ ವಾರ್ಷಿಕ ಯೋಜನೆಯನ್ನು ಸಹ ಹೊಂದಿದೆ. ಈ ಪ್ಯಾಕ್ ರೀಚಾರ್ಜ್ ಮಾಡಿದರೆ ಇಡೀ ವರ್ಷ ರಿಚಾರ್ಜ್ ಮಾಡುವ ಚಿಂತೆ ಇರುವುದಿಲ್ಲ. ಒಂದು ವರ್ಷದ ಯೋಜನೆಯಲ್ಲಿ ಅಂದರೆ 365 ದಿನಗಳವರೆಗೆ ನೀವು ಅನಿಯಮಿತ ಕರೆ ಸೇರಿದಂತೆ ಹಲವು ಕೊಡುಗೆಗಳನ್ನು ಪಡೆಯುತ್ತೀರಿ. ಬಹು ಮುಖ್ಯವಾಗಿ, ಈ ಯೋಜನೆಯಲ್ಲಿ ಬಳಕೆದಾರರು 128GB ಡೇಟಾವನ್ನು ಪಡೆಯುತ್ತಾರೆ. ನೀವು ಹೆಚ್ಚಿನ ಡೇಟಾವನ್ನು ಪಡೆಯುವುದಿಲ್ಲ ಎಂಬುದು ನಿಜ, ಆದರೆ ನೀವು ಒಂದು ವರ್ಷದವರೆಗೆ ಉಚಿತ ಕರೆಗಳನ್ನು ಮಾಡಲು ಬಯಸಿದರೆ, ಜಿಯೋದ ಈ 1234 ರೂ. ಯೋಜನೆಯು ಉತ್ತಮವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!