- Kannada News Photo gallery 200 mega pixel camera smartphone Honor 90 5G Sale start today in India via Amazon
ಭಾರತದಲ್ಲಿ ಇಂದಿನಿಂದ ಖರೀದಿಸಬಹುದು 200MP ಕ್ಯಾಮೆರಾದ ಹಾನರ್ 90 ಫೋನ್
Honor 90 5G First Sale in India Today: ಭಾರತದಲ್ಲಿ ಹಾನರ್ 90 5G ಸ್ಮಾರ್ಟ್ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಈ ಫೋನ್ ದೇಶದಲ್ಲಿ ಇಂದಿನಿಂದ (ಸೆಪ್ಟೆಂಬರ್ 18) ಮಧ್ಯಾಹ್ನ 12 ಗಂಟೆಗೆ ಹಾನರ್ನ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಮೊದಲ ಸೇಲ್ ಪ್ರಯುಕ್ತ ಇ-ಕಾಮರ್ಸ್ ಸೈಟ್ನಲ್ಲಿ 2,000 ರೂ. ಗಳ ವಿನಿಮಯ ರಿಯಾಯಿತಿಯನ್ನು ನೀಡಲಾಗಿದೆ.
Updated on: Sep 18, 2023 | 6:55 AM

ಭಾರತದಲ್ಲಿ ಬಿಡುಗಡೆಗೂ ಮುನ್ನ, ಕಳೆದ ಒಂದು ತಿಂಗಳುಗಳಿಂದ ಸಾಕಷ್ಟು ಕುತೂಹಲ ಕೆರಳಿಸಿದ್ದ ಹಾನರ್ ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಹಾನರ್ 90 5G (Honor 90 5G) ಕಳೆದ ವಾರವಷ್ಟೆ ಅನಾವರಣಗೊಂಡಿತ್ತು. ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆಯೊಂದಿಗೆ ಬಿಡುಗಡೆyಆದ ಈ ಫೋನ್ ಇಂದಿನಿಂದ ಖರೀದಿಗೆ ಸಿಗಲಿದೆ.

ಈ ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ನ ಬಲಿಷ್ಠ ಪ್ರೊಸೆಸರ್ ಹೊಂದಿದ್ದು, 66W ವೈರ್ಡ್ ಸೂಪರ್‌ಚಾರ್ಜ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿ ಕೂಡ ಇದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಹಾನರ್ 90 5G ಸ್ಮಾರ್ಟ್ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಇದರ 8GB + 256GB ರೂಪಾಂತರಕ್ಕೆ 37,999 ರೂ. ಇದೆ. ಅಂತೆಯೆ 12GB + 512GB ಸ್ಟೋರೇಜ್ ರೂಪಾಂತರದ ಬೆಲೆ 39,999 ರೂ. ಆಗಿದೆ.

ಈ ಫೋನ್ ದೇಶದಲ್ಲಿ ಇಂದಿನಿಂದ (ಸೆಪ್ಟೆಂಬರ್ 18) ಮಧ್ಯಾಹ್ನ 12 ಗಂಟೆಗೆ ಹಾನರ್ನ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಮೊದಲ ಸೇಲ್ ಪ್ರಯುಕ್ತ ಇ-ಕಾಮರ್ಸ್ ಸೈಟ್ನಲ್ಲಿ 2,000 ರೂ. ಗಳ ವಿನಿಮಯ ರಿಯಾಯಿತಿಯನ್ನು ನೀಡಲಾಗಿದೆ.

ಖರೀದಿಯ ಸಮಯದಲ್ಲಿ ಐಸಿಐಸಿಐ ಮತ್ತು ಎಸ್‌ಬಿಐ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು 3,000 ರೂ. ಗಳ ಹೆಚ್ಚುವರಿ ತ್ವರಿತ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾನರ್ 90 5G ಅನ್ನು ಡೈಮಂಡ್ ಸಿಲ್ವರ್, ಎಮರಾಲ್ಡ್ ಗ್ರೀನ್ ಮತ್ತು ಮಿಡ್ನೈಟ್ ಬ್ಲಾಕ್ ಬಣ್ಣ ಆಯ್ಕೆಗಳಲ್ಲಿ ನಿಮ್ಮದಾಗಿಸಬಹುದು.

ಹಾನರ್ 90 5G ಸ್ಮಾರ್ಟ್ಫೋನ್ 1.5K (2664 x 1200 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ವರೆಗೆ ರಿಫ್ರೆಶ್ ದರವನ್ನು ಮತ್ತು 1,600 nits ನ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ. ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 1 SoC ಯಿಂದ Adreno 644 GPU ನೊಂದಿಗೆ ಜೋಡಿಸಲ್ಪಟ್ಟಿದೆ.

ಈ ಫೋನ್ ಹಾನರ್ ಇಮೇಜ್ ಎಂಜಿನ್ ಬೆಂಬಲದೊಂದಿಗೆ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 12-ಮೆಗಾಪಿಕ್ಸೆಲ್ ಸಂವೇದಕ ಮತ್ತು ಎಲ್ಇಡಿ ಫ್ಲ್ಯಾಷ್ ಯೂನಿಟ್ ಜೊತೆಗೆ ಮ್ಯಾಕ್ರೋ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಸಂವೇದಕ ಕೂಡ ಇದೆ. ಸೆಲ್ಫಿಗಾಗಿ 50-ಮೆಗಾಪಿಕ್ಸೆಲ್ ಸಂವೇದಕವನ್ನು ಅಳವಡಿಸಲಾಗಿದೆ.

ಹಾನರ್ 90 5G ಫೋನ್ 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ, ಫೋನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.2, NFC, GPS ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ.



















