AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆಗೆ ಸಿದ್ಧವಾದ ಶವೋಮಿ ಕಂಪನಿಯ ಅತ್ಯಂತ ದುಬಾರಿ ಸ್ಮಾರ್ಟ್​ಫೋನ್: ಯಾವುದು ನೋಡಿ

Xiaomi 14 and Xiaomi 14 Pro launch Date: ಶವೋಮಿ 14 ಸರಣಿ ಅಡಿಯಲ್ಲಿ ಶವೋಮಿ 14 ಮತ್ತು ಶವೋಮಿ 14 ಪ್ರೊ ಎಂಬ ಎರಡು ಮಾದರಿಗಳನ್ನು ಒಳಗೊಂಡಿರುತ್ತದೆ. ನಿಖರವಾದ ಬಿಡುಗಡೆ ದಿನಾಂಕ ಇನ್ನೂ ತಿಳಿದಿಲ್ಲವಾದರೂ, ನವೆಂಬರ್ 11 ರ ಮೊದಲು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನಿಗಳ ಬೆಲೆ ಅತ್ಯಂತ ದುಬಾರಿ ಆಗಿರಲಿದೆಯಂತೆ.

ಬಿಡುಗಡೆಗೆ ಸಿದ್ಧವಾದ ಶವೋಮಿ ಕಂಪನಿಯ ಅತ್ಯಂತ ದುಬಾರಿ ಸ್ಮಾರ್ಟ್​ಫೋನ್: ಯಾವುದು ನೋಡಿ
Xiaomi 14 Series
Vinay Bhat
|

Updated on: Sep 17, 2023 | 2:07 PM

Share

ಈ ವರ್ಷದ ಫೆಬ್ರವರಿಯಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಶವೋಮಿ 13 ಪ್ರೊ ಸ್ಮಾರ್ಟ್​ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಇಲ್ಲಿಯವರೆಗೆ ಭಾರತದಲ್ಲಿ ಶವೋಮಿ ಪರಿಚಯಿಸಿದ ಅತ್ಯಂತ ದುಬಾರಿ ಫೋನ್ ಇದಾಗಿದೆ. ಪ್ರಮುಖ ಫೋನ್ ವಿಮರ್ಶಕರು ಮತ್ತು ಬಳಕೆದಾರರಿಂದ ಈ ಫೋನಿಗೆ ಉತ್ತಮ ವಿಮರ್ಶೆಗಳು ಕೇಳಿ ಬಂದಿದ್ದವು. ಈಗ, ಶವೋಮಿ ಸಂಸ್ಥೆ ತನ್ನ ಮುಂದಿನ ವರ್ಷನ್ ಶವೋಮಿ 14 ಸರಣಿಯ (Xiaomi 14 Series) ಜಾಗತಿಕ ಬಿಡುಗಡೆಗೆ ಸಜ್ಜಾಗಿದೆ. ಈ ಫೋನಿಗಳ ಬೆಲೆ ಕೂಡ ಅತ್ಯಂತ ದುಬಾರಿ ಆಗಿರಲಿದೆಯಂತೆ.

ಶವೋಮಿ 14 ಸರಣಿ ಅಡಿಯಲ್ಲಿ ಶವೋಮಿ 14 ಮತ್ತು ಶವೋಮಿ 14 ಪ್ರೊ ಎಂಬ ಎರಡು ಮಾದರಿಗಳನ್ನು ಒಳಗೊಂಡಿರುತ್ತದೆ. ನಿಖರವಾದ ಬಿಡುಗಡೆ ದಿನಾಂಕ ಇನ್ನೂ ತಿಳಿದಿಲ್ಲವಾದರೂ, ನವೆಂಬರ್ 11 ರ ಮೊದಲು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಚೀನಾದಲ್ಲಿ ಒಂದು ಪ್ರಮುಖ ದಿನಾಂಕವಾಗಿದ್ದು, ಡಬಲ್ ಇಲೆವೆನ್ ಮಾರಾಟದ ಈವೆಂಟ್ ನಡೆಯುವ ಸಮಯವಾಗಿದೆ. ನವೆಂಬರ್ 11 ಅನ್ನು ಚೀನಾದಲ್ಲಿ ಸಿಂಗಲ್ಸ್ ಡೇ ಎಂದೂ ಕರೆಯಲಾಗುತ್ತದೆ. ಆ ಸಂದರ್ಭ ಜನಪ್ರಿಯ ಶಾಪಿಂಗ್ ಸೀಸನ್ ಆಗಿದೆ. ಹೀಗಾಗಿ ನ. 11 ರಂದು ಅನಾವರಣಗೊಳ್ಳಲಿದೆಯಂತೆ.

ಸ್ಮಾರ್ಟ್​ಫೋನ್ ಬ್ಯಾಟರಿ ದಪ್ಪಗಾಗಿದ್ದರೆ ಕಡೆಗಣಿಸಬೇಡಿ: ತಕ್ಷಣ ಹೀಗೆ ಮಾಡಿ

ಇದನ್ನೂ ಓದಿ
Image
ಏರ್‌ಟೆಲ್​ನಿಂದ ಬಂಪರ್ ಪ್ರಿಪೇಯ್ಡ್ ಪ್ಲಾನ್: ಪ್ರತಿದಿನ 2GB ಡೇಟಾ ಆನಂದಿಸಿ
Image
ಪೋಕೋ M6 ಪ್ರೊ 5G ಭರ್ಜರಿ ಮಾರಾಟ: ದಿಢೀರ್ ಆಗಿ ಹೊಸ ರೂಪಾಂತರ ಬಿಡುಗಡೆ
Image
ಭಾರತದ ಪ್ರಧಾನಿಗೆ ಒಟ್ಟು ಎಷ್ಟು ಫಾಲೋವರ್ಸ್ ಇದ್ದಾರೆ ನೋಡಿ
Image
ಆ್ಯಪಲ್ ಐಫೋನ್ 15 ಖರೀದಿಗೆ HDFC ಆಫರ್!

ಶವೋಮಿ 14 6.4-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ ಎಂದು ವರದಿಯಾಗಿದೆ. ಅಂತೆಯೆ ಶವೋಮಿ 14 Pro ದೊಡ್ಡದಾದ, 6.7-ಇಂಚಿನ ಡಿಸ್ ಪ್ಲೇ ಹೊಂದಿರುತ್ತದೆ. ಎರಡೂ ಫೋನ್‌ಗಳು 522 ppi ಜೊತೆಗೆ 1440 x 3200 ಪಿಕ್ಸೆಲ್‌ಗಳ ರೆಸಲ್ಯೂಶನ್​ನಿಂದ ಕೂಡಿದೆ. ಈ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸದೊಂದಿಗೆ ಬರುತ್ತವೆ. ಶವೋಮಿ ಆಂಡ್ರಾಯ್ಡ್ 14 ಅನ್ನು ಆಧರಿಸಿದ MIUI 15 ಅನ್ನು ಪರೀಕ್ಷಿಸುತ್ತಿದೆ. ಇದರ ಜೊತೆಗೆ, ಎರಡೂ ಫೋನ್‌ಗಳು ಇನ್ನೂ ಲಾಂಚ್ ಆಗದ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ.

ಶವೋಮಿ 14 4860 mAh ಬ್ಯಾಟರಿಯನ್ನು ಹೊಂದಿದೆ ಮತ್ತು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು. OIS ನೊಂದಿಗೆ ಮೂರು 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಈ ಫೋನ್‌ನ ಬೆಲೆ 54,999 ರೂ. ಇರಬಹುದು ಎನ್ನಲಾಗಿದೆ.

ಶವೋಮಿ 14 Pro ಗೆ ಬಂದರೆ, ಈ ಫೋನ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯೊಂದಿಗೆ ಬರಬಹುದು. ಕೆಲವು ವರದಿಗಳ ಪ್ರಕಾರ ಇದು ಟೈಟಾನಿಯಂ ನಿರ್ಮಾಣವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಇದನ್ನು ಐಫೋನ್ 15 ಪ್ರೊನಲ್ಲಿ ಬಳಸಲಾಗಿದೆ. ಆದರೆ, ಇವೆಲ್ಲವೂ ಕೇವಲ ವದಂತಿಗಳು ಎಂಬುದು ಗಮನಿಸಬೇಕಾದ ಸಂಗತಿ. ಸ್ಮಾರ್ಟ್​ಫೋನ್​ನ ನಿಖರವಾದ ಬಿಡುಗಡೆ ದಿನಾಂಕ ಮತ್ತು ಫೀಚರ್ಸ್ ಬಗ್ಗೆ ಕಂಪನಿ ಅಧಿಕೃತವಾಗಿ ಪ್ರಕಟಿಸಬೇಕಷ್ಟೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್