ಪೋಕೋ M6 ಪ್ರೊ 5G ಭರ್ಜರಿ ಮಾರಾಟ: ದಿಢೀರ್ ಆಗಿ ಹೊಸ ರೂಪಾಂತರ ಬಿಡುಗಡೆ
POCO M6 Pro 4GB+128GB variant has been launched: ಪೋಕೋ M6 ಪ್ರೊ 5G ಸ್ಮಾರ್ಟ್ಫೋನ್ನ ನೂತನ ರೂಪಾಂತರ 4GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 11,999 ರೂ. ನಿಗದಿ ಮಾಡಲಾಗಿದೆ. ಈ ಹಿಂದೆ 4GB RAM + 64GB ಮತ್ತು 6GB RAM + 128GB ರೂಪಾಂತರಗಳು ಬಿಡುಗಡೆ ಆಗಿತ್ತು.
ಪೋಕೋ ಸಂಸ್ಥೆಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಬಜೆಟ್ ಬೆಲೆಗೆ ಆಕರ್ಷಕ ಫೀಚರ್ಗಳ ಫೋನನ್ನು ಪರಿಚಯಿಸುತ್ತಿರುವ ಪೋಕೋ, ಕಳೆದ ತಿಂಗಳು ದೇಶದಲ್ಲಿ ಹೊಸ ಪೋಕೋ M6 ಪ್ರೊ (Poco M6 Pro 5G) ಎಂಬ 5ಜಿ ಫೋನನ್ನು ಅನಾವರಣ ಮಾಡಿತ್ತು. ಇದು ರೆಡ್ಮಿ ನೋಟ್ 12R ನ ಮರುಬ್ರಾಂಡ್ ಆಗಿದೆ. ಬಿಡುಗಡೆ ಆದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ ಕೇವಲ ಎರಡು RAM/ಸ್ಟೋರೇಜ್ ಮಾದರಿಗಳಲ್ಲಿ ಮಾತ್ರ ನೀಡಲಾಗಿತ್ತು. ಇದೀಗ ಈ ಫೋನಿಗೆ ಭರ್ಜರಿ ಬೇಡಿಕೆ ಇರುವ ಕಾರಣ 4GB + 128GB ರೂಪಾಂತರವನ್ನು ಪರಿಚಯಿಸಿದೆ.
ಭಾರತದಲ್ಲಿ ಪೋಕೋ M6 ಪ್ರೊ 5G ಬೆಲೆ, ಮಾರಾಟ:
ಪೋಕೋ M6 ಪ್ರೊ 5G ಸ್ಮಾರ್ಟ್ಫೋನ್ನ ನೂತನ ರೂಪಾಂತರ 4GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 11,999 ರೂ. ನಿಗದಿ ಮಾಡಲಾಗಿದೆ. ಈ ಹಿಂದೆ 4GB RAM + 64GB ಮತ್ತು 6GB RAM + 128GB ರೂಪಾಂತರಗಳು ಬಿಡುಗಡೆ ಆಗಿತ್ತು. ಇವುಗಳ ಬೆಲೆ ಕ್ರಮವಾಗಿ 10,999 ಮತ್ತು 12,999 ರೂ. ಆಗಿದೆ. ಹೊಸ ರೂಪಾಂತರವು ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ. ಈ ಫೋನ್ ಅನ್ನು ಫಾರೆಸ್ಟ್ ಗ್ರೀನ್ ಮತ್ತು ಪವರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.
ಪೋಕೋ M6 ಪ್ರೊ 5G ಫೀಚರ್ಸ್:
ಡಿಸ್‌ಪ್ಲೇ: ಪೋಕೋ M6 ಪ್ರೊ 5G ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದುಕೊಂಡಿದೆ.
BMW ಡಿಸೈನ್‌ವರ್ಕ್ಸ್‌ನೊಂದಿಗೆ ಬಿಡುಗಡೆ ಆಯಿತು ಹೊಸ ಇನ್ಫಿನಿಕ್ಸ್ ನೋಟ್ 30 VIP ರೇಸಿಂಗ್ ಆವೃತ್ತಿ
ಪ್ರೊಸೆಸರ್: ಈ ಫೋನ್ Adreno GPU ಜೊತೆ ಜೋಡಿಸಲಾದ ಕ್ವಾಲ್ಕಂ ಸ್ನಾಪ್ಡ್ರಾಗನ್ 4 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
RAM ಮತ್ತು ಸಂಗ್ರಹಣೆ: 4GB + 64GB, 4GB RAM + 128GB ಮತ್ತು 6GB + 128GB. 1TB ವರೆಗೆ ಸಂಗ್ರಹಣೆ ವಿಸ್ತರಣೆಗಾಗಿ ಸ್ಮಾರ್ಟ್‌ಫೋನ್ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದೆ.
ಕ್ಯಾಮೆರಾಗಳು: ಪೋಕೋ M6 ಪ್ರೊ 5G ಫೋನ್ 50MP ಪ್ರಾಥಮಿಕ ಸಂವೇದಕವನ್ನು ಮತ್ತು ಹಿಂಭಾಗದಲ್ಲಿ 2MP ಡೆಪ್ತ್ ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್: ಈ ಸ್ಮಾರ್ಟ್‌ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಸಾಫ್ಟ್‌ವೇರ್: ಆಂಡ್ರಾಯ್ಡ್ 13-ಆಧಾರಿತ MIUI 14 ಕಸ್ಟಮ್ ಸ್ಕಿನ್ ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP53 ರೇಟಿಂಗ್ ಮತ್ತು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ